ಇಂಫಾಲ: ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆ ಆರಂಭವಾಗಿ ಶುಕ್ರವಾರಕ್ಕೆ ಸರಿಯಾಗಿ ಒಂದು ವರ್ಷ ತುಂಬಲಿದೆ. ಈವರೆಗೆ ಈ ಗಲಭೆಯಿಂದ 200ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಸಾವಿರಾರು ಮಂದಿ ನಿರ್ವಸಿತರಾಗಿದ್ದಾರೆ.
ಇದನ್ನೂ ಓದಿ:KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವಿರುದ್ದ ತನಿಖೆಗೆ ಆಗ್ರಹ
ಈ ನಡುವೆ ಕುಕಿ-ಮೈತೇಯಿ ಸಮುದಾಯಗಳ ನಡುವೆ ವಿವಾಹವಾಗಿರುವ, ಹಲವು ಕುಟುಂಬಗಳ ಬಿಕ್ಕಟ್ಟು ಮುಂದುವರಿದಿದೆ. ಸಂಸಾರಗಳು ಒಟ್ಟಿಗಿರಲಾಗದೇ ಒದ್ದಾಡುತ್ತಿವೆ. ಇರೆನ್ ಹಾವೋ ಕಿಪ್ ಎಂಬ ಕುಕಿ ಮಹಿಳೆ, ಮೈತೇಯಿ ಸಮುದಾಯಕ್ಕೆ ಸೇರಿದ ತನ್ನ ಪತಿಯನ್ನು ನೋಡದೇ ಒಂದು ವರ್ಷ ಕಳೆದಿದೆ!
2018ರಲ್ಲಿ ಇರೆನ್ ವಿವಾಹವಾಗಿದ್ದರು.ಇವರಿಗೆ 5 ವರ್ಷದ ಒಬ್ಬ ಮಗ, 3 ವರ್ಷದ ಮಗಳು ಇದ್ದಾರೆ. ಘರ್ಷಣೆ ಶುರುವಾದಾಗ, ಕುಕಿ ಸಮುದಾಯಕ್ಕೆ ಸೇರಿದ ಪತ್ನಿ ಇರೆನ್‌ರನ್ನು, ಸುರಕ್ಷತೆ ದೃಷ್ಟಿಯಿಂದ ಪತಿ ತವರು ಮನೆಗೆ ಕಳಿಸಿದ್ದರು. ಮಕ್ಕಳನ್ನು ತನ್ನಲ್ಲಿಯೇ ಉಳಿಸಿಕೊಂಡಿದ್ದರು. ಈಗ ಗಂಡ-ಹೆಂಡತಿ ಮತ್ತೆ ಪರಸ್ಪರ ಮುಖ ನೋಡುವುದು, ಒಟ್ಟಾಗಿ ಬದುಕುವುದು ಯಾವಾಗ ಎಂಬ ಪ್ರಶ್ನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇಂಥದ್ದೇ ಸಮಸ್ಯೆ ಯನ್ನು ಹಲವು ಕುಟುಂಬಗಳು ಎದುರಿಸುತ್ತಿವೆ.