Advertisement
ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದಾದ್ಯಂತ ಪ್ರವಾಸ ಮಾಡಿ ಕಳೆದ 40 ವರ್ಷಗಳಿಂದ ಬಿಜೆಪಿ ಪಕ್ಷವನ್ನು ಸಂಘಟಿಸುತ್ತಾ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದಿದ್ದಾರೆ. ಈಗಲೂ ಬಿ.ಎಸ್ ಯಡಿಯೂರಪ್ಪ ಅವರು ಪ್ರವಾಸಗೈದು ಪಕ್ಷ ಸಂಘಟಿಸಲಿದ್ದಾರೆ. ಸಾಮೂಹಿಕವಾಗಿ ಚುನಾವಣೆ ಎದುರಿಸಿ ಪಕ್ಷ ಮತ್ತೆ ಅಧಿಕಾರಕ್ಕೆ ತರಲಾಗುವುದು ಎಂದರು.
Related Articles
ನವರಾತ್ರಿಯ ಶುಭಸಂದರ್ಭದಲ್ಲಿ ಪಿಎಫ್ಐ ನಿಷೇಧ ಮುಖಾಂತರ ಅತ್ಯುತ್ತಮ ನಿರ್ಧಾರ ಕೈಗೊಂಡಿದೆ. ಕಳೆದ ಹಲವಾರು ವರ್ಷಗಳಿಂದ ಪಿಎಫ್ ಐ ರಾಷ್ಟ್ರವಿರೋಧಿ ಚಟುವಟಿಕೆ ನಡೆಸಿಕೊಂಡು ಬಂದಿದೆ. ಅದರಲ್ಲೂರಾಜ್ಯದ ಹಾಗೂ ದೇಶದಲ್ಲಿ ಕೋಮು ಸೌಹಾರ್ದ ಕದಡುವ ಕೆಲಸ ಮಾಡಿದೆ. ಒಂದು ಧರ್ಮದ ಯುವಕರನ್ನ ಅಡ್ಡದಾರಿಗೆ ತೆಗೆದುಕೊಂಡು ಹೋಗುವ ಕೆಲಸ ಪಿಎಫ್‌ಐ ಮಾಡಿದೆ. ಹತ್ಯೆ ಪ್ರಕರಣ ಸೇರಿದಂತೆ ಅನೇಕ ಕೃತ್ಯಗಳನ್ನ ಎಸಗಿದೆ. ಪಿಎಫ್‌ಐ ಕಾಂಗ್ರೆಸ್ ಪಕ್ಷದ ಪಾಪದ ಕೂಸು. ಇದನ್ನ ಸದೆಬಡೆಯುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ ಎಂದರು.
Advertisement
ಕೆ.ಜೆ ಹಳ್ಳಿ/ಡಿ.ಜೆ ಹಳ್ಳಿ ಯಲ್ಲಿ ಕಾಂಗ್ರೆಸ್ ಶಾಸಕನ ಮನೆಗೆ ಬೆಂಕಿ ಹಚ್ಚಿರುವ ಪ್ರಕರಣದಲ್ಲಿ ಪಿಎಫ್‌ಐ ಪಾತ್ರ ಎಷ್ಟರ ಮಟ್ಟಿಗೆ ಇತ್ತು ಅನ್ನೊದು ಗೋತ್ತಾಗಿದೆ. ಆದರೆ ಕಾಂಗ್ರೆಸ್‌ನ ಕೆಲ ಹಿರಿಯರು ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಅನ್ನುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರ ಹೇಳಿಕೆ ಮೂರ್ಖತನದ ಪರಮಾವಧಿಯಾಗಿದೆ. ಆರ್‌ಎಸ್‌ಎಸ್ ಅಂದರೆ ದೇಶ ಸಂಘಟನೆ ಮಾಡುವುದು ಎಂದರು.
ಸಿಎಂ ಬೊಮ್ಮಾಯಿಯವರು ಬಿಎಸ್‌ವೈ ಕೊಟ್ಟ ಕಾರ್ಯಕ್ರಮ ಮುಂದುವರಿಸಿಕೊಂಡು ಹೋಗುತ್ತಿದಾರೆ. ಅಧಿಕಾರದಿಂದ ದೂರವಾಗಿರುವ ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಯತ್ನ ಮಾಡುತ್ತಿದೆ. ದಿನನಿತ್ಯ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಮಾಡಿ ಜನರನ್ನ ತಪ್ಪು ದಾರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ರಾಜ್ಯದಲ್ಲಿ/ರಾಷ್ಟ್ರದಲ್ಲಿ ಮತ್ತೊಮ್ಮೆ ಕೇಸರಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.
ಕಾಂಗ್ರೆಸ್ ಎಷ್ಟೇ ಬೊಬ್ಬೆ ಹೊಡೆದು ಪಾದಯಾತ್ರೆ ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ದ. ಕಾಂಗ್ರೆಸ್ ಗೆ ರಾಷ್ಟ್ರೀಯ ಅಧ್ಯಕ್ಷ ಸಿಗುತ್ತಿಲ್ಲ ಎಂದು ಲೇವಡಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರ ಅಧ್ಯಕ್ಷ ಸಿದ್ದಾಜೀ ಪಾಟೀಲ್, ಮುಖಂಡರಾದ ಚಂದು ಪಾಟೀಲ್, ಹರ್ಷಾನಂದ ಗುತ್ತೇದಾರ ಈ ವೇಳೆ ಉಪಸ್ಥಿತರಿದ್ದರು.