Advertisement
ರಾಜಧಾನಿ ಸನಾದಲ್ಲಿ ಕಾರ್ಯಾಚರಿಸುತ್ತಿರುವ ಆ ಹೊಟೇಲ್ ಕುರಿತು ಮಾಹಿತಿ ಕಲೆ ಹಾಕುತ್ತಿದ್ದು, ಘಟನೆ ತಿಳಿಯುತ್ತಿದ್ದಂತೆ ತತ್‌ಕ್ಷಣ ಸಾಂಕ್ರಾಮಿಕ ರೋಗಶಾಸ್ತ್ರೀಯ ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿರುವುದಾಗಿ ಹೌತಿ ಸರಕಾರದ ಪ್ರತಿನಿಧಿ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ ಎಂದು ಅಲ್‌ಜಜೀರಾ ವರದಿ ಮಾಡಿದೆ.
ಅರೇಬಿಯನ್ ಪೆನಿನ್ಸುಲಾದ ಭಾಗದಲ್ಲಿರುವ ಯೆಮೆನ್, ಆಫ್ರಿಕಾ ಮತ್ತಿತ್ತರ ಪ್ರದೇಶಗಳಿಂದ ವಲಸೆ ಬರುವ ಕಾರ್ಮಿಕರಿಗೆ ಮತ್ತು ನಿರಾಶ್ರಿತರಿಗೆ ಒಂದು ಆಶ್ರಯ ತಾಣವಾಗಿದೆ. ಈ ಪ್ರದೇಶ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಎಪ್ರಿಲ್ 10 ರಂದು ತನ್ನ ಮೊದಲ ಕೋವಿಡ್-19 ಸೋಂಕು ಪ್ರಕರಣವನ್ನು ಪ್ರಕಟಿಸಿದ ಕೆಲ ರಾಷ್ಟ್ರಗಳ ಪೈಕಿ ಯೆಮೆನ್ ಕೂಡ ಒಂದಾಗಿದ್ದು,, ಪ್ರತ್ಯೇಕ ಆಡಳಿತವನ್ನು ನಡೆಸುತ್ತಿರುವವ ಏಡನ್ ಪ್ರದೇಶ ಸೇರಿ ಒಟ್ಟು 21 ಪ್ರಕರಣಗಳು ಇದುವರೆಗೆ ದಾಖಲಾಗಿವೆ. ಈ ಪೈಕಿ ಮೂವರು ಮೃತಪಟ್ಟಿದ್ದಾರೆ. ಹೌತಿ ಪ್ರದೇಶದ ವ್ಯಾಪ್ತಿಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಆ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆ.