Advertisement

ಯೆಮನ್‌ : ರಮ್ಜಾನ್‌ ಹಬ್ಬದ ಮೇಲೆ ಕೋವಿಡ್‌ ಕರಿನೆರಳು

04:01 PM May 15, 2020 | sudhir |

ಯೆಮನ್‌: ರಮ್ಜಾನ್‌ ಹಬ್ಬಕ್ಕೆ ಈ ಬಾರಿ ಕೋವಿಡ್‌ ವೈರಸ್‌ ತಣ್ಣೀರೆರಚಿದೆ. ಈ ವರ್ಷ ಯೆಮನ್‌ನಲ್ಲಿ ಹಬ್ಬದ ಯಾವ ಸಂಭ್ರಮವೂ ಕಾಣಿಸುತ್ತಿಲ್ಲ. ಹೌತಿ ಬಂಡಾಯಗಾರರ ನಿಯಂತ್ರಣದಲ್ಲಿರುವ ರಾಜಧಾನಿ ಸನಾದಲ್ಲಿ ಜನರು ಒಂದೆಡೆ ಬಂಡುಕೊರರ ದಾಳಿಯ ಭೀತಿ ಇನ್ನೊಂದೆಡೆ ಸೋಂಕು ತಗಲುವ ಭಯ. ಕೋವಿಡ್‌ನಿಂದಾಗಿ ಜನರು ಹಣವಿಲ್ಲದೆ ದಿಕ್ಕೆಟ್ಟುಹೋಗಿದ್ದಾರೆ. ಹಣವೂ ಇಲ್ಲ ಜತೆಗೆ ಈಗ ಕೋವಿಡ್‌ ವೈರಸ್‌ ಕಾಟದಿಂದ ಆರೋಗ್ಯ ರಕ್ಷಣೆಯೂ ಇಲ್ಲ.

Advertisement

ಕುಟುಂಬದೊಂದಿಗೆ ಸಾಂಪ್ರದಾಯಿಕ ಇಫ್ತಾರ್‌ ಆಚರಿಸಲು ಸಾಧ್ಯವಾಗದಿ ರುವುದು ಜನರನ್ನು ನಿರಾಶೆಗೊಳಿಸಿದೆ.
ಐದು ವರ್ಷಗಳ ಯುದ್ಧ ಯೆಮನ್‌ನಲ್ಲಿ ಅತ್ಯಂತ ದುರಂತಗಳ ಸರಮಾಲೆಯನ್ನೇ ಸೃಷ್ಟಿಸಿದೆ. ಕಳೆದ ತಿಂಗಳು ಸೌದಿ ಅರೇಬಿಯ ಘೋಷಿಸಿದ ಏಕಪಕ್ಷೀಯ ಕದನ ವಿರಾಮದ ಹೊರತಾಗಿಯೂ ಹೋರಾಟ ಮುಂದುವರಿದೆ. ಒಂದು ಕಡೆ ಹಿಂಸಾಚಾರ ಹೆಚ್ಚಾಗಿದ್ದು, ಜನರು ಆರ್ಥಿಕವಾಗಿ ದಿವಾಳಿಯಾಗಿದ್ದಾರೆ. ಈ ನಡುವೆ ಕೋವಿಡ್‌ -19 ತೀವ್ರವಾಗಿ ಕಾಡುತ್ತಿದ್ದು, ಜನರು ಹಬ್ಬದ ಸಂಭ್ರಮವನ್ನೇ ಮರೆತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ರಾಜಕೀಯ ಅಸ್ಥಿರತೆಯಿರುವ ಯೆಮನ್‌ನಲ್ಲಿ ಕೋವಿಡ್‌ಗೆ ಕನಿಷ್ಠ 42 ಸಾವಿರ ಜನರು ಬಲಿಯಾಗಬಹುದು ಎಂದು ಅಂದಾಜಿಸಿತ್ತು. ಆದರೆ ಪರಿಸ್ಥಿತಿ ಅಷ್ಟು ಹದಗೆಟ್ಟಿಲ್ಲ. ಇಲ್ಲಿಯವರೆಗೆ 65 ಪ್ರಕರಣಗಳನ್ನು ಮಾತ್ರ ವರದಿ ಮಾಡಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. ಸನಾದಲ್ಲಿನ ಹೌತಿ ಬಂಡುಕೋರರಲ್ಲಿ ಕೇವಲ ಎರಡು ಪ್ರಕರಣಗಳು ಪತ್ತೆಯಾಗಿವೆ.

ಎಪ್ರಿಲ್‌ ಬಳಿಕ ಭಾರೀ ಮಳೆಯಾಗಿದ್ದು ವ್ಯಾಪಕ ಪ್ರವಾಹವಾಗಿದೆ. ಜತೆಗೆ ಕಾಲರಾ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ. ಇದುವರೆಗೆ 1.10 ಲಕ್ಷ ಮಂದಿಯಲ್ಲಿ ಕಾಲರಾ ಕಾಣಿಸಿಕೊಂಡಿದೆ. ಹೌತಿಗಳ ಪಾರುಪತ್ಯ ಹೆಚ್ಚಾಗುತ್ತಿರುವ ಕಾರಣ ವಿಶ್ವಸಂಸ್ಥೆಯ ಕಾರ್ಯಕ್ರಮಗಳಿಗೆ ನೀಡುತ್ತಿತ್ತ ಹಣಕಾಸಿನ ನೆರವನ್ನು ಅಮೆರಿಕ ಕಡಿತಗೊಳಿಸಿದೆ. ಶೇ. 80ರಷ್ಟು ಜನರು ಸಹಾಯವನ್ನು ಅವಲಂಬಿಸಿದ್ದರು. ಉದಾಹರಣೆಗೆ, ವಿಶ್ವ ಆಹಾರ ಕಾರ್ಯಕ್ರಮದ ಭಾಗವಾಗಿ ವಿಶ್ವಸಂಸ್ಥೆಯ ಅಂಗಸಂಸ್ಥೆಯು ಹೌತಿ ಪ್ರದೇಶಗಳಲ್ಲಿ 9.6 ಮಿಲಿಯನ್‌ ಯೆಮನ್‌ ಪ್ರಜೆಗಳಿಗೆ ಆಹಾರವನ್ನು ನೀಡುತ್ತಿದೆ. ಆದರೆ ಈಗ ಅದರ ಸಂಖ್ಯೆ ಅರ್ಧಕ್ಕೆ ಇಳಿದಿದೆ. ಸುಮಾರು 1 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ.

ವೈದ್ಯಕೀಯ ಸೌಲಭ್ಯಗಳು ಕಾರ್ಯರೂಪಕ್ಕೆ ಬಂದಿಲ್ಲ. ಆರ್ಥಿಕ ಸಂಕಷ್ಟದಿಂದ ಗರ್ಭಿಣಿಯರಿಗೆ ನೆರವಾಗುವ 140 ಆರೋಗ್ಯ ಕೇಂದ್ರಗಳನ್ನು ಮುಚ್ಚಲು ಒತ್ತಾಯಿಸಲಾಗಿದೆ. ಇದು ಜಾರಿಯಾದರೆ ಸುಮಾರು 48,000 ಗರ್ಭಿಣಿಯರು ಪ್ರಸೂತಿ ಸಮಸ್ಯೆಗಳಿಂದ ಸಾವನ್ನಪ್ಪಲಿದ್ದಾರೆ.

Advertisement

ಯೆಮನ್‌ನ ಹೆಚ್ಚಿನ ಆಸ್ಪತ್ರೆಗಳು ಹೌತಿ ಬಂಡುಕೋರರ ಜತೆಗಿನ ಹೋರಾಟದ ಪರಿಣಾಮವಾಗಿ ನಾಶವಾಗಿವೆ ಇಲ್ಲವೆ ಮುಚ್ಚಿವೆ. ಈ ದೇಶದ ಜನರಿಗೆ ಈಗ ಏನಿದ್ದರೂ ವಿಶ್ವಸಂಸ್ಥೆಯೊಂದೇ ಅಭಯದಾತ.

ಸಶಕ್ತ ಸರಕಾರವಿಲ್ಲ
ಯೆಮನ್‌ನಲ್ಲಿ ಇಲ್ಲಗಳ ಸರಮಾಲೆಯೇ ಇದೆ. ಎಲ್ಲ ಬಿಟ್ಟು ಇಂಥ ಬಿಕ್ಕಟ್ಟನ್ನು ಎದುರಿಸಲು ಸಶಕ್ತವಾಗಿರುವ ಒಂದು ಸರಕಾರವೂ ಅಲ್ಲಿಲ್ಲ. ಈ ಸ್ಥಿತಿಗೆ ಕಾರಣ ವರ್ಷಾನುಗಟ್ಟಲೆ ಅದು ಹೌತಿ ಬಂಡುಕೋರರ ಜತೆ ನಡೆಸಿದ ಉಗ್ರ ಕಾಳಗ. ಈ ಕಾಳಗದಿಂದ ಯೆಮನ್‌ನ ಆರೋಗ್ಯ ವಲಯ ಸಂಪೂರ್ಣ ನೆಲ ಕಚ್ಚಿದೆ. ಕೋವಿಡ್‌ ಬಿಡಿ, ಸರಿಯಾದ ಒಂದು ಜ್ವರಕ್ಕೆ ಚಿಕಿತ್ಸೆ ನೀಡುವಷ್ಟು ಒಳ್ಳೆಯ ಆಸ್ಪತ್ರೆಯೂ ಅಲ್ಲಿಲ್ಲ. ಹೀಗೆ ಯಾವ ವೈದ್ಯಕೀಯ ಸೌಲಭ್ಯವೂ ಇಲ್ಲದಿರುವುದರಿಂದ ಜನತರು ಭಯಭೀತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next