Advertisement

ಅರ್ಪಣಾ ಮನೋಭಾವದಿಂದ ಉತ್ತಮ ಸೇವೆ: ಶಾಸಕ ಅಂಗಾರ

03:40 PM Jun 11, 2018 | |

ಸುಬ್ರಹ್ಮಣ್ಯ: ಸಹಕಾರಿ ಸಂಘಗಳು ದೇಶದ ಆರ್ಥಿಕ ಪ್ರಗತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ರೈತರ ಹಿತ ಕಾಪಾಡುವಲ್ಲಿ ಸಂಘಗಳ ಪಾತ್ರ ಬಹಳಷ್ಟು ಇದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸೇವೆ ಮತ್ತು ಅರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸದಾಗ ಮತ್ತಷ್ಟೂ ಸೇವೆಗಳು ಸಿಗಲು ಸಹಕಾರಿಯಾಗುತ್ತವೆ ಎಂದು ಶಾಸಕ ಎಸ್‌. ಅಂಗಾರ ಹೇಳಿದರು.

Advertisement

ಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅತ್ಯಾಧುನಿಕ ನೆಟ್‌ ಬ್ಯಾಂಕಿಂಗ್‌ ಮತ್ತು ನಿವೃತ್ತ ಕಾರ್ಯ ನಿರ್ವಹಣಾಧಿಕಾರಿ ಎ.ಎಸ್‌.ರಾಘವೇಂದ್ರ ಅವರಿಗೆ ಶುಕ್ರವಾರ ನಡೆದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರು ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನಿರ್ದೇಶಕ, ಯೇನೆಕಲ್ಲು ಪ್ರಾ.ಕೃ.ಪ.ಸಹಕಾರ ಸಂಘದ ಅಧ್ಯಕ್ಷ
ಕೆ.ಎಸ್‌. ದೇವರಾಜ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಐಸಿಐಸಿ ಬ್ಯಾಂಕ್‌ನ ಸಹಯೋಗದಲ್ಲಿ ನೂತನವಾಗಿ ಸಂಘದಲ್ಲಿ ಆರಂಭಗೊಂಡ ನೆಟ್‌ಬ್ಯಾಂಕ್‌ ಸೇವೆ, ಸಂಘದ ನೂತನ ವ್ಯವಸ್ಥಿತ ಸಭಾಂಗಣವನ್ನು ಶಾಸಕ ಅಂಗಾರ ಉದ್ಘಾಟಿಸಿ ಬಳಿಕ ಬೀಳ್ಕೊಡುಗೆ ಹಾಗೂ ಸಮ್ಮಾನ ಸಮಾರಂಭವನ್ನು ಅವರು ಉದ್ಘಾಟಿಸಿದರು.

ಸಮ್ಮಾನ
ಬಳಿಕ ಸುಮಾರು 40 ವರ್ಷಗಳ ಕಾಲ ಸಂಘದಲ್ಲಿ ಸೇವೆ ಸಲ್ಲಿಸಿ ಸಂಘದ ಪ್ರಗತಿಗೆ ಕಾರಣರಾದ ನಿವೃತ್ತ ಕಾರ್ಯ ನಿರ್ವಹಣಾದಿಕಾರಿ ಎ.ಎಸ್‌.ರಾಘವೇಂದ್ರ ಹಾಗೂ ಲತಾ ದಂಪತಿಗಳನ್ನು ಸಹಾಯಕ ನಿಬಂಧಕ ಗೋಪಾಲಯ್ಯ ಸಮ್ಮಾನಿಸಿದರು. ಇವರಿಗೆ ಬಂಗಾರ ಉಂಗುರ, ಸನ್ಮಾನಪತ್ರ, ಫಲ ಪುಷ್ಪ ನೀಡಿ ಗೌರವಿಸಲಾಯಿತು.

ಪತ್ರಕರ್ತ ಹರೀಶ್‌ ಬಂಟ್ವಾಳ್‌ ಅಭಿನಂದನಾ ಭಾಷಣ ಮಾಡಿದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸುಶೀಲಾ ಎಚ್‌., ಪುತ್ತೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಗೋಪಾಲಯ್ಯ, ಐಸಿಐಸಿ ಬ್ಯಾಂಕ್‌ನ ರೀಜನಲ್‌ ಮ್ಯಾನೆಜರ್‌ ಸತೀಶ್‌ ಬಿ.ಆರ್‌. ನಿವೃತ್ತ ಇಒ ಎ.ಎಸ್‌.ರಾಘವೇಂದ್ರ, ಲತಾ ರಾಘವೇಂದ್ರ, ಜೇಸಿ ವಲಯ ಉಪಾಧ್ಯಕ್ಷ ರವಿಕಕ್ಕೆಪದವು, ಯೇನೆಕಲ್ಲು ಶ್ರೀ ಬಚ್ಚನಾಯಕ ಮತ್ತು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಬಾನಡ್ಕ ಮುಖ್ಯಅತಿಥಿಗಳಾಗಿದ್ದರು. ಸಂಘದ ಉಪಾಧ್ಯಕ್ಷ ಎನ್‌.ಕೆ. ಮನೋಹರ ನಾಳ, ನೂತನ ಕಾರ್ಯನಿರ್ವಹಣಾಧಿಕಾರಿ ಬಿ. ಶಿವರಾಮ್‌, ನಿರ್ದೇಶಕರಾದ ಲೀಲಾವತಿ ಉಪ್ಪಳಿಕೆ, ಕೆ.ವಿ. ವೆಂಕಟ್ರಮಣ ಕೆಂಬ್ರೋಳಿ,
ಅನಿತಾ ಪುಂಡಿಗದ್ದೆ, ದಯಾನಂದ ಕುಕ್ಕಪ್ಪನಮನೆ, ಪೂರ್ಣಚಂದ್ರ ತುಂಬತ್ತಾಜೆ, ಭಾಸ್ಕರ ಪೂಜಾರಿ ಉಜಿರ್‌ಕೋಡಿ, ಪೆರ್ನ ಪದ್ನಡ್ಕ, ಸಂಘದ ಮೇಲ್ವಿಚಾರಕ ಮನೋಜ್‌ ಮಾಣಿಬೈಲು ಉಪಸ್ಥಿತರಿದ್ದರು.

Advertisement

ಎನ್‌.ಕೆ. ಮನೋಹರ ನಾಳ ಸ್ವಾಗತಿಸಿದರು. ಸಂಘದ ಬಿ. ಶಿವರಾಮ್‌ ವಂದಿಸಿದರು. ಭರತ್‌ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯರು, ಇತರ ಸಹಕಾರ ಸಂಘಗಳು ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗಳು, ಸದಸ್ಯರು, ರೈತರು ಮತ್ತು ಹಿರಿಯ ನಿರ್ದೇಶಕರು, ಸಿಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next