Advertisement
ಡಿಸೆಂಬರ್ ಬಂತೆಂದರೆ ಸಾಕು, ಇದು ಕಾರು, ಬೈಕುಗಳ ಖರೀದಿಗೆ ಸುಗ್ಗಿ ಕಾಲ. ಒಂದು ವರ್ಷ ಮುಗಿಯುವ ವೇಳೆ, ಮತ್ತೂಂದು ಆಫರ್‌ಗಳ ಮೇಳ. ಈ ತಿಂಗಳೇ ತನ್ನಲ್ಲಿರುವ ಸ್ಟಾಕ್ ಕ್ಲಿಯರ್ ಮಾಡಿಕೊಳ್ಳಬೇಕು ಎಂಬ ಆಸೆ ಕಾರು ಕಂಪನಿಗಳಿಗೆ. ಹಾಗೆಯೇ, ಏನಾದರೂ ಆಫರ್ ಸಿಕ್ಕಿಯೇ ಸಿಕ್ಕುತ್ತದೆ. ಈ ತಿಂಗಳೇ ಖರೀದಿ ಮಾಡೋಣ ಎಂಬ ಆಸೆ ಗ್ರಾಹಕರಿಗೆ. ಹೀಗಾಗಿ, ಈ ತಿಂಗಳು ಕಾರು ಮಾರಾಟದಲ್ಲಿ ಒಂದಷ್ಟು ಬ್ಯುಸಿ ಕಾಲ.
Related Articles
Advertisement
ಮಾರುತಿ ಸುಜುಕಿ: ಮಾರುತಿ ಸಂಸ್ಥೆ, ತನ್ನೆಲ್ಲಾ ಕಾರುಗಳ ಮೇಲೆ ಕನ್ಸೂಮರ್, ಎಕ್ಸ್ಚೇಂಜ್, ಕಾರ್ಪೊರೇಟ್ ಸೇರಿದಂತೆ ಹಲವಾರು ಆಫರ್‌ಗಳನ್ನು ನೀಡುತ್ತಿದೆ. ಇದು ಮಾರುತಿಯ ಆಲ್ಟೋ, ಆಲ್ಟೋ ಕೆ10, ಸ್ವಿಫ್ಟ್, ವಿಟಾರಾ ಬ್ರಿಜಾ, ಡಿಸೈರ್, ಸೆಲಾರಿಯೋ ಮತ್ತು ಇಕೋಗೂ ಅನ್ವಯವಾಗಲಿದೆ. ಕನ್ಸೂಮರ್ ಆಫರ್ 25 ಸಾವಿರದಿಂದ ಆರಂಭವಾಗಿ 40,000 ರೂ. ವರೆಗೆ ಇದೆ. ಹಾಗೆಯೇ ಎಕ್ಸ್ಚೇಂಜ್ ಆಫರ್, 15 ರಿಂದ 20 ಸಾವಿರದ ತನಕ ಇದೆ. ಕಾರ್ಪೊರೇಟ್ ಆಫರ್ 2,500 ಯಿಂದ 10 ಸಾವಿರದವರೆಗೆ ನೀಡಲಾಗಿದೆ. ಹಾಗೆಯೇ ನೆಕ್ಸಾದಲ್ಲಿ ಮಾರಾಟ ಮಾಡುವ ಎಕ್ಸ್‌ಎಲ್6, ಸಿಯಾಜ್, ಬಲೆನೋ, ಎಸ್ ಕ್ರಾಸ್, ಇಗ್ನಿಸ್‌ನಲ್ಲಿಯೂ ಆಫರ್‌ಗಳನ್ನು ಘೋಷಿಸಲಾಗಿದೆ.
ಹುಂಡೈ: ಹುಂಡೈ ಕೂಡ ಆಫರ್ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸ್ಯಾಂಟ್ರೋಗೆ 50 ಸಾವಿರ, ಗ್ರಾಂಡ್ ಐ10ಗೆ 75 ಸಾವಿರ, ಗ್ರಾಂಡ್ ಐ10 ನಿಯೋಸ್ ಗೆ 20 ಸಾವಿರ, ಎಲೈಟ್ ಟಿ20ಗೆ 65 ಸಾವಿರ, ಎಕ್ಸೆಂಟ್‌ಗೆ 95 ಸಾವಿರ, ಕ್ರೀಟಾಗೆ 95 ಸಾವಿರ, ವರ್ನಾಗೆ 60 ಸಾವಿರ, ಟುಸ್ಕಾನ್‌ಗೆ 2 ಲಕ್ಷದವರೆಗೆ ಗ್ರಾಹಕರಿಗೆ ಪ್ರಯೋಜನಗಳನ್ನು ಕಲ್ಪಿಸಿಕೊಡಲಾಗಿದೆ. ಈ ಆಫರ್‌ಗಳು ವಿವಿಧ ಮಾಡೆಲ್‌ಗಳಲ್ಲಿ ಬದಲಾಗುತ್ತದೆ ಎಂದು ಹುಂಡೈ ಹೇಳಿಕೊಂಡಿದೆ.
ಟಾಟಾ: ಟಾಟಾ ಕಂಪನಿ ಕೂಡ ಡಿಸೆಂಬರ್‌ಗಾಗಿ ಹಲವಾರು ಆಫರ್ ಬಿಟ್ಟಿದೆ. ಟಿಯಾಗೋದಿಂದ ಹಿಡಿದು, ನಿಕ್ಸಾನ್, ಟಾಟಾ ಹ್ಯಾರಿಯರ್, ಹೆಕ್ಸಾದ ವರೆಗೆ ಹಲವಾರು ರೀತಿಯ ಆಫರ್‌ಗಳನ್ನು ನೀಡುತ್ತಿದೆ. ಎಕ್ಸ್‌ಜೇಂಜ್ ಆಫರ್, ಕನ್ಸೂಮರ್ ಆಫರ್, ಕಾರ್ಪೊರೆಟ್ ಆಫರ್ ನೀಡುತ್ತಿದೆ. ಇದು 15 ಸಾವಿರದಿಂದ ಹಿಡಿದು, 50 ಸಾವಿರ ರೂ.ಗಳ ವರೆಗೂ ಆಫರ್ ಸಿಗುತ್ತದೆ. ಕೆಲವು ವೆಬ್‌ಸೈಟ್‌ಗಳ ಪ್ರಕಾರ, 15 ಸಾವಿರದಿಂದ ಡಿಸ್ಕೌಂಟ್ ಆರಂಭವಾಗಿ, 50 ಸಾವಿರ ರೂ.ಗೂ ಹೆಚ್ಚು ನೀಡಲಾಗುತ್ತಿದೆ. ಹಾಗೆಯೇ, ವಾರೆಂಟಿಯಂಥ ಆಫರ್‌ಗಳನ್ನೂ ನೀಡಲಾಗುತ್ತಿದೆ.
ಹುಂಡೈ ವೆನ್ಯೂ 1,00,000 ಕಾರುಗಳ ಬುಕ್ಕಿಂಗ್: ಆಟೋ ಮೊಬೈಲ್ ಇಂಡಸ್ಟ್ರಿ ಕುಸಿತ ಕಾಣುತ್ತಿದೆ ಎಂಬ ಆತಂಕಗಳ ನಡುವೆಯೇ ದೇಶದ ಪ್ರಮುಖ ಕಾರು ಮಾರಾಟಗಾರ ಕಂಪನಿ ಹುಂಡೈನ ವೆನ್ಯೂ ಕಾರು, 2019ರಲ್ಲಿ 1,00000 ಕಾರುಗಳ ಮಾರಾಟದ ಸನಿಹಕ್ಕೆ ಬಂದು ನಿಂತಿದೆ. ಈ ವರ್ಷದ ಮೇ ತಿಂಗಳಲ್ಲಿ ಈ ಕಾರನ್ನು ಲಾಂಚ್ ಮಾಡಲಾಗಿದ್ದು, ಅಲ್ಲಿಂದ ನವೆಂಬರ್ ವೇಳೆಗೆ 90 ಸಾವಿರ ಕಾರುಗಳ ಬುಕ್ಕಿಂಗ್ ಆಗಿದೆ. ಅತ್ಯಾಧುನಿಕ ತಾಂತ್ರಿಕತೆ ಹೊಂದಿರುವ ಈ ಕಾರನ್ನು ಜನರೂ ಇಷ್ಟಪಡುತ್ತಿದ್ದಾರೆ ಎಂದು ಹುಂಡೈ ಕಂಪನಿಯ ಎಸ್.ಎಸ್.ಕಿಮ್ ಹೇಳಿಕೊಂಡಿದ್ದಾರೆ. ವಿಶೇಷವೆಂದರೆ, ಇದು ಮೇಡ್ ಇನ್ ಇಂಡಿಯಾ ಕಾರಾಗಿದ್ದು, ಇದನ್ನು ದಕ್ಷಿಣ ಆಫ್ರಿಕಾಗೂ ರಫ್ತು ಮಾಡಲು ಆರಂಭಿಸಲಾಗಿದೆ. ಡಿ.2 ರಂದು ಚೆನ್ನೈ ಬಂದರಿನಿಂದ 1400 ಕಾರುಗಳನ್ನು ಕಳುಹಿಸಲಾಗಿದೆ.
* ಸೋಮಶೇಖರ ಸಿ. ಜೆ.