ಬ್ಯಾಂಕಾಕ್: ಅಸುನೀಗಿದ ಎಷ್ಟು ದಿನಗಳ ಬಳಿಕ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನಡೆಸಬಹುದು? ಸಾಮಾನ್ಯವಾಗಿ 11 ದಿನಗಳ ಬಳಿಕ. ಮತ್ತೆ ಆಯಾ ಧರ್ಮಗಳಲ್ಲಿ ಉಲ್ಲೇಖೀಸಿದಂತೆ ವಿಧಿ ವಿಧಾನಗಳನ್ನು ಅನುಸರಿಸಲಾಗುತ್ತದೆ. ಇಲ್ಲಿ ಹೇಳಹೊರಟಿರುವ ವಿಚಾರವೆಂದರೆ ಥಾçಲಂಡ್ ರಾಜನ ಅಂತ್ಯಕ್ರಿಯೆ ಬಗ್ಗೆ. ರಾಜ ಭೂಮಿಬೋಲ್ ಅಡ್ಯುಲೆಡ್ಜ್ ಅವರು 2016ರ ಅಕ್ಟೋಬರ್‌ನಲ್ಲಿ ನಿಧನ ಹೊಂದಿದ್ದರು.
ಅವರ ಅಂತ್ಯಕ್ರಿಯೆ ಈ ತಿಂಗಳಲ್ಲಿ ಅಂದರೆ ಗುರುವಾರ ಮುಕ್ತಾಯವಾಯಿತು. ಅಂದರೆ ಬರೋಬ್ಬರಿ ಒಂದು ವರ್ಷದ ಬಳಿಕ ಅಂತಿಮ ವಿದಾಯ ಕಾರ್ಯಕ್ರಮ ನಡೆಸಿಕೊಡಲಾಗಿದೆ.
ಥಾç ಸಂಪ್ರಯದಾಯದಂತೆ ಅಗಲಿದ ರಾಜನಿಗೆ ವರ್ಷಪೂರ್ತಿ ಗೌರವ ಸಲ್ಲಿಸಿ, ಅರಮನೆಯಲ್ಲಿ ಬಂಗಾರದ ಚಿತಾಗಾರದಲ್ಲಿ ಸಂಸ್ಕಾರ ನಡೆಸಲಾಗುತ್ತಿದೆ. ದೊರೆಯ ಪಾರ್ಥಿವ ಶರೀರ ಹೊತ್ತು ತಂದ ರಥ 18ನೇ ಶತಮಾನದ್ದು. ಇದು 14 ಟನ್ ತೂಕವಿದೆ. ಇದನ್ನು 200 ಸೈನಿಕರು ಚಿತಾಗಾರಕ್ಕೆ ತಂದರು. ಪ್ರಮುಖ ರಸ್ತೆಗಳಲ್ಲಿ ಅಂತಿಮ ಯಾತ್ರೆ ನೋಡಲು ಸಾವಿರಾರು ಮಂದಿ ಸೇರಿದ್ದರು. ಡ್ರಮ್‌ಗಳು, ಸಾಂಪ್ರದಾಯಕ ಸಂಗೀತ, ಕೊಳಲು ವಾದನ, ಸೇನೆಯ ಗೌರವಗಳ ಮಧ್ಯೆ ಅದ್ದೂರಿ ಸಾರೋಟಿನಲ್ಲಿ ಸಾಂಕೇತಿಕ ವಾದ ಅಂತಿಮ ಯಾತ್ರೆಸಾಗಿತ್ತು. ರಸ್ತೆಗಳಿಗೆ ಹಳದಿ ಬಣ್ಣ ಬಳಿಯಲಾಗಿತ್ತು. ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರು ಕಪ್ಪು ವಸ್ತ್ರಗಳನ್ನು ತೊಟ್ಟಿದ್ದರು. ಒಟ್ಟು ಐದು ದಿನಗಳ ಕಾಲ ಅಂತಿಮ ಸಂಸ್ಕಾರದ ಕಾರ್ಯಕ್ರಮ ನಡೆಯುತ್ತದೆ. ಅರಮನೆಯಲ್ಲಿ ಭುಮಿ ಬೊಲ್ ಪುತ್ರ, ಈಗಿನ ರಾಜ ಮಹಾ ವಾಜಿರಲಂಗ್‌ಕೋರ್° ತಂದೆಯ ಮೃತ ದೇಹಕ್ಕೆ ಅಗ್ನಿಸ್ಪರ್ಶ ಮಾಡಿದರು.