Advertisement

Yediyurappa 82 ವರ್ಷ ವಯಸ್ಸಿನಲ್ಲಿ ಬೇಕಿತ್ತಾ?:ಕೆಂಡಾಮಂಡಲವಾದ ಸಿಎಂ ಸಿದ್ದರಾಮಯ್ಯ

12:03 PM Aug 07, 2024 | Team Udayavani |

ಮೈಸೂರು: ‘ನ್ಯಾಯಾಲಯದ ದಯೆಯಿಂದ ಯಡಿಯೂರಪ್ಪ ಬದುಕಿದ್ದಾರೆ.ಇಲ್ಲವಾದರೇ ಯಡಿಯೂರಪ್ಪ ಜೈಲಲ್ಲಿ ಇರಬೇಕಿತ್ತು’ ಎಂದು ಸಿಎಂ ಸಿದ್ದರಾಮಯ್ಯ ಬುಧವಾರ (ಆಗಸ್ಟ್ 7) ಕಿಡಿ ಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ‘ಪಾದ ಯಾತ್ರೆ ಮುಗಿಯುವಷ್ಟರಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ’ ಎನ್ನುವ ಹೇಳಿಕೆ ಕುರಿತು ಕಿಡಿ ಕಾರಿ ”ಯಡಿಯೂರಪ್ಪ ಮೇಲೆ ಪೋಕ್ಸೊ ಕೇಸ್ ಇದೆ. ನ್ಯಾಯಾಲಯದ ದಯೆಯಿಂದ ಯಡಿಯೂರಪ್ಪ ಬದುಕಿದ್ದಾರೆ.ಇಲ್ಲವಾದರೇ ಯಡಿಯೂರಪ್ಪ ಜೈಲಲ್ಲಿ ಇರಬೇಕಿತ್ತು.82 ವರ್ಷ ವಯಸ್ಸಿನಲ್ಲಿ ಇದು ಬೇಕಿತ್ತಾ? ಚಿಕ್ಕ ಮಗುವಿನ ಮೇಲೆ ಈ ರೀತಿ ಮಾಡಬೇಕಿತ್ತಾ? ನನ್ನ ಬಗ್ಗೆ ಮಾತನಾಡುವುದ್ದಕ್ಕೆ ಯಡಿಯೂರಪ್ಪ ಅವರಿಗೆ ಯಾವ ನೈತಿಕತೆ ಇದೆ? ಯಡಿಯೂರಪ್ಪ ರಾಜಕೀಯ ಜೀವನದಿಂದ ನಿವೃತ್ತಿಯಾಗಬೇಕಿತ್ತು’ ಎಂದು ಕಿಡಿ ಕಾರಿದರು.

ಮುಡಾದಲ್ಲಿ ಬದಲಿ ಭೂಮಿ ಪಡೆದಿರುವ ವಿಚಾರ‌ಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ ‘ಬದಲಿ ಭೂಮಿ ಕೊಡುವುದು ಬೇಡ ಎಂದು ನಾನು ಹೇಳಿದ್ದೆ.ನನ್ನ ಪತ್ನಿ ಬದಲಿ ನಿವೇಶನಕ್ಕೆ ಅರ್ಜಿ ಕೊಟ್ಟಾಗ ನಾನು ಸಿಎಂ ಆಗಿದ್ದೆ.ನಾನು ಸಿಎಂ ಆಗಿರುವ ತನಕ ಕೊಡಬೇಡಿ ಎಂದಿದ್ದೆ.ಪ್ರಭಾವ ಬಳಸುವುದಿದ್ದರೇ ಅಂದೇ ಬಳಸಿ ಭೂಮಿ ಕೊಡಲು ಹೇಳುತ್ತಿದ್ದೆ. ಸಿಎಂ ಆಗಿ ಕೊಡಲು ಆಗಿತ್ತಿರಲಿಲ್ಲವೇ?.ನನ್ನ ಪತ್ನಿ 2021ರಲ್ಲ ಅರ್ಜಿ ಹಾಕಿದ್ದು, ಬಿಜೆಪಿ ಸರ್ಕಾರ ಕಾನೂನಾತ್ಮಕವಾಗಿ ಭೂಮಿ ನೀಡಿದೆ.ಮುಡಾ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ, ಪ್ರಭಾವ ಬಳಸಿಲ್ಲ’ ಎಂದರು.

‘ಯಡಿಯೂರಪ್ಪ ಜೈಲಿಗೆ ಹೋಗಿದ್ದ ಪ್ರಕರಣವೇ ಬೇರೆ, ಇದೇ ಬೇರೆ. ಯಡಿಯೂರಪ್ಪ ಡಿನೋಟಿಫೈ ಮಾಡಿದ್ದರು., ಚೆಕ್ ಮೂಲಕ ಹಣ ಪಡೆದಿದ್ದರು.ಇಲ್ಲಿ ನಾನು ಯಾವುದೇ ಹಣ ಪಡೆದಿಲ್ಲ, ಪ್ರಭಾವ ಬೀರಿಲ್ಲ’ ಎಂದರು.

”ಇಂದು ಬೇಡ ಮೈಸೂರು ಸಮಾವೇಶದಲ್ಲಿ ಎಲ್ಲವನ್ನೂ ಬಿಚ್ಚಿಡುತ್ತೇನೆ. ಬಿಜೆಪಿ-ಜೆಡಿಎಸ್ ಸರ್ಕಾರದ ಅವಧಿಯ ಎಲ್ಲ ಹಗರಣಗಳನ್ನ ಬಿಚ್ಚಿಡುತ್ತೇನೆ.ಜೆಡಿಎಸ್- ಬಿಜೆಪಿ ಏನೆಲ್ಲ ಹಗರಣಗಳನ್ನ ಮಾಡಿದ್ದಾರೆ. ಎಲ್ಲವನ್ನೂ ಸಂಪೂರ್ಣವಾಗಿ ಸಮಾವೇಶದಲ್ಲಿ ತೆರೆದಿಡುತ್ತೇನೆ’ ಎಂದು ಕಿಡಿ ಕಾರಿದರು.

Advertisement

‘ಸುಳ್ಳುಗಳನ್ನ ಹೆದುರಿಸುವ ತಾಖತ್ತು ನನಗೆ ಇದೆ.ಇವರ ಸುಳ್ಳುಗಳಿಗೆ ನಾನು ಹೆದರುವುದಿಲ್ಲ.ಬಿಜೆಪಿಯವರದ್ದೇ ಭ್ರಷ್ಟ ಸರ್ಕಾರ.ಅವರದ್ದೇ ಹಗರಣಗಳ ಬಗ್ಗೆ ತನಿಖೆ ನಡೆಯುತ್ತಿದೆ.ಅಪರೇಷನ್ ಕಮಲದ ಮೂಲಕ ಸರ್ಕಾರ ದುರ್ಬಲಗೊಳಿಸಲು ಯತ್ನ ಮಾಡಿದ್ದರು. ಅಪರೇಷನ್ ಕಮಲ ವಿಫಲವಾದ ಹಿನ್ನಲೆಯಲ್ಲಿ ಬಿಜೆಪಿ- ಜೆಡಿಎಸ್ ನವರು ನನ್ನನ್ನ ಟಾರ್ಗೆಟ್ ಮಾಡಿ ಸರ್ಕಾರವನ್ನ ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರ.ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ.ಜನ ಇವರ ಸುಳ್ಳನ್ನ ನಂಬುವುದಿಲ್ಲ.ಹಿಂದೆಯೂ ಈ ಪ್ರಯತ್ನ ಮಾಡಿದ್ದರು’ ಎಂದರು.

‘ರಾಜ್ಯಪಾಲರಿಂದ ನನಗೆ ಬಂದಿರುವುದು ಒಂದೇ ನೋಟಿಸ್.ಅದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ.ಮುಖ್ಯಕಾರ್ಯದರ್ಶಿಗಳು ರಾಜ್ಯಪಾಲರನ್ನ ಭೇಟಿ ಮಾಡಿದ್ದು ಬೇರೆ ವಿಚಾರಕ್ಕೆ. ನನ್ನ ನೋಟಿಸ್ಗೂ ಮುಖ್ಯಕಾರ್ಯದರ್ಶಿಗಳ ಭೇಟಿಗೂ ಯಾವುದೇ ಸಂಬಂಧವಿಲ್ಲ.ಹೊಸದಾಗಿ ನೇಮಕಗೊಂಡ ಹಿನ್ನಲೆ ರಾಜ್ಯಪಾಲರನ್ನ ಭೇಟಿಯಾಗಿದ್ದಾರೆ. ನೋಟಿಸ್ ವಿಚಾರವಾಗಿ ಈಗಾಗಲೇ ಉತ್ತರ ಕೊಟ್ಟಿದ್ದೇವೆ‌. ಸಚಿವ ಸಂಪುಟದಿಂದಲೂ ಉತ್ತರ ನೀಡಲಾಗಿದೆ.ಕಾನೂನಾತ್ಮಕ ರಾಜ್ಯಪಾಲರು ಒಪ್ಪಿಕೊಳ್ಳಬೇಕು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next