Advertisement

ಚುಂಚಶ್ರೀ ಜತೆ ಸಿಎಂ ಸಮಾಲೋಚನೆ

12:10 AM Dec 13, 2019 | mahesh |

ಮಂಡ್ಯ/ಚಿಕ್ಕನಾಯಕನಹಳ್ಳಿ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಹುಣ್ಣಿಮೆ ಪೂಜೆಯಲ್ಲಿ ಪಾಲ್ಗೊಂಡರು. ಕ್ಷೇತ್ರಕ್ಕೆ ಆಗಮಿಸಿದ ಯಡಿಯೂರಪ್ಪ ಅವರಿಗೆ ಮಠದ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಕ್ಷೇತ್ರದ ಅಧಿದೇವ ಶ್ರೀ ಕಾಲಭೈರವೇಶ್ವರ ಸ್ವಾಮಿಯ ದರ್ಶನ ಪಡೆದ ಸಿಎಂ, ಹುಣ್ಣಿಮೆ ಪೂಜೆ ನೆರವೇರಿಸಿ
ದರು. ಬಳಿಕ, ಪೀಠಾಧ್ಯಕ್ಷ ಶ್ರೀ ನಿರ್ಮಲಾ ನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದರು.

Advertisement

ಕೆ.ಆರ್‌.ಪೇಟೆ ಶಾಸಕ ಕೆ.ಸಿ.ನಾರಾ ಯಣಗೌಡ ಮುಖ್ಯಮಂತ್ರಿಗೆ ಸಾಥ್‌ ನೀಡಿದರು. ಮಠದ ಜೊತೆಗೆ ಕ್ಷೇತ್ರದ ಶಾಸಕ ಕೆ.ಸುರೇಶ್‌ಗೌಡ ಅವರು ಮುಖ್ಯಮಂತ್ರಿಗೆ ಸ್ವಾಗತ ಕೋರಿದರು. ಕ್ಷೇತ್ರಾದಿ ದೇವತೆಗಳ
ದರ್ಶನ ಪಡೆದ ಬಳಿಕ ಮುಖ್ಯಮಂತ್ರಿಯವರು ಶ್ರೀಗಳೊಂದಿಗೆ ಸುಮಾರು 20 ನಿಮಿಷ ಗುಪ್ತ ಸಮಾಲೋಚನೆ ನಡೆಸಿದರು. ಮುಖ್ಯಮಂತ್ರಿಗಳೊಂದಿಗೆ ಕಂದಾಯ ಸಚಿವ ಆರ್‌.ಅಶೋಕ್‌
ಮಾತುಕತೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಯಡಿಯೂರಪ್ಪ ಅವರು ಪ್ರಸಾದ ಸ್ವೀಕರಿಸಿದರು.

ಬಿಎಸ್‌ವೈ ಕಾಲಿಗೆರಗಿದ ಜೆಡಿಎಸ್‌ ಶಾಸಕ: ಈ ಮಧ್ಯೆ, ಯಡಿಯೂರಪ್ಪ ಅವರಿಗೆ ಜೆಡಿಎಸ್‌ ಶಾಸಕ ಕೆ.ಸುರೇಶ್‌ಗೌಡ ಅವರು ಕಾಲು ಮುಟ್ಟಿ, ಎರಡೆರಡು ಬಾರಿ ನಮಸ್ಕರಿಸಿದ ಘಟನೆ ಆದಿಚುಂಚನಗಿರಿ ಮಠದಲ್ಲಿ ಗುರುವಾರ ನಡೆಯಿತು. ಅಂತರ ಶಾಲಾ-ಕಾಲೇಜು ಕ್ರೀಡಾಕೂಟ ಉದ್ಘಾಟನೆಗಾಗಿ ಮಠಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಯವರನ್ನು ಸ್ವಾಗತಿಸಿದ ಶಾಸಕ ಸುರೇಶ್‌ ಗೌಡ, ಯಡಿಯೂರಪ್ಪನವರ ಕಾಲಿಗೆರಗಿ, ನಮಸ್ಕಾರ ಮಾಡಿ ಆಶೀರ್ವಾದ ಪಡೆದರು. ಬಳಿಕ, ಕ್ರೀಡಾಕೂಟದ ಉದ್ಘಾಟನಾ ಸಮಾರಂ ಭದಲ್ಲಿ ಭಾಷಣ ಮುಗಿಸಿ ಹೊರಡುತ್ತಿದ್ದ ವೇಳೆ ಅವರು ಮತ್ತೂಮ್ಮೆ ಯಡಿಯೂರಪ್ಪನವರ ಕಾಲಿಗೆ ಬಿದ್ದು ನಮಸ್ಕರಿಸಿ ದರು. ಜೆಡಿಎಸ್‌ ಶಾಸಕರ ಈ ನಡೆ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆಯಲ್ಲದೆ, ಚರ್ಚೆಗೂ ಗ್ರಾಸವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್‌ ಗೌಡ, “ಯಡಿಯೂರಪ್ಪನವರು ನನಗೆ ತಂದೆ ಸಮಾನರು. ಹೀಗಾಗಿ, ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದೇನೆ. ಅದರಲ್ಲೇನು ತಪ್ಪು?. ಯಡಿಯೂರಪ್ಪ ಅವರ ಜಾಗದಲ್ಲಿ ಸಿದ್ದರಾಮಯ್ಯ ಬಂದಿದ್ದರೆ ಅವರ ಕಾಲಿಗೂ ಬಿದ್ದು ಆಶೀರ್ವಾದ ಪಡೆಯುತ್ತಿದ್ದೆ. ನಾನು ಪಕ್ಷ ಬಿಟ್ಟು ಹೋಗುವ ಮಾತೇ ಇಲ್ಲ. ಹಿಂದೆ ಬಿಜೆಪಿ
ಯಿಂದ ನನಗೆ ಆಫರ್‌ ಬಂದಿತ್ತು. ಆದರೆ, ಪಕ್ಷ ಬಿಟ್ಟು ಬರುವುದಿಲ್ಲ ಎಂದಿದ್ದೆ’ ಎಂದರು.

ಕುಪ್ಪೂರು ಗದ್ದುಗೆ ಮಠದ ಜಾತ್ರೆಗೆ ಚಾಲನೆ:
ಇದಕ್ಕೂ ಮೊದಲು, ತುಮಕೂರು ಜಿಲ್ಲೆಯ ಸುಕ್ಷೇತ್ರ ಕುಪ್ಪೂರು ಗದ್ದುಗೆ ಮಠದ ಜಾತ್ರೆಗೆ ಸಿಎಂ ಯಡಿಯತೂರಪ್ಪ ಚಾಲನೆ ನೀಡಿದರು. ಬಳಿಕ, ಭಾವೈಕ್ಯ ಧರ್ಮಸಮ್ಮೇಳನದಲ್ಲಿ ಮಾತನಾಡಿ, ಉಪಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸದಿದ್ದರೆ ಇಲ್ಲಿನ ಧರ್ಮಸಮ್ಮೇಳನದಲ್ಲಿ ಭಾಗವಹಿಸಲು ಸಮಾಧಾನ ಆಗುತ್ತಿರಲಿಲ್ಲ. ರಾಜ್ಯದ ಜನತೆಯ ಆಶೀರ್ವಾದದಿಂದ ಮೂರೂವರೆ ವರ್ಷಗಳ ಕಾಲ ಯಾವುದೇ ತಂಟೆ, ತಕರಾರು ಇಲ್ಲದೆ ಜನರ ಸೇವೆ ಮಾಡುವ ಅವಕಾಶ ನಮಗೆ
ಒದಗಿ ಬಂದಿದೆ. ಬಿಜೆಪಿ, ಉಳಿದ ಅವಧಿಗೆ ಸದೃಢವಾಗಿದ್ದು, ರಾಜ್ಯದ ಜನತೆಗೆ ಒಳ್ಳೆಯ ಆಡಳಿತವನ್ನು ನೀಡುವ ಭರವಸೆ ನೀಡುತ್ತೇನೆ ಎಂದರು. ಇದೇ ವೇಳೆ, ಕುಪ್ಪೂರು ಮಠದ ಅಭಿವೃದ್ದಿಗೆ 3 ಕೋಟಿ ರೂ.ಬಿಡುಗಡೆ ಮಾಡಲಾಗುವುದು ಎಂದರು.

ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಕಳೆದ 10 ವರ್ಷಗಳಿಂದ ಮಠದಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು. ಕುಪ್ಪೂರು ಮರುಳಸಿದ್ದ ಶ್ರೀ ಪ್ರಶಸ್ತಿಯನ್ನು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರಿಗೆ, ಧರ್ಮನಂದಿನಿ ಪ್ರಶಸ್ತಿಯನ್ನು ಡಾ.ಎಸ್‌.ಸಿ ನಾಗರತ್ನರವರಿಗೆ
ಹಾಗೂ ಧರ್ಮರತ್ನಾಕರ ಪ್ರಶಸ್ತಿಯನ್ನು ಎಸ್‌. ಶಿವರಾಜ್‌ ಅವರಿಗೆ ಯಡ್ಡಿಯೂರಪ್ಪ ಅವರು
ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಮಹಾಪುರಾಣ ವ್ಯಾಖ್ಯಾನ ಗ್ರಂಥ, ಕ್ಯಾಲೆಂಡರ್‌ ಬಿಡುಗಡೆಗೊಳಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next