Advertisement
ಕರಾವಳಿ ಭಾಗದಲ್ಲಿ ಈ ವರ್ಷ ಜನವರಿಯಿಂದ ಡಿಸೆಂಬರ್‌ವರೆಗೆ ಪ್ರತೀ ತಿಂಗಳು ಮಳೆಯಾಗಿತ್ತು. ಹವಾಮಾನ ಇಲಾಖೆಯ ವಾಡಿಕೆ ಯಂತೆ ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ಪೂರ್ವ ಮುಂಗಾರು, ಜೂನ್ ತಿಂಗಳಿನನಿಂದ ಸೆಪ್ಟಂಬರ್‌ವರೆಗೆ ಮುಂಗಾರು ಮತ್ತು ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಹಿಂಗಾರು ಋತು ಇರುತ್ತದೆ. ಈ ವೇಳೆ ಸಾಮಾನ್ಯವಾಗಿ ಮಳೆಯಾ ಗುತ್ತದೆ. ಆದರೆ ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಅಷ್ಟಾಗಿ ಮಳೆಯಾಗುವುದಿಲ್ಲ. ಆದರೆ ಈ ಬಾರಿ ಈ ಮೂರೂ ತಿಂಗಳು ಸೇರಿ ವರ್ಷವಿಡೀ ಕರಾವಳಿ ಭಾಗದಲ್ಲಿ ಉತ್ತಮ ವರ್ಷ ಧಾರೆ ಸುರಿ ದಿದೆ. ಕಳೆದ ವರ್ಷ ಮಾರ್ಚ್ ಆರಂಭಗೊಂಡು ವರ್ಷಾಂತ್ಯದವರೆಗೆ ಮಳೆಯಾಗಿತ್ತು. ಅದಕ್ಕಿಂತ ಮೊದಲು ಈ ರೀತಿ ಮಳೆ ಸುರಿದಿರುವ ಮಾಹಿತಿ ಲಭ್ಯವಿಲ್ಲ.
ಮುಂಗಾರಿನಲ್ಲಿ 131.2 ಮಿ.ಮೀ. ವಾಡಿಕೆ ಮಳೆಯಾಗ ಬೇಕಿತ್ತು. ಆದರೆ 394 ಮಿ.ಮೀ. ಮಳೆಯಾಗಿತ್ತು. ಅನಂತರ ಮುಂಗಾರು ವೇಳೆ ಮಾತ್ರ ವಾಡಿಕೆಯಂತೆ ಮಳೆ ಸುರಿದಿರಲಿಲ್ಲ. 3 ವರ್ಷದ ಬಳಿಕ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಮುಂಗಾರು ಪೂರ್ಣಗೊಳ್ಳುವ ವೇಳೆ ರಾಜ್ಯ ಕರಾವಳಿ ಭಾಗದಲ್ಲಿ ಶೇ.13 ಮತ್ತು ಮಲೆನಾಡಿನಲ್ಲಿ ಶೇ.18ರಷ್ಟು ಮಳೆ ಕೊರತೆ ಉಂಟಾಗಿತ್ತು. ಇದೀಗ ಹಿಂಗಾರು ಅವಧಿ ಋತು ಕರಾವಳಿ ಪಾಲಿಗೆ ಉತ್ತಮವಾಗಿದೆ. ಇದನ್ನೂ ಓದಿ:2022ರೊಳಗೆ 11 ಲಕ್ಷ ಮನೆ ನಿರ್ಮಾಣ ಪೂರ್ಣ: ಸಚಿವ ವಿ.ಸೋಮಣ್ಣ
Related Articles
ಕರಾವಳಿಯಾದ್ಯಂತ ಈ ಬಾರಿ ಉತ್ತಮವಾಗಿ ಹಿಂಗಾರು ಮಳೆ ಸುರಿಯುತ್ತಿದೆ. ವಾಡಿಕೆಯಂತೆ ಅಕ್ಟೋ ಬರ್ 1ರಿಂದ ಡಿಸೆಂಬರ್ ವರೆಗೆ ಹಿಂಗಾರು ಇರುತ್ತದೆ. ಈ ವೇಳೆ ಕರಾವಳಿಯಲ್ಲಿ 259 ಮಿ.ಮೀ. ಮಳೆಸುರಿಯಬೇಕು. ಈ ಅವಧಿ ಪೂರ್ಣ ಗೊಳ್ಳಲು ಇನ್ನೂ ಮೂರು ವಾರ ಇರುವಾಗಲೇ 576 ಮಿ.ಮೀ. ಮಳೆಯಾಗಿ ವಾಡಿಕೆಗಿಂತ ಶೇ.125 ಮಿ.
ಮೀ. ಹೆಚ್ಚಳವಾಗಿದೆ. ದ.ಕ. ಜಿಲ್ಲೆ ಯಲ್ಲಿ 371 ಮಿ.ಮೀ. ವಾಡಿಕೆ ಮಳೆಯಲ್ಲಿ 817 ಮಿ.ಮೀ., ಉಡುಪಿ ಜಿಲ್ಲೆಯಲ್ಲಿ 308 ಮಿ.ಮೀ. ವಾಡಿಕೆ ಯಲ್ಲಿ 736 ಮಿ.ಮೀ. ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 185 ಮಿ.ಮೀ. ವಾಡಿಕೆ ಮಳೆಯಾಗುವಲ್ಲಿ 406 ಮಿ.ಮೀ. ಮಳೆ ಸುರಿದಿದೆ. ಹಿಂಗಾರು ಪೂರ್ಣ ಗೊಳ್ಳಲು ಇನ್ನೂ 15 ದಿನಗಳಿದ್ದು, ಮತ್ತಷ್ಟು ಮಳೆ ಯಾಗುವ ನಿರೀಕ್ಷೆ ಇದೆ.
Advertisement
ಹವಾಮಾನ ವೈಪರೀತ್ಯಹವಾಮಾನ ವೈಪರಿತ್ಯದ ಪರಿಣಾಮಾವಾಗಿ ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿದೆ. ರಾಜ್ಯದಲ್ಲಿ 2020ನೇ ವರ್ಷದಿಂದ 2100ನೇ ವರ್ಷದವರೆಗೆ ಮಳೆ ಪ್ರಮಾಣ ಹೇಗಿರಬಹುದು ಎಂದು ತಿಳಿಯಲು “ಗ್ಲೋಬಲ್ ಸರ್ಕುಲೇಶನ್ ಮಾಡೆಲ್’ ಸಹಾಯದಿಂದ ಈಗಾಗಲೇ ಸಂಶೋಧನೆ ನಡೆಸಲಾಗಿದೆ. ಅದರಲ್ಲಿ ಕಂಡುಬಂದಂತೆ ಮುಂದಿನ ವರ್ಷಗಳಲ್ಲಿ ಒಟ್ಟಾರೆ ಮಳೆ ಪ್ರಮಾಣ ಹೆಚ್ಚಾದರೂ ಮುಂಗಾರು ಅವಧಿಯ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ. ಆ ಸಮಯದ ಉಳಿಕೆ ಮಳೆಯು ಹಿಂಗಾರು, ಪೂರ್ವ ಮುಂಗಾರು ಅವಧಿಯಲ್ಲಿ ಸುರಿಯಲಿದೆ. ಈ ಅಸಮರ್ಪಕತೆಯ ನೇರ ಪೆಟ್ಟು ಕೃಷಿಕರಿಗೆ ಬೀಳಲಿದ್ದು, ಆ ವೇಳೆ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಬೆಳೆ ಆರಿಸುವುದು ಅನಿವಾರ್ಯವಾಗುತ್ತದೆ.
– ಡಾ| ರಾಜೇಗೌಡ, ಕೃಷಿ ವಿ.ವಿ. ಹವಾಮಾನ ವಿಜ್ಞಾನಿ