Advertisement
ಶುಭವಾರ: ಕುಜವಾರ ಶುಭ ರತ್ನ: ಹವಳ ಶುಭ ಸಂಖ್ಯೆ: 1, 2, 3, 9 ಶುಭ ವರ್ಣ: ರಕ್ತವರ್ಣ
Related Articles
Advertisement
ಶುಭವಾರ: ಶುಕ್ರವಾರ ಶುಭ ರತ್ನ: ವಜ್ರ
ಶುಭ ಸಂಖ್ಯೆ: 5, 6, 8 ಶುಭ ವರ್ಣ: ಬಿಳಿ
ಶುಭ ದಿಕ್ಕು: ಆಗ್ನೇಯ
ಮಿಥುನ:(ಮೃಗಶಿರಾ, ಆಆರ್ದಾ, ಪುನರ್ವಸು)
ಈ ವರ್ಷ ಶುಭಾಧಿಕ್ಯ ಫಲ ನೀಡಲಿದೆ. ದೈವದೊಲುಮೆ, ಗುರು ಅನುಗ್ರಹದಿಂದ ಸ್ಥಾನ ಪ್ರಾಪ್ತಿ, ಆರ್ಥಿಕ ಕ್ಲೇಶವಿದ್ದರೂ ಕಾರ್ಯ ಸಾಧನೆಯಾಗಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳು ನಡೆಯಲಿವೆ. ಈ ಮಧ್ಯೆ ಅಷ್ಟಮದ ಶನಿ, ರಾಹುಗಳಿಂದಾಗಿ ಕಾರ್ಯ ಚ್ಯುತಿ, ಕಾರ್ಯಪಥದಲ್ಲಿ ಅಡ್ಡಿ ಆತಂಕಗಳು, ಆರ್ಥಿಕ ಅಡಚಣೆ, ಆತ್ಮೀಯರೊಂದಿಗೆ ವಿವಾದ, ದುಡುಕಿನ ಕಾರ್ಯದಿಂದಾಗಿ ಸಾಂಸಾರಿಕ ಜೀವನಕ್ಕೆ ಅಡ್ಡಿಯಾಗಲಿದೆ. ರಾಜಕೀಯದಲ್ಲಿ ರಾಜಕೀಯ ಧ್ರುವೀಕರಣವು ಚಿಂತೆ ತಂದೀತು. ಕೃಷಿ ಕಾರ್ಯ, ರಖಂ ವ್ಯವಹಾರ ಉತ್ತಮಗೊಳ್ಳಲಿದೆ. ಸೋದರ ವರ್ಗಕ್ಕೆ ಸಹಾಯ, ಜನಹಿತ ಕಾರ್ಯದಿಂದ ಶ್ಲಾಘನೆ ದೊರಕಲಿದೆ. ಸ್ತ್ರೀ ನಿಮಿತ್ತ ಕೋರ್ಟು ಕಚೇರಿಯ ದರ್ಶನ, ಕ್ರೀಡಾ ಚಟುವಟಿಕೆಗಳಿಗೆ ಸಾಕಷ್ಟು ಯಶಸ್ಸು ಸಿಗಲಿದೆ. ವಿಮೆ, ಕಮಿಷನ್ ವ್ಯವಹಾರ, ಕಠಿನ ತರಹದ ದುಡಿಮೆ ಇತ್ಯಾದಿಗಳವರಿಗೆ ಉತ್ತಮ ಫಲವಿದೆ. ಅವಿವಾಹಿತರಿಗೆ ಕಂಕಣಭಾಗ್ಯದ ಮಾತುಕತೆ ನಡೆಯಲಿದೆ. ಅಡಚಣೆಗಳ ನಡುವೆಯೂ ಕೌಟುಂಬಿಕ, ಔದ್ಯೋಗಿಕ ಅಭಿವೃದ್ಧಿ ಇದೆ. ಸಣ್ಣಪುಟ್ಟ ಅಡಚಣೆಗಳಿಂದಾಗಿ ಕೈಗೊಂಡ ಕಾರ್ಯವು ವಿಳಂಬವಾದೀತು. ದಂಪತಿಗಳಿಗೆ ಸಂತಾನ ಭಾಗ್ಯದಿಂದ ಸಂತಸವಾಗಲಿದೆ. ಹಿರಿಯರೊಡನೆ ಗಹನವಾದ ಚರ್ಚೆಯೂ ನಡೆದೀತು. ವಾಹನ ಖರೀದಿಗೆ ಇದು ಸಕಾಲ. ಆದಾಯ ಮೀರಿ ಖರ್ಚು ಹೆಚ್ಚದಂತೆ ಜಾಗ್ರತೆ ವಹಿಸಿ. ಉದ್ಯೋಗರಂಗದಲ್ಲಿ ಅಪಕೀರ್ತಿ ಪಡೆಯುವಿರಿ. ವಿದ್ಯೆಗೆ ಸಂಬಂಧಪಟ್ಟ ವ್ಯವಹಾರದಲ್ಲಿ ಪ್ರತಿಕೂಲ ಫಲ, ಇತರರ ಮೋಡಿ ಮಾತುಗಳಿಂದ ಮೋಸ ಹೋಗಲಿದ್ದೀರಿ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಮನೆಯಲ್ಲಿ ಸೋದರ ಸಮಾನರಿಂದ ಅಸಮಾಧಾನ, ವ್ಯವಹಾರದಲ್ಲಿ ಸ್ಪರ್ಧಾತ್ಮಕ ಮನೋಭಾವ ಕಂಡುಬಂದೀತು.
ಶುಭವಾರ: ಬುಧವಾರ ಶುಭ ರತ್ನ: ಪಚ್ಚೆ ಶುಭ ಸಂಖ್ಯೆ: 3, 5, 6, 8 ಶುಭ ವರ್ಣ: ಹಸುರು
ಶುಭ ದಿಕ್ಕು: ಉತ್ತರ
ಕರ್ಕಾಟಕ (ಪುನರ್ವಸು, ಪುಷ್ಯಾ, ಆಶ್ಲೇಷಾ)ಈ ವರ್ಷ ನಿಮಗೆ ದೈವಬಲವಿಲ್ಲ. ಜನ್ಮರಾಶಿಯಿಂದ ಸಪ್ತಮದಲ್ಲಿ ಸಂಚರಿಸುವ ಶನಿಯು ಅಷ್ಟಮದಲ್ಲಿ ಸಂಚರಿಸುವ ಗುರು ಯಾವುದೇ ಕಾರ್ಯವನ್ನು ಮಾಡುವುದಿದ್ದರೂ ಅತೀ ಜಾಗ್ರತೆ ವಹಿಸಬೇಕು. ಧನ ಚಿಂತೆ, ಕುಟುಂಬ ಕಲಹ, ವ್ಯರ್ಥ ಕಾಲಹರಣ ಇತ್ಯಾದಿ ವಿಪತ್ತುಗಳನ್ನು ಎದುರಿಸಬೇಕಾದೀತು. ಪರಿ ಪರಿ ದೇವರ ಮೊರೆ ಹೋಗುವ ಸಾಧ್ಯತೆ ಇದೆ. ತನ್ನದಲ್ಲದ ತಪ್ಪಿಗೆ ತಲೆದಂಡ ತೆರುವ ಕಾಲವಿದು. ಸ್ವಾಭಿಮಾನಿಗಳಾದ ನೀವು ಅಭಿಮಾನ ಭಂಗದಿಂದಾಗಿ ಕೋಪಕ್ಕೆ ಒಳಗಾಗುವಿರಿ. ಕೋರ್ಟು ವ್ಯವಹಾರವು ಸ್ಥಗಿತಗೊಂಡಾವು. ವಿದ್ಯಾರ್ಥಿಗಳಿಗೆ ಯಶಸ್ಸಿದ್ದರೂ ಏನೋ ಕೊರತೆ ಇದೆ ಎಂದೆನಿಸಲಿದೆ. ಪಾಲು ಬಂಡವಾಳದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಜಲ, ವಿದ್ಯುತ್, ಎಲೆಕ್ಟ್ರಾನಿಕ್ಸ್ ಉಪಕರಣ ಮುಂತಾದ ವ್ಯವಹಾರದಲ್ಲಿ ಅಲ್ಪಸ್ವಲ್ಪ ಲಾಭವಿದ್ದರೂ ನೌಕರ ವರ್ಗದವರ ಕಿರಿಕಿರಿ ಬೇಸರ ತರಲಿದೆ. ಕೈಗಾರಿಕೆ, ದಿನಸಿ ವ್ಯವಹಾರ, ಕಮಿಷನ್ ವೃತ್ತಿಯವರಿಗೆ ಆದಾಯವು ವೃದ್ಧಿಯಾದೀತು. ಸಂಘಸಂಸ್ಥೆಗಳಲ್ಲಿ ಪದಾಧಿಕಾರಿಗಳ ತಕರಾರು ಕೆಲಸ ಕಾರ್ಯಗಳಲ್ಲಿ ಅಡಚಣೆ ತಂದಾವು. ನೌಕರ ವರ್ಗದವರಿಗೆ ವೇತನ ಪರಿಷ್ಕರಣೆಯ ಕಾರ್ಯ ವಿಳಂಬವಾದೀತು. ಕೋಳಿ ಸಾಕಣೆ, ಕಬ್ಬಿಣ, ಗಟ್ಟಿ ಪದಾರ್ಥ ಇತ್ಯಾದಿಗಳ ವ್ಯವಹಾರ ಹೇರಳ ಲಾಭ ತರಲಿದೆ. ಕ್ರೀಡಾಪಟುಗಳಿಗೆ ವಂಚನೆ ಕಂಡುಬಂದೀತು. ಹೊಟ್ಟೆಯ ಕೆಳಭಾಗದಲ್ಲಿ ಅನಾರೋಗ್ಯವು ಕಾಣಿಸಬಹುದು. ಕೃಷಿಕರು, ಕೂಲಿ ಕಾರ್ಮಿಕರಿಗೆ ಹೆಚ್ಚಿನ ತೊಂದರೆ ಇರದು. ಈ ಮಧ್ಯೆ ತುಸು ದೈವಬಲ ಒದಗುವುದರಿಂದ ಕೆಲವೊಂದು ಅಭಿವೃದ್ಧಿ ಕೆಲಸಗಳು ನಡೆಯುವುದು. ಆಗಾಗ ಕೌಟುಂಬಿಕ ಸಾಮರಸ್ಯದ ಕೊರತೆ ಕಾಣಿಸಲಿದೆ. ಮಾತಿನಲ್ಲಿ ಜಾಗ್ರತೆ ವಹಿಸುವುದು ಅಗತ್ಯ.
ಶುಭವಾರ: ಸೋಮವಾರ ಶುಭ ರತ್ನ: ಮುತ್ತು
ಶುಭ ಸಂಖ್ಯೆ: 2, 3, 9 ಶುಭ ವರ್ಣ: ಬಿಳಿ
ಶುಭ ದಿಕ್ಕು: ವಾಯವ್ಯ
ಸಿಂಹ;(ಮಘಾ, ಹುಬ್ಟಾ, ಉತ್ತರಾ)ಈ ವರ್ಷ ಉತ್ತಮ ದೈವಾನುಗ್ರಹವಿದೆ. ಸಪ್ತಮದ ಗುರು ಷಷ್ಠದ ಶನಿ ಸಾಕಷ್ಟು ಶುಭ ಫಲಗಳನ್ನು ಉಂಟು ಮಾಡುವನು. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಪಾಲು ಬಂಡವಾಳದಲ್ಲಿ ಹಣ ತೊಡಗಿಸಿಕೊಂಡಲ್ಲಿ ಅಧಿಕ ಲಾಭವಿದೆ. ಬ್ಯಾಂಕಿನ ವ್ಯವಹಾರ, ಲೇವಾದೇವಿ, ನಿವೇಶನ ಖರೀದಿ ಮಾರಾಟ ಇತ್ಯಾದಿ ಸಂಪಾದನೆಯಲ್ಲಿ ತೊಡಗಿಸಿಕೊಂಡಲ್ಲಿ ಉತ್ತಮ ಸಂಪಾದನೆ ಒದಗಿ ಬಂದೀತು. ಕೃಷಿ, ಕೈಗಾರಿಕೆಗಳಿಗೆ ಧನ ವಿನಿಯೋಗವಾಗಲಿದೆ. ನೌಕರ ವರ್ಗಕ್ಕೆ ಕೆಲಸದ ಒತ್ತಡವಿದ್ದರೂ ಆದಾಯಕ್ಕೆ ಕೊರತೆ ಇರದು. ಪ್ರವಾಸಿ, ಉದ್ಯಮ ಸಾರಿಗೆ, ಉದ್ಯೋಗ, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಇದ್ದವರಿಗೆ, ವೃತ್ತಿ ನಿರತರಿಗೆ ಮುಂಭಡ್ತಿಯ ಅವಕಾಶಗಳಿರುತ್ತವೆ. ಆದರೆ ವರ್ಗಾವಣೆ ಅನಿವಾರ್ಯವಾಗಲಿದೆ. ವ್ಯಾಪಾರಿ ವರ್ಗಕ್ಕೆ ಉತ್ತಮ ಪ್ರಗತಿ ಇದೆ. ಹೂ, ಹಣ್ಣು, ವಿಲಾಸಿ ಸಾಮಗ್ರಿ ಇತ್ಯಾದಿ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರದು. ರಾಜಕೀಯ ವರ್ಗದಲ್ಲಿ ಬಿರುಕು ಕಾಣಿಸಲಿದೆ. ಆದಿಭಾಗದಲ್ಲಿ ಕಳೆದು ಹೋದ ವಸ್ತು ಮರಳಿ ದೊರಕಲಿದೆ. ಚಿನ್ನ, ಬೆಳ್ಳಿ ಖರೀದಿ, ಅನ್ಯವಸ್ತುಗಳ ಖರೀದಿ, ಮಾರಾಟ ಭರವಸೆ ಹುಟ್ಟಿಸಲಿವೆ. ಪಶು ಸಂಗೋಪನೆ ಲಾಭದಾಯಕ. ನೌಕರ ವರ್ಗಕ್ಕೆ ಪರಿಶ್ರಮಕ್ಕೆ ತಕ್ಕ ಬೆಲೆ ದೊರಕಲಿದೆ. ಆರೋಗ್ಯ ಆಗಾಗ ಕೈಕೊಡಲಿದೆ. ಸಾಮಾಜಿಕ ಕಾರ್ಯದಲ್ಲಿ ಮಾನ, ಸಮ್ಮಾನ ಎಲ್ಲ ರೀತಿಯ ಅನುಕೂಲ ವಾತಾವರಣ ಉಂಟಾದೀತು. ಭೂಮಿ ಖರೀದಿಯಲ್ಲಿ ಸಮಸ್ಯೆಗಳು ಕಂಡುಬರಲಿವೆ. ಕೇತುವು ಮಾನಸಿಕವಾಗಿ ಬೇಸರ ಉಂಟು ಮಾಡಲಿದ್ದಾನೆ.ಆಗಾಗ ಶಾರೀರಿಕ ತೊಂದರೆಗಳು ಎದುರಾದಾವು. ಹಣದ ವ್ಯವಹಾರದಲ್ಲಿ ವಿರುದ್ಧ ಫಲ, ಸಂಬಂಧಿಕರಿಂದ ಅನಿರೀಕ್ಷಿತ ಸಹಾಯ, ವರ್ಷಾಂತ್ಯದಲ್ಲಿ ಹೆಚ್ಚಿನ ಕಾರ್ಯಗಳಿಗೆ ತಡೆ ಉಂಟಾದೀತು.
ಶುಭವಾರ: ರವಿವಾರ ಶುಭ ರತ್ನ: ಮಾಣಿಕ್ಯ
ಶುಭ ಸಂಖ್ಯೆ: 1, 3, 5, 9 ಶುಭ ವರ್ಣ: ಸಪ್ತವರ್ಣ
ಶುಭ ದಿಕ್ಕು: ಪೂರ್ವ
ಕನ್ಯಾ;(ಉತ್ತರಾ, ಹಸ್ತಾ, ಚಿತ್ರಾ)ಈ ರಾಶಿಯವರಿಗೆ ಪಂಚಮದ ಶನಿ, ಷಷ್ಠದ ಗುರು ಅಶುಭನಾಗಿರುತ್ತಾನೆ. ಆರಾಮ ಜೀವನದ ಸಾಧನೆ ಹಾಗೂ ಸೌಕರ್ಯಗಳು ಹಿಂದಿಗಿಂತಲೂ ಹೆಚ್ಚಿನ ರೀತಿಯಲ್ಲಿ ತೋರಿ ಬರುತ್ತವೆ. ಆದರೂ ಮಾನಸಿಕ ಖನ್ನತೆಯಿಂದ ತೊಳಲಾಡುವಿರಿ. ಕೆಲವು ಅಚಾತುರ್ಯದ ದುಷ್ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಆದಿಯಲ್ಲೇ ಅಪವಾದ ಭಯ, ಆರ್ಥಿಕ ಒತ್ತಡದ ಬಾಧೆ ಇದೆ. ಅನೇಕ ವಿಧದ ಕಿರಿಕಿರಿ ಹೆಂಗಸರೊಡನೆ ನಡೆದೀತು. ಚುಚ್ಚು ಮಾತಿನಿಂದ ಮೈತ್ರಿಯಲ್ಲಿ ಬಿರುಕು ಕಾಣಿಸಲಿದೆ. ವೃತ್ತಿರಂಗದಲ್ಲಿ ಉದ್ಯೋಗಸ್ಥರಿಗೆ ಮುಂಭಡ್ತಿ ಯೋಗ ತಪ್ಪಿ ಹೋದೀತು. ಭೂ ಸಂಬಂಧ ವ್ಯವಹಾರಗಳು ನಷ್ಟವನ್ನು ತಂದುಕೊಡಲಿವೆ. ವ್ಯಾಪಾರಿಗಳಿಗೆ ಹೆಚ್ಚಿನ ಕರ ವಸೂಲಾತಿ ಸಂಭವವಿದೆ. ಕಟ್ಟಡದ ಕಾಮಗಾರಿ ಕೆಲಸದವರಿಗೆ ಇದ್ದುದರಲ್ಲೇ ತೃಪ್ತಿ ಪಡುವಂತಾದೀತು. ರಾಜಕೀಯ ವಲಯದವರಿಗೆ ದ್ವಂದ್ವ ಮನೋಭಾವದಿಂದಾಗಿ ಜನಪ್ರಿಯತೆಗೆ ಕುತ್ತು ತಂದೀತು. ಪಶು ಸಂಗೋಪನೆ ಲಾಭ ತರಲಿದೆ. ನಯವಂಚಕರಿಗೆ ಗೆಲುವು ತಂದೀತು. ಕೋಪ, ತಾಪಗಳ ಪರಿಣಾಮ ಗೃಹಕಲಹಕ್ಕೆ ಕಾರಣವಾದೀತು. ಮಡದಿಯ ಮುನಿಸು ಕಂಡುಬಂದೀತು. ಧರ್ಮಕಾರ್ಯಗಳಿಗೆ ವಿಘ್ನ ಭಯವಿದೆ. ಪಾಲು ಬಂಡವಾಳದಲ್ಲಿ ಲಾಭ ಗಿಟ್ಟದು. ಧರ್ಮಬಾಹಿರ ಕೃತ್ಯಗಳಿಗಾಗಿ ಮನಸ್ಸು ಸೋಲಲಿದೆ. ಬಂಧುವರ್ಗದವರ ಅಸೂಯೆ ಕಳವಳಕ್ಕೆ ಕಾರಣವಾಗಲಿದೆ. ನೌಕರ ವರ್ಗಕ್ಕೆ ಸ್ಥಳ ಬದಲಾವಣೆ ಅನಿವಾರ್ಯವೆನಿಸಲಿದೆ. ಬೆಂಕಿ ಹಾಗೂ ವಿದ್ಯುತ್‌ಗಳಿಂದ ಅಪಾಯಕ್ಕೆ ಗುರಿಯಾಗಲಿದ್ದೀರಿ. ಈ ಮಧ್ಯೆ ಕೆಲವೊಂದು ಉತ್ತಮ ಫಲವನ್ನು ಪಡೆಯಲಿದ್ದೀರಿ. ಸಾಂಸಾರಿಕವಾಗಿ ಉತ್ತಮ ಕೆಲಸಗಳಾಗಲಿವೆ. ಆರೋಗ್ಯ ಸುಧಾರಣೆ.
ಶುಭವಾರ: ಬುಧವಾರ ಶುಭ ರತ್ನ: ಪಚ್ಚೆ ಕಲ್ಲು ಶುಭ ಸಂಖ್ಯೆ: 3, 5, 6, 8 ಶುಭ ವರ್ಣ: ಕಡು ಹಸುರು
ಶುಭ ದಿಕ್ಕು: ಉತ್ತರ
ತುಲಾ;(ಚಿತ್ರಾ, ಸ್ವಾತಿ, ವಿಶಾಖಾ)ಪಂಚಮದಲ್ಲಿ ಗುರುವಿನ ಸಂಚಾರ ದೈವಬಲವನ್ನು ಒದಗಿಸಿಕೊಡುತ್ತದೆ. ಸಾಂಸಾರಿಕ ಹಾಗೂ ಕುಟುಂಬಿಕ ಉತ್ತಮ ಅಭಿವೃದ್ಧಿ ಇರುತ್ತದೆ. ಗೃಹದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಕೆಲವು ಸಮಯದಿಂದ ನಿಂತು ಹೋದ ಕೆಲಸ ಕಾರ್ಯಗಳು ಪುನಃ ಚಾಲನೆಗೆ ಬರಲಿವೆ. ಸಂಪಾದನೆಗೆ ನೂತನವಾಗಿ ತೊಡಗುವವರಿಗೆ ಶುಭದಾಯಕ. ಸಾರಿಗೆ ಉದ್ಯೋಗಿ, ಎಲೆಕ್ಟ್ರಾನಿಕ್ಸ್ ಮಾಧ್ಯಮದಲ್ಲಿ ವೃತ್ತಿ ನಿರತರಿಗೆ ಮುಂಭಡ್ತಿ ಯೋಗವಿದೆ. ದೂರಾಲೋಚನೆಯಿಂದ ನಿವೇಶನ ಖರೀದಿ ಇತ್ಯಾದಿಗಳು ನಡೆಯಲಿವೆ. ಸರಕಾರಿ ಕಾರ್ಯದಲ್ಲಿ ಸಿದ್ಧಿ ಇದೆ. ನ್ಯಾಯಾಲಯದ ಕೆಲಸಗಳು ಸಫಲವಾದೀತು. ಅನಾವಶ್ಯಕ ಪ್ರಯಾಣ ಕಾಣಿಸಬಹುದು. ಅವಿವಾಹಿತರಿಗೆ ವಿವಾಹ ಸಿದ್ಧಿಯ ಕಾಲ. ಚಿತ್ರರಂಗ, ಕಲಾಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ಗೃಹ ನಿರ್ಮಾಣದಂತಹ ಕೆಲಸ ಕಾರ್ಯಗಳಿಗೆ ಸಕಾಲ. ಧನವ್ಯಯವು ಅತಿಯಾದರೂ ಇಷ್ಟಾರ್ಥ ಪ್ರಾಪ್ತಿಯಾಗಲಿದೆ. ಆಭರಣ ಖರೀದಿ, ಆಲಂಕಾರಿಕ ವಸ್ತುಗಳ ಖರೀದಿಯಿಂದ ಸಂತಸವಾದೀತು. ಮಕ್ಕಳ ವಿದ್ಯಾಭ್ಯಾಸವು ಪ್ರಗತಿ ಪಥದಲ್ಲಿ ಸಾಗಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಸೂಕ್ತ ಪ್ರಾತಿನಿಧ್ಯ ದೊರಕಲಿದೆ. ವೈರಿಗಳು ನಿಮ್ಮ ಅಭಿವೃದ್ಧಿಯಲ್ಲಿ ಅಡ್ಡಗಾಲು ಹಾಕಿಯಾರು. ದಿನವಹಿ ಸಂಭಾವನೆ ಪಡೆಯುವ ನೌಕರರಿಗೆ ಸ್ಥಿರತೆ ಕಂಡುಬರುವುದು. ನ್ಯಾಯಾಲಯದಲ್ಲಿರುವ ವಾದ-ವಿವಾದಗಳು ನಿಮ್ಮ ಪರವಾಗಿ ಇತ್ಯರ್ಥಗೊಳ್ಳಲಿವೆ. ಆಪ್ತರ ಸಲಹೆಗೆ ಕಿವಿಗೊಡಿರಿ. ಪತಿ, ಪತ್ನಿಯರಲ್ಲಿ ವಿರಸವಿದ್ದರೂ ಸುಖಾಂತ್ಯವಾಗಲಿದೆ. ದೇವತಾರಾಧನೆ ಮೂಲಕ ಶುಭಫಲ ಹೆಚ್ಚಿಸಿಕೊಳ್ಳಿರಿ. ಒಮ್ಮೊಮ್ಮೆ ಆತ್ಮೀಯರೇ ವಿರೋಧಿಗಳಾದಾರು. ದೇಹಾರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ದಿನಸಿ ವ್ಯವಹಾರದಲ್ಲಿ ಲಾಭವಿದೆ.
ಶುಭವಾರ: ಶುಕ್ರವಾರ ಶುಭ ರತ್ನ: ವಜ್ರ
ಶುಭ ಸಂಖ್ಯೆ: 3, 6, 8 ಶುಭ ವರ್ಣ: ಬಿಳಿ
ಶುಭ ದಿಕ್ಕು: ಪಶ್ಚಿಮ
ವೃಶ್ಚಿಕ:(ವಿಶಾಖಾ, ಅನುರಾಧಾ, ಜ್ಯೇಷ್ಠಾ)ಈ ರಾಶಿಯವರಿಗೆ ತೃತೀಯದ ಶನಿಯಿಂದಾಗಿ ಶಾರೀರಿಕವಾಗಿ ಹಾಗೂ ವ್ಯಾವಹಾರಿಕವಾಗಿಯೂ ವಿಶೇಷ ಆರೋಗ್ಯ ಹಾಗೂ ಅಭಿವೃದ್ಧಿಯನ್ನು ಹೊಂದುವಿರಿ. ಉತ್ತಮವಾದ ದೃಢ ನಿರ್ಧಾರಗಳನ್ನು ಕೈಗೊಳ್ಳುವಿರಿ. ಆದರೂ ಚತುರ್ಥದ ಗುರುವಿನಿಂದಾಗಿ ದೈವ ಬಲ ಕಡಿಮೆ. ರಾಹು-ಕೇತು ಗ್ರಹಗಳು ಅಶುಭದಾಯಕರಾಗಿ ಶತ್ರುಪೀಡೆಯಿಂದ ಕ್ಲೇಶ, ಒಳಗೊಳಗೇ ವೃತ್ತಿ ಕ್ಷೇತ್ರದಲ್ಲಿ ಕಿರುಕುಳ, ಅಪಕೀರ್ತಿಯ ಭಯ, ವಿಘ್ನ ಭೀತಿ ಇದೆ. ಹೊಟೇಲ್, ವಸತಿ ಗೃಹ, ಕಲಾಕ್ಷೇತ್ರಗಳ ಪ್ರಗತಿ ನಿಧಾನವಾಗಲಿದೆ. ಹಾಳು ವ್ಯಸನದ ಗೀಳು, ಹೃದಯದ ಗೋಳಿಗೆ ಕಾರಣವಾಗಲಿದೆ. ಹಿತಶತ್ರುಗಳ ಅಲ್ಲಸಲ್ಲದ ಆರೋಪಗಳಿಂದ ಅಭಿಮಾನ ಭಂಗವಾದೀತು. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದಲ್ಲಿ ಕೊರತೆ ಕಾಣಿಸಲಿದೆ. ಕುಟುಂಬ ವರ್ಗದವರಿಂದ ಸ್ಫೂರ್ತಿ, ಆತ್ಮಗೌರವವು ವರ್ಧಿಸಲಿದೆ. ದುರ್ಜನರ ಒಡನಾಟದಿಂದ ಅಶುಭ ಫಲವಿದೆ. ಇನ್ನೊಂದೆಡೆ ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಣಿಸಲಿದೆ. ವಿವಿಧ ಮೂಲಗಳಿಂದ ಧನದಾಯವಿರುತ್ತದೆ. ಹೊಂದಾಣಿಕೆ ಕೊರತೆಯಿಂದ ಪ್ರೇಮಸಲ್ಲಾಪ ಅರ್ಧಕ್ಕೇ ನಿಂತೀತು. ಪಶು, ಕೃಷಿ, ಕಾಡು ಉತ್ಪತ್ತಿ, ಕಟ್ಟಡ ಸಾಮಗ್ರಿ ಇತ್ಯಾದಿ ಕ್ಷೇತ್ರದಲ್ಲಿ ಕಷ್ಟನಷ್ಟಗಳು ಉಂಟಾಗಲಿವೆ. ನ್ಯಾಯಾಲಯದಲ್ಲಿರುವ ವಾದವಿವಾದಗಳು ರಾಜಿ ಮನೋಭಾವದಿಂದ ಪರಸ್ಪರ ಮಾತುಕತೆಯ ಮೂಲಕ ಬಗೆಹರಿದಾವು. ಭೂ ವ್ಯವಹಾರದಲ್ಲಿ ಆಪ್ತರ ಸಲಹೆಯನ್ನು ಸ್ವೀಕರಿಸಿರಿ. ಪತ್ನಿ, ಪತಿಯರೊಳಗೆ ವಿರಸವಿದ್ದರೂ ಸುಖಾಂತ್ಯವಾಗಲಿದೆ.
ದೇವತಾರಾಧನೆಯಿಂದ ಶುಭಫಲ ಪಡೆಯಿರಿ. ಆರ್ಥಿಕತೆಯಲ್ಲಿ ನಿರಾಳವಾದರೂ ಹಲವು ಸಮಸ್ಯೆಗಳ ಜಂಜಾಟಕ್ಕೆ ಸಿಲುಕುವಿರಿ. ಆಪ್ತರ ಸಲಹೆಗಳಿಗೆ ಗಮನಕೊಟ್ಟರೆ ಉತ್ತಮ.
ಶುಭವಾರ: ಕುಜವಾರ ಶುಭ ರತ್ನ: ಹವಳ
ಶುಭ ಸಂಖ್ಯೆ: 2, 3, 9 ಶುಭ ವರ್ಣ: ರಕ್ತವರ್ಣ
ಶುಭ ದಿಕ್ಕು: ದಕ್ಷಿಣ
ಧನು:(ಮೂಲಾ, ಪೂರ್ವಾಷಾಢ, ಉತ್ತರಾಷಾಢ);ಈ ವರ್ಷ ಏಳೂವರೆ ಶನಿಯ ಪ್ರಭಾವದಿಂದ ವೃತ್ತಿ, ಉದ್ಯೋಗದಲ್ಲಿ ಸ್ಪರ್ಧೆ, ಬದಲಾವಣೆ ಆರ್ಥಿಕ ಅಡಚಣೆಗಳು ತೋರಿಬರಲಿವೆ. ಜನರ ಆಕ್ರೋಶ, ಭೀತಿ ತುಂಬಿದ ವಾತಾವರಣವಿದ್ದು ಬಂಧು ವಿರೋಧ, ಧನ ದಾರಿದ್ರé ಕಂಡುಬರಲಿದೆ. ಮಧ್ಯ ಭಾಗದಲ್ಲಿ ವಿವೇಚನಾಶೀಲ ಕ್ರಮಗಳಿಂದ ಹಲವು ಸುಧಾರಣೆಗಳು ಸಾಂಸಾರಿಕವಾಗಿ ಕಂಡುಬರಲಿವೆ. ಪದೇಪದೆ ಅಪಜಯದ ಕಾರ್ಯವಿಹತಿಗಳಿಂದ ಸರಕಾರಿ ಅಧಿಕಾರಿಗಳಿಗೆ ಸಮಸ್ಯೆ ತಂದೀತು. ಸಾಲಗಾರರ ಕಾಟ ಕಂಡುಬರುತ್ತದೆ. ವಿವೇಚನಾಶೀಲರಾಗಿ ವರ್ತಿಸಿದರೂ ನೆರೆಹೊರೆಯವರ ಅಕಾರಣ ದ್ವೇಷ, ಮಕ್ಕಳ ಹಗರಣ ಮನೆಮಂದಿಗೆಲ್ಲ ಸಮಸ್ಯೆ ತಂದೀತು. ಹಣ ಎಷ್ಟು ಹರಿದು ಬಂದರೂ ಮತ್ತಷ್ಟು ಬೇಡಿಕೆಯ ಕಾರಣದಿಂದಾಗಿ ಆದಾಯದ ಕೊರತೆಯ ಚಿಂತೆ ನೀಗದು. ಈ ಮಧ್ಯೆ ನಿರುದ್ಯೋಗಿಗಳಿಗೆ ಉದ್ಯೋಗದ ಕರೆ ಬರಲಿದೆ. ಆದರೆ ಅದು ತಾತ್ಕಾಲಿಕ ಕೆಲಸ. ಶ್ರಮಕ್ಕೆ ತಕ್ಕ ಫಲವಿರದು. ಅನಿವಾರ್ಯಕ್ಕೆ ಅದೇ ಗತಿ. ವೈದ್ಯಕೀಯ ಕ್ಷೇತ್ರದಲ್ಲಿ ಯಶೋ ಲಾಭವಿದೆ. ರಾಜಕೀಯ ಮಂದಿಗೆ ದ್ವಂದ್ವ ನೀತಿಯಿಂದ ಸಮಸ್ಯಾತ್ಮಕ ಪರಿಸ್ಥಿತಿ ಉಂಟಾದೀತು.
ಆಳುಕಾಳುಗಳ ಕಾರ್ಯವೈಫಲ್ಯದಿಂದ ಕಾರ್ಖಾನೆಗಳಲ್ಲಿ ಧನದಾರಿದ್ರ ಉಂಟಾಗಲಿದೆ. ಸಂಗೀತ, ಕಲೆ, ಚಿತ್ರಕಲೆ ಮುಂತಾದ ಕಲಾವಿದರಿಗೆ ಆದಾಯ ವೃದ್ಧಿ ಇದ್ದರೂ ಖರ್ಚುವೆಚ್ಚಗಳು ಅಧಿಕವಾಗಿ ತೃಪ್ತಿತರದು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಉತ್ತಮ ಪ್ರಗತಿ ಇರುತ್ತದೆ. ಸಾಂಸಾರಿಕವಾಗಿ ದಾಂಪತ್ಯ ಜೀವನದಲ್ಲಿ ರಾಜೀ ಮನೋಭಾವದಿಂದ ಮುಂದುವರಿಯುವುದು ಉತ್ತಮ. ಸಂಶೋಧನೆ, ಶೈಕ್ಷಣಿಕ ಸಮ್ಮಾನವನ್ನು ಪಡೆಯುವಿರಿ. ಆದರೂ ವರ್ಷದ ಕೊನೆಯಲ್ಲಿ ಆದಾಯದ ಆಕಸ್ಮಿಕ ವೃದ್ಧಿಯಿಂದ ಹರುಷವಾಗಲಿದೆ.
ಶುಭವಾರ: ಗುರುವಾರ ಶುಭ ರತ್ನ: ಕನಕ ಪುಷ್ಯರಾಗ ಶುಭ ಸಂಖ್ಯೆ: 1, 3, 8, 9 ಶುಭ ವರ್ಣ: ಬಿಳಿ
ಶುಭ ದಿಕ್ಕು: ಈಶಾನ್ಯ
ಮಕರ:(ಉತ್ತರಾಷಾಢ, ಶ್ರವಣ, ಧನಿಷ್ಠ)ಈ ರಾಶಿಯವರಿಗೆ ಗುರುವು ಜನ್ಮರಾಶಿಯಿಂದ ದ್ವಿತೀಯದಲ್ಲಿ ಸಂಚರಿಸಿ ಸಾಂಸಾರಿಕವಾಗಿ ಹಲವಾರು ಅನುಕೂಲಗಳು ಉಂಟಾಗುತ್ತವೆ. ನೂತನ ದೀರ್ಘಕಾಲದ ಕಾರ್ಯಗಳಿಗೆ ನೀವೀಗ ತೊಡಗಿದರೂ ಆರಂಭದಲ್ಲಿ ಬಹಳ ಕಷ್ಟನಷ್ಟಗಳನ್ನು ಅನುಭವಿಸಬಹುದು. ಶಿಸ್ತು ಸಂಯಮದಿಂದ ಇದ್ದಲ್ಲಿ ಕಷ್ಟನಷ್ಟ ಕಡಿಮೆ. ಮನೆಯಲ್ಲಿ ಶುಭಶೋಭನಾದಿ ಕೆಲಸಗಳು ನಡೆಯಲಿವೆ. ಬಂಧುಗಳ ಆಗಮನದಿಂದ ಸಂತೋಷವಿದ್ದರೂ ಮನಸ್ಸು ಸಮಾಧಾನದಿಂದಿರಲಾರದು. ಮಧ್ಯಭಾಗದಲ್ಲಿ ನೂತನ ಗೃಹನಿರ್ಮಾಣ, ಮಂಗಳ ಕಾರ್ಯದ ಸಂಭ್ರಮ, ಪ್ರವಾಸಾದಿಗಳಿಂದ ಸಂತಸ ತರಲಿದೆ. ವೈದ್ಯಕೀಯ ವಿಭಾಗದ ವೆಚ್ಚ ಅಧಿಕವಾದೀತು. ತಂದೆ ಮಕ್ಕಳೊಳಗೆ ಭಿನ್ನಾಭಿಪ್ರಾಯ ಅಭಿಮಾನ ಭಂಗದ ಘಟನೆಗಳು ಜರಗಬಹುದು. ವೈಯಕ್ತಿಕ ಸಮಸ್ಯೆಗಳಿಂದ ನ್ಯಾಯಾಲಯದ ದರ್ಶನ ಅನಿವಾರ್ಯವಾಗುತ್ತದೆ. ಹಾಳು ವ್ಯಸನದಿಂದ, ಸಹವಾಸ ದೋಷ ಕಂಡುಬರಲಿದೆ. ಕಳ್ಳತನದಿಂದ ಆಭರಣಗಳು ನಷ್ಟವಾದಾವು. ಧಾರ್ಮಿಕ ಕೃತ್ಯಗಳಲ್ಲಿ ವೈರಾಗ್ಯಭಾವ ಬೆಳೆಯಲಿದೆ. ದಾಂಪತ್ಯದಲ್ಲಿ ವಿರಸಕ್ಕೆ ಕಾರಣವಾದೀತು. ರಾಜಿ ಮನೋಭಾವದಿಂದ ಸರಿಯಾಗಲಿದೆ. ಸೋದರ ವರ್ಗದಲ್ಲಿ ಪಿತ್ರಾರ್ಜಿತ ವಸ್ತುಗಳಿಗಾಗಿ ಸಮಸ್ಯೆಗಳು ಕಂಡುಬಂದಾವು. ಆದರೂ ಗುರುಬಲ ಉತ್ತಮ ಅಭಿವೃದ್ಧಿಗೆ ಕೊಂಡೊಯ್ಯಲಿದೆ. ಸಾಮಾಜಿಕ ಸ್ಥಾನಮಾನಗಳು ಲಭಿಸಲಿವೆ. ಆರೋಗ್ಯದಲ್ಲಿ ಸುಧಾರಣೆ, ಗೃಹ ಸೌಕರ್ಯ ಪ್ರಾಪ್ತಿ ಬಂಧುಗಳ ಸಹಕಾರ, ಆತ್ಮಸ್ಥೈರ್ಯ ವೃದ್ಧಿ ಇತ್ಯಾದಿಗಳು ಕೂಡ ಪ್ರಾಪ್ತವಾಗಲಿವೆ. ಆಹಾರ, ನೀರಿನ ವ್ಯತ್ಯಾಸದಿಂದ ದೇಹಾರೋಗ್ಯ ಏರುಪೇರಾದೀತು. ವಿದ್ಯಾರ್ಥಿಗಳು ಉತ್ತಮ ಯಶಸ್ಸನ್ನು ಪಡೆಯಲಿದ್ದಾರೆ. ಸಾಂಸಾರಿಕವಾಗಿ ಅಭಿವೃದ್ಧಿ ಇದೆ.
ಶುಭವಾರ: ಶನಿವಾರ ಶುಭ ರತ್ನ: ಇಂದ್ರನೀಲ
ಶುಭ ಸಂಖ್ಯೆ: 4, 5, 6, 8 ಶುಭ ವರ್ಣ: ನೀಲಿ
ಶುಭ ದಿಕ್ಕು: ಪಶ್ಚಿಮ
ಕುಂಭ;(ಧನಿಷ್ಠ, ಶತಭಿಷಾ, ಪೂರ್ವಾಭಾದ್ರ)ಜನ್ಮರಾಶಿಯಲ್ಲಿ ಗುರು, ಶನಿ ಹಾಗೂ ರಾಹುಗ್ರಹಗಳ ಪ್ರತಿಕೂಲತೆಗಳಿಂದ ದೈವಬಲವಿಲ್ಲದೆ ಸಮಸ್ಯೆಗಳು ಕಂಡುಬಂದಾವು.ಸ್ಥಾನಮಾನಗಳಿಗೆ ಹಾನಿ, ಬುದ್ಧಿಯ ಅಸ್ಥಿರತೆಗಳು ತೋರಿಯಾವು. ಬಂಧು ದ್ವೇಷ, ಜಗಳ, ಗಲಾಟೆ, ಸಾಂಸಾರಿಕವಾಗಿ ಬೇಸರ ತಂದೀತು. ಆದಾಯದಲ್ಲಿ ಹಿಡಿತ ಮುಂತಾದವುಗಳಿಂದ ತಲೆನೋವು ಹೆಚ್ಚಲಿದೆ. ರಾಹುವಿನ ಪ್ರತಿಕೂಲತೆ, ವೃತ್ತಿಯಲ್ಲಿ ಕಿರಿಕಿರಿ, ವರ್ಗಾವಣೆಯ ಸಾಧ್ಯತೆ, ಜುಗುಪ್ಸೆಯ ಸಾಧ್ಯತೆಗಳಿವೆ. ಆದಾಯವಿದ್ದರೂ ನಾನಾ ರೀತಿಯ ಖರ್ಚುವೆಚ್ಚಗಳಿಂದ ಹಣ ನೀರಿನಂತೆ ಖರ್ಚಾಗಲಿದೆ. ಹಿರಿಯರ ಆರೋಗ್ಯಕ್ಕಾಗಿ ಆಸ್ಪತ್ರೆಯ ಅಲೆದಾಟವಿರುತ್ತದೆ. ಈ ಮಧ್ಯೆ ಪುಣ್ಯಕರ ಕಾರ್ಯಕ್ಕಾಗಿ ಧರ್ಮಕಾರ್ಯಗಳು ನಡೆದಾವು. ಪಾಲು ಬಂಡವಾಳದಲ್ಲಿ ಜತೆಗಾರರಿಂದ ಮೋಸವಾದೀತು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಸಮಸ್ಯೆ ತಂದೀತು. ಸಣ್ಣ ಮಾತಿನಿಂದ ಉದ್ಯೋಗ ಕಳಕೊಳ್ಳುವ ಭೀತಿ ಇದೆ. ಹಿರಿಯರ ವಿರೋಧದಿಂದ ಪ್ರೇಮಿಗಳ ಪ್ರೇಮಾಂಕುರವು ಬಾಡೀತು.ಪ್ರಯಾಣದಲ್ಲಿ ಕಳ್ಳಕಾಕರ ಭೀತಿ ಇದೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ವೈದ್ಯಕೀಯ ವೃತ್ತಿಯವರಿಗೆ ಆದಾಯ ಹರಿದು ಬರಲಿದೆ. ಸ್ತ್ರೀಯರೊಡನೆ ಮಾತು ಕಲಹಕ್ಕೆ ಕಾರಣವಾದೀತು. ತಾತ್ಕಾಲಿಕ ವೃತ್ತಿಯವರಿಗೆ ಕೆಲಸ ಹೋದೀತು. ಹಿರಿಯ ಜನರ ಸ್ವಜನ ಪಕ್ಷಪಾತ ಪ್ರವೃತ್ತಿಯಿಂದ ಉದ್ವೇಗ, ಬೇಸರ ತಂದೀತು. ಪ್ರಯಾಣ ಕಡಿಮೆ ಮಾಡಿರಿ. ಆರೋಗ್ಯವು ಕೆಡಲಿದೆ. ಕೆಟ್ಟ ಮಾತುಗಳನ್ನು ಕೇಳಬೇಕಾದೀತು. ಕೃಷಿ, ತೋಟ, ವನ್ಯ ಪದಾರ್ಥದ ಬೆಳೆ ಸಮೃದ್ಧಿಯಿಂದ ಆದಾಯ ಹೆಚ್ಚಿಸಿ ಕೊಟ್ಟಿತು. ಸಿಡುಕು ಜನವಿರೋಧ ತಂದೀತು. ಬಹುದಿನಗಳಿಂದ ಕಾಯುತ್ತಿದ್ದ ವಿದೇಶಯಾನವು ಕೈಗೂಡಲಿದೆ.
ಶುಭವಾರ: ಶನಿವಾರ ಶುಭ ರತ್ನ: ಇಂದ್ರನೀಲ
ಶುಭ ಸಂಖ್ಯೆ: 5, 6, 8 ಶುಭ ವರ್ಣ: ನೀಲಿ
ಶುಭ ದಿಕ್ಕು: ಪಶ್ಚಿಮ
ಮೀನ;(ಪೂರ್ವಾಭಾದ್ರ, ಉತ್ತರಾಭಾದ್ರ, ರೇವತಿ);ಗುರು ಹಾಗೂ ಶನಿಬಲದ ಅನುಕೂಲ ಸೇರಿ ದೈವಾನುಗ್ರಹದಿಂದ ವಿಶೇಷ ಭೀತಿ ಇರದು. ಕೆಲವೊಮ್ಮೆ ಅನಗತ್ಯ ಪ್ರಯಾಣ ಕಂಡುಬರಲಿದೆ. ನೀವು ಗ್ರಹಿಸಿದ ಕೆಲಸಗಳು ನಿಧಾನವಾಗಿ ನಡೆಯಲಿವೆ. ಹಿರಿಯ ಬಂಧುಗಳಿಂದ ವಿಶೇಷ ಸಹಕಾರ, ಅನೇಕ ವಿಧಗಳಿಂದ ಪ್ರಯೋಜನ ಪಡೆಯುವಿರಿ. ಆರ್ಥಿಕ ಪರಿಸ್ಥಿತಿ ಉತ್ತಮವಿರುತ್ತದೆ. ಗೃಹ ಸೌಕರ್ಯ ಹೊಂದುವಿರಿ. ಕೆಲವೊಂದು ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮಧ್ಯ ಭಾಗದಲ್ಲಿ ಕೊಂಚ ಆತಂಕಕಾರಿಯಾದರೂ ವಿವೇಚನೆ ಹರಿಸಿದರೆ ಅಭಿವೃದ್ಧಿ ಕಂಡುಬರುವುದು. ಕಫ ಬಾಧೆಯಿಂದ ಶಾರೀರಿಕ ಕ್ಲೇಶವಿದೆ. ನಿರುದ್ಯೋಗಿ ಗಳಿಗೆ ನೂತನ ಉದ್ಯೋಗ ದೊರಕಲಿದೆ. ರಾಜಕೀಯದಲ್ಲಿ ಉತ್ತಮ ಯಶಸ್ಸು ಕಂಡು ಬರಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ವ್ಯಾಸಂಗಕ್ಕಾಗಿ ದೂರ ಪ್ರಯಾಣ, ಜಾಣ್ಮೆ ವಹಿಸಿದಲ್ಲಿ ಸಿದ್ಧಿ ಇದೆ. ಉದ್ಯೋಗಿಗಳಿಗೆ ವ್ಯರ್ಥ ಅಲೆದಾಟವು ತೋರಿಬರಲಿದೆ. ಸ್ತ್ರೀ ಮೂಲಕ ಸಂಪತ್ತು ಅಭಿವೃದ್ಧಿ, ಯೋಗ್ಯ ವಯಸ್ಕರಿಗೆ ಅನಿರೀಕ್ಷಿತವಾಗಿ ಕಂಕಣಬಲ ಪ್ರಾಪ್ತಿಯಾದೀತು. ವಿಲಾಸಿ ವಸ್ತುಗಳ ಖರೀದಿ, ಬೆಳ್ಳಿ, ಬಂಗಾರ ಒಡವೆಗಳ ಖರೀದಿ ಗೃಹಿಣಿಗೆ ಸಂತಸ ತರಲಿದೆ. ನೂತನ ಸಂಬಂಧದ ಮಾತುಕತೆಗೆ ನಾಂದಿ ಹಾಡಲಿದೆ. ಹಿರಿಯರ ಆಶೀರ್ವಾದ ಪ್ರಚೋದನೆಯಿಂದ ದೇವತಾ ಕಾರ್ಯಗಳಿಗೆ ಸುಸಮಯವಿದು. ಸರಕಾರಿ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಆರೋಗ್ಯದ ಕೊರತೆಯು ಆಗಾಗ ಕಂಡುಬಂದರೂ ವಿಶೇಷ ಭೀತಿಗೆ ಅವಕಾಶವಿಲ್ಲ. ಪಿತ್ತಪ್ರಕೋಪದಿಂದ ಶಾರೀರಿಕ ಬಾಧೆ ಕಂಡುಬಂದೀತು. ಉದ್ಯೋಗಿಗಳಿಗೆ ಉದ್ಯೋಗ ಬದಲಾವಣೆ ಇದೆ. ವ್ಯವಹಾರದಲ್ಲಿ ಸಾಲ ವಾಪಸಾತಿಯಿಂದ ನೆಮ್ಮದಿ. ಮಕ್ಕಳ ಅಭಿವೃದ್ಧಿ ಸಂತಸ ತಂದೀತು. ದೇವತಾ ಕಾರ್ಯಗಳಿಗಾಗಿ ಖರ್ಚು, ಅನಿರೀಕ್ಷಿತ ಧನಲಾಭವು ಕಂಡುಬಂದೀತು.
ಶುಭವಾರ: ಗುರುವಾರ ಶುಭ ರತ್ನ: ಕನಕ ಪುಷ್ಯರಾಗ
ಶುಭ ಸಂಖ್ಯೆ:1, 3, 8, 9 ಶುಭ ವರ್ಣ: ಹಳದಿ
ಶುಭ ದಿಕ್ಕು: ಈಶಾನ್ಯ
*ಎನ್.ಎಸ್. ಭಟ್, ಮಣಿಪಾಲ