Advertisement
ಎಲ್ಲೆಲ್ಲಿ ತೀವ್ರ ಚಳಿ?ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರಪ್ರದೇಶ, ಗುಜರಾತ್ ಮತ್ತು ಉತ್ತರ ರಾಜಸ್ಥಾನದ ಕೆಲವು ಭಾಗಗಳಲ್ಲಿ ಮುಂದಿನ 5 ದಿನಗಳ ಕಾಲ ಚಳಿಗಾಳಿ ಬೀಸಲಿದೆ. ವಾಯವ್ಯ ಭಾರತದ ಬಹುತೇಕ ಭಾಗಗಳಲ್ಲಿ ತಾಪಮಾನವು 2ರಿಂದ 4 ಡಿ.ಸೆ.ನಷ್ಟು ಇಳಿಯಲಿದೆ ಎಂದೂ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಬಹುತೇಕ ಭಾಗಗಳಲ್ಲಿ ಚಳಿಗಾಳಿಯ ತೀವ್ರತೆ ಹೆಚ್ಚಾಗಿದ್ದು, ಶ್ರೀನಗರದಲ್ಲಿ ಶುಕ್ರವಾರ ರಾತ್ರಿ ಮೈನಸ್ 6 ಡಿ.ಸೆ. ತಾಪಮಾನ ದಾಖಲಾಗಿದೆ. ಈ ಋತುವಿನಲ್ಲಿ ಇಷ್ಟೊಂದು ಕನಿಷ್ಠ ತಾಪಮಾನ ದಾಖಲಾಗಿದ್ದು ಇದೇ ಮೊದಲು. ಕಳೆದ 10 ವರ್ಷಗಳಲ್ಲಿ ತಾಪಮಾನವು ಮೈನಸ್ 6 ಡಿ.ಸೆ.ಗೆ ತಲುಪಿದ್ದು ಇದು 4ನೇ ಬಾರಿ. ಶೀತಗಾಳಿಯಿಂದಾಗಿ ನೀರಿನ ಪೈಪ್‌ಲೆನ್‌ಗಳಲ್ಲಿ ನೀರು ಹೆಪ್ಪುಗಟ್ಟಿದ್ದು, ಜನಜೀವನ ಅಸ್ತವ್ಯಸ್ತವಾಗತೊಡಗಿದೆ. ಸರೋವರಗಳ ನೀರು ಕೂಡ ಮಂಜುಗಡ್ಡೆಯ ರೂಪ ತಾಳುತ್ತಿದೆ.