Advertisement

ನಾಳೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ

08:29 PM May 16, 2018 | Karthik A |

ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಗುರುವಾರ ಬೆಳಿಗ್ಗೆ 9.00ಕ್ಕೆ ಸರಿಯಾಗಿ ಬಿ.ಎಸ್‌. ಯಡಿಯೂರಪ್ಪ ಆವರು ಭಾರತೀಯ ಜನತಾ ಪಕ್ಷದಿಂದ ಕರ್ನಾಟಕದ 23ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

Advertisement

ಈ ಬಾರಿಯ ವಿಧಾನಸಭಾ ಚುನಾವಣಾ ಫ‌ಲಿತಾಂಶದಲ್ಲಿ 104 ಸ್ಥಾನಗಳನ್ನು ಗೆಲ್ಲುವ ಮೂಲಕ ಆತೀದೊಡ್ಡ ಪಕ್ಷವಾಗಿ ಮೂಡಿಬಂದಿರುವ ಭಾರತೀಯ ಜನತಾ ಪಕ್ಷವನ್ನು ಸರಕಾರ ರಚಿಸುವಂತೆ ಮಾನ್ಯ ರಾಜ್ಯಪಾಲರು ಆಹ್ವಾನ ನೀಡಿರುವ ವಿಷಯವನ್ನು ಅವರ ಅದೇಶ ಪ್ರತಿಯೊಂದಿಗೆ ಕರ್ನಾಟಕದಲ್ಲಿ ಬಿ.ಜೆ.ಪಿ. ಉಸ್ತುವಾರಿಯಾಗಿರುವ ಮುರಳೀಧರ ರಾವ್‌ ಅವರು ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದರು. ಇನ್ನು ಬಿ.ಜೆ.ಪಿ.ಗೆ ಅಗತ್ಯವಿರುವ ಬಹುಮತವನ್ನು ಸಾಬೀತುಪಡಿಸಲು 15 ದಿನಗಳ ಕಾಲಾವಕಾಶವನ್ನೂ ಸಹ ರಾಜ್ಯಪಾಲರು ತನ್ನ ಆದೇಶದಲ್ಲಿ ನೀಡಿದ್ದಾರೆ. ಗುರುವಾರದಂದು ಯಡಿಯೂರಪ್ಪ ಅವರು ಮಾತ್ರವೇ ಪ್ರಮಾಣವಚನ ಸ್ವೀಕರಿಸಲಿದ್ದು, ಸದನದಲ್ಲಿ ಬಹುಮತವನ್ನು ಸಾಬೀತುಗೊಳಿಸಿದ ಬಳಿವಷ್ಟೇ ಪೂರ್ಣಪ್ರಮಾಣದ ಸಂಪುಟ ವಿಸ್ತರಣೆಯನ್ನು ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುರಳೀಧರ ರಾವ್‌ ಅವರು ತಿಳಿಸಿದರು.


ಈ ಕುರಿತಾಗಿ ರಾಜ್ಯಪಾಲರ ಆದೇಶವನ್ನು ಅನುಸರಿಸಿ ಗುಪ್ತಚರ ಇಲಾಖೆಯ ಪೊಲೀಸ್‌ ಮಹಾನಿರ್ದೇಶಕರು ಬೆಂಗಳೂರು ನಗರ, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡ ಮತ್ತು ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ತುರ್ತು ಪತ್ರವೊಂದನ್ನು ಬರೆದಿದ್ದು, ಅದರಂತೆ, ಬಾರತೀಯ ಜನತಾ ಪಕ್ಷಕ್ಕೆ ನೂತನ ಸರಕಾರವನ್ನು ರಚಿಸಲು ಆಹ್ವಾನವನ್ನು ನೀಡಿರುವ ಹಿನ್ನಲೆಯಲ್ಲಿ, ಗುರುವಾರ ಬೆಳಿಗ್ಗೆ ಬಿ.ಎಸ್‌. ಯಡಿಯೂರಪ್ಪ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮ ಆಯೋಜನೆಗೊಂಡಿರುವುದರಿಂದ ಪ್ರಮಾಣವಚನ ಸ್ವೀಕರಿಸುವ ಸ್ಥಳದಲ್ಲಿ ಮತ್ತು ವಿಧಾನಸೌಧ ಹಾಗೂ ರಾಜ್ಯಾದ್ಯಂತ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳುವಂತೆ ಈ ಪತ್ರದಲ್ಲಿ ಸೂಚಿಸಲಾಗಿದೆ.

ಟ್ವೀಟ್ ಮಾಡಿದರು ಬಳಿಕ ತೆಗೆದು ಹಾಕಿದರು


ಪ್ರಾರಂಭದಲ್ಲಿ ಈ ಸಂಬಂಧ ರಾಜ್ಯಪಾಲರ ಆದೇಶದ ಪ್ರತಿ ಹೊರಬಿದ್ದಿಲ್ಲವಾದರೂ, ಬಿಜೆಪಿ ನಾಯಕ ಸುರೇಶ್‌ ಕುಮಾರ್‌ ಅವರು ಈ ಕುರಿತಾಗಿ ತನ್ನ ಟ್ವಿಟರ್‌ ಆಕೌಂಟ್‌ ನಲ್ಲಿ ಪೋಸ್ಟ್‌ ಹಾಕಿದ್ದು, ಇದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಸುರೇಶ್‌ ಕುಮಾರ್‌ ಅವರು ತಮ್ಮ ಈ ಟ್ವೀಟ್‌ ಅನ್ನು ತೆಗೆದು ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next