ಯಲ್ಲಾಪುರ: ಮೂತ್ರ ವಿಸರ್ಜನೆಗೆ ನಿಂತಿದ್ದ ಸಂದರ್ಭದಲ್ಲಿ ಕಣ್ಣಿಗೆ ಖಾರಾಪುಡಿ ಎರಚಿ ವ್ಯಕ್ತಿಯ ಕಿಸೆಯಲ್ಲಿದ್ದ ಹಣ ಮತ್ತು ಆತನ ಸ್ಕೂಟಿಯನ್ನು ದರೋಡೆ ಮಾಡಿದ್ದ ಎಲ್ಲಾ ಆರೋಪಿಗಳನ್ನು ಇಲ್ಲಿಯ ಪೋಲಿಸರು ಬಂಧಿಸಿದ ಘಟನೆ ನ.21ರ ಗುರುವಾರ ನಡೆದಿದೆ.
ಮೀರ್ ಅದಂ, ಮೀರ್ ಮುನಾಫ್ ಕಾಳಮ್ಮನಗರ, ರವಿ ನಾರಾಯಣ ಸಿದ್ದಿ, ಕಾಳಮ್ಮನಗರ, ಮಹಮ್ಮದ ರಿಜ್ವಾನ್ ಮೆಹಬೂಬ್ ಬಿಜಾಪುರ ಕಾಳಮ್ಮನಗರ, ಜಹೀರುದ್ದಿನ್ ಜೈರೋದಸ್ತಗಿರಿ ಖಾದರಬಾಯಿ ಕಾಳಮ್ಮನಗರ ಹಾಗೂ ದೇಹಳ್ಳಿಯ ನಾಗೇಂದ್ರ ಬಾಬು ಸಿದ್ದಿ ಇವರುಗಳನ್ನು ಪೋಲಿಸರು ಬಂಧಿಸಿದ್ದಾರೆ.
ಶಿರಸಿಯ ಬನವಾಸಿ ರಸ್ತೆಯ ನಿವಾಸಿ ಅಕ್ತರ್ ಸಲೀಂ ಗಂಗೊಳ್ಳಿ ಎಂಬಾತ ಕಿರವತ್ತಿ ಕಟ್ಟಿಗೆ ಡಿಪೋದಿಂದ ಕಟ್ಟಿಗೆ ಮಾರಿದ ಹಣ ಪಡೆದುಕೊಂಡು ಸ್ಕೂಟಿಯಲ್ಲಿ ಹೋಗುತ್ತಿದ್ದು ಪಟ್ಟಣ ಸಮೀಪದ ಶಿರಸಿ ರಸ್ತೆಯ ಹಲಸ್ಕಂಡ ಕ್ರಾಸ್ ಬಳಿ ಸ್ಕೂಟಿ ನಿಲ್ಲಿಸಿ ಮೂತ್ರವಿಸರ್ಜನೆಗೆ ನಿಂತಾಗ ಈ ಘಟನೆ ನಡೆದಿದೆ.
ಎರಡು ಬೈಕ್ ಗಳಲ್ಲಿ ಬಂದ 5-6 ಜನ ಈತನಿಗೆ ಖಾರದಪುಡಿ ಎರಚಿ ಕಿಸೆಯಲ್ಲಿದ್ದ 50 ಸಾವಿರ ರೂ. ಹಾಗೂ ಸ್ಕೂಟಿ ದರೋಡೆಗೈದರು.
ಪ್ರಕರಣದ ಬಳಿಕ ಬಲೆ ಬೀಸಿದ ಪೋಲಿಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ 3 ಸ್ಕೂಟಿಗಳನ್ನು ವಶಕ್ಕೆ ಪಡೆದಿದ್ದಾರೆ. 25 ಸಾವಿರ ರೂ. ನಗದು ದೊರೆತಿದ್ದು, ಉಳಿದ 25 ಸಾವಿರ ರೂ. ಈ ದರೋಡೆಕೋರರು ಮೋಜು-ಮಸ್ತಿಗಾಗಿ ಖರ್ಚು ಮಾಡಿದ್ದಾರೆನ್ನಲಾಗಿದೆ. ಈ ದರೋಡೆ ಪ್ರಕರಣ ಆತಂಕ ಸೃಷ್ಟಡಿಸಿದೆ.
ಆದರೆ ದರೋಡೆಕೋರರು ಸ್ಥಳಿಯರೇ ಆಗಿದ್ದು, ಇವರ ಹಿಂದೆ ಇನ್ನಷ್ಟು ಜಾಲ ಇದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.