Advertisement
– ಇದು ಲಸಿಕೆ ಪ್ರಕ್ರಿಯೆಯಲ್ಲಿ ದೇಶದ ಸಾಧನೆ. ಸರಿಯಾಗಿ ಒಂದು ವರ್ಷದ ಹಿಂದೆ, ಅಂದರೆ 2021ರ ಜ. 16ರಂದು ದೇಶಾದ್ಯಂತ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಕೆಲಸ ಆರಂಭವಾಯಿತು. ಈ ಒಂದು ವರ್ಷದಲ್ಲಿ ಒಟ್ಟು 157 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಿದ್ದು, ಕಡಿಮೆ ಸಮಯದಲ್ಲೇ ಇಷ್ಟು ಪ್ರಮಾಣದ ಮಂದಿಗೆ ಲಸಿಕೆ ನೀಡಿದ ದಾಖಲೆಯನ್ನು ಭಾರತ ನಿರ್ಮಾಣ ಮಾಡಿದೆ.
ಲಸಿಕಾ ಸಾಧನೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಕೇಂದ್ರ ಸರಕಾರದ ಮೈಗೌವ್ ಇಂಡಿಯಾ ವೆಬ್‌ಸೈಟ್‌ನಲ್ಲಿ ವರ್ಷದ ಸಾಧನೆ ಬಗ್ಗೆ ಸಂಪೂರ್ಣ ಮಾಹಿತಿ ಹಂಚಿಕೊಳ್ಳಲಾಗಿದೆ.
Related Articles
Advertisement
ವಿಶ್ವಕ್ಕೆ ಭಾರತ ಮಾದರಿಕೊರೊನಾ ಲಸಿಕೆ ವಿತರಣೆಯಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗುವ ಸಾಧನೆ ಮಾಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್ ಹೇಳಿದ್ದಾರೆ. ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ವರ್ಷವಾಗಿದೆ. ದೇಶ157 ಕೋಟಿ ಡೋಸ್ ಲಸಿಕೆಗಳನ್ನು ನೀಡಿ ಐತಿಹಾಸಿಕ ಸಾಧನೆ ಮಾಡಿದೆ ಎಂದಿದ್ದಾರೆ. ದಾಖಲೆ ನಿರ್ಮಾಣ
12 ರಾಜ್ಯ/ಕೇಂದ್ರಾಡಳಿತ ಪ್ರದೇಶ ಗಳಲ್ಲಿ ಶತ ಪ್ರತಿಶತ ಸಿಂಗಲ್ ಡೋಸ್ 26 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಲಸಿಕೆ 07 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ. 95ರಷ್ಟು ಎರಡು ಡೋಸ್ 18ಕ್ಕಿಂತ ಹೆಚ್ಚು ವಯಸ್ಸಿನ ಶೇ. 93 ರಷ್ಟು ಮಂದಿಗೆ ಒಂದು ಡೋಸ್, ಶೇ.69 ಮಂದಿಗೆ 2 ಡೋಸ್