Advertisement

Manjunath Bhandary ಸೌಲಭ್ಯಕ್ಕಾಗಿ ದಿಲ್ಲಿ ಯಾತ್ರೆ ಮಾಡಿ: ಬಿಜೆಪಿಗೆ ಭಂಡಾರಿ ಸಲಹೆ

12:46 AM Jul 31, 2024 | Team Udayavani |

ಬೆಂಗಳೂರು: ರಾಜ್ಯದ ಜನರಿಗೆ ಸೌಲಭ್ಯ ಕಲ್ಪಿಸಲು ಬಿಜೆಪಿಯವರು ದಿಲ್ಲಿ ಯಾತ್ರೆ ಮಾಡಬೇಕಿತ್ತು. ಆದರೆ ಮೈಸೂರು ಯಾತ್ರೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ವಿಪಕ್ಷಗಳ ಯಾತ್ರೆ ಹಾದಿತಪ್ಪಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಟೀಕಿಸಿದ್ದಾರೆ.

Advertisement

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ಅನುದಾನ ಕೊಟ್ಟಿಲ್ಲ. ರಾಜಕೀಕರಣಕ್ಕೋಸ್ಕರ ಮೈಸೂರು ಚಲೋ ಬದಲು, ಅದನ್ನು ರದ್ದು ಮಾಡಿ ರಾಜ್ಯದ ಜನರಿಗೋಸ್ಕರ, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಲು ದಿಲ್ಲಿ ಚಲೋ ಮಾಡಬೇಕು ಎಂದು ಆಗ್ರಹಿಸಿದ ಅವರು, ತಮ್ಮ 21 ಹಗರಣಗಳು ಬಯಲಾ ಗುವ ಭಯದಲ್ಲಿ ಬಿಜೆಪಿ, ಜೆಡಿಎಸ್‌ಮೈತ್ರಿ ಪಕ್ಷದವರು ಪಾದಯಾತ್ರೆಯ ನಾಟಕ ಆರಂಭಿಸಿ, ಜನರ ದಾರಿ ಯನ್ನೂ ತಪ್ಪಿಸುತ್ತಿದ್ದಾರೆ ಎಂದರು.

ಬಜೆಟ್‌ ಮೇಲೆ ಭಾಷಣ ನಡೆಯುತ್ತಿದ್ದರೂ ರಾಜ್ಯದ ಮೈತ್ರಿ ನಾಯಕರು ಅಲ್ಲಿ ಈ ಬಗ್ಗೆ ಧ್ವನಿ ಎತ್ತಿಲ್ಲ. ಜಿಎಸ್‌ಟಿ ಪಾಲನ್ನೂ ರಾಜ್ಯಕ್ಕೆ ಸಮರ್ಪಕವಾಗಿ ನೀಡಿಲ್ಲ. ಆಗಿರುವ ಅನ್ಯಾಯದ ಬಗ್ಗೆ ಪ್ರತಿಭಟನೆ ಮಾಡಬೇಕಿದ್ದವರು, ಅದಕ್ಕಾಗಿ ದಿಲ್ಲಿ ಚಲೋ ಮಾಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊನೆಯ ಯಾತ್ರೆಯಾದೀತು
ಈ ಹಿಂದೆ ಬಿಜೆಪಿಯವರು ವಿಪರೀತ ಭ್ರಷ್ಟಾಚಾರ, ರಾಜ್ಯದ ಜನರಿಗೆ ಅನ್ಯಾಯ, ಮೋಸ, ಸುಳ್ಳು ಹೇಳಿ ರಾಜ್ಯದ ಮಾನ ಹರಾಜು ಹಾಕಿದ್ದಕ್ಕೆ, ರಾಜ್ಯದ ಹೆಸರಿಗೆ ಕಪ್ಪುಮಸಿ ಬಳಿಯಲು ಯತ್ನಿಸಿದ್ದಕ್ಕೆ ರಾಜ್ಯದ ಜನ ವಿಧಾನಸಭೆ ಚುನಾವಣೆಯಲ್ಲಿ
ಕಾಂಗ್ರೆಸ್‌ ಬೆಂಬಲಿಸಿದರು. ಲೋಕಸಭಾ ಚುನಾವಣೆಯಲ್ಲಿ ಚಾರ್‌ ಸೌ ಪಾರ್‌ ಎನ್ನುತ್ತಿದ್ದವರಿಗೆ 240ಕ್ಕೆ ಸೀಮಿತಗೊಳಿಸಿದರು. ಇದು ಇವರ ಕೊನೆಯ ಯಾತ್ರೆಯಾಗಲಿದೆ ಎಂದು ಭಂಡಾರಿ ಹೇಳಿದ್ದಾರೆ.

ಬಿಜೆಪಿಯವರಲ್ಲೇ ಸಾಮರಸ್ಯ ವಿಲ್ಲ. ವಿಪಕ್ಷವಾಗಿ ಪ್ರಜಾಪ್ರಭುತ್ವದ ಕಾವಲು ನಾಯಿಯಾಗಬೇಕಿದ್ದವರು ಕವಲು ದಾರಿಯಲ್ಲಿ ಹೋಗುತ್ತಿದ್ದಾರೆ. ಕಚ್ಚಾಡುತ್ತಿದ್ದಾರೆ. ಒಂದೆಡೆ ಮೈಸೂರಿಗೆ ಪಾದಯಾತ್ರೆ ಮಾಡುತ್ತೇವೆ ಎಂದಿದ್ದರೆ, ಬಸವಕಲ್ಯಾಣ ದಿಂದ ಬಳ್ಳಾರಿಗೆ ಪಾದಯಾತ್ರೆ ಮಾಡುತ್ತೇವೆ ಅಂತ ಇನ್ನೊಂದಿಷ್ಟು ನಾಯಕರು ಹೇಳುತ್ತಿದ್ದಾರೆ. ಅವರ ಅಸ್ತಿತ್ವ ನಾಯಕತ್ವ ಪೈಪೋಟಿಗಾಗಿ ನಡೆಯುತ್ತಿರುವ ಯಾತ್ರೆ ಇದಾಗಿದೆ. ಈಚೆಗೆ ನಡೆದ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಶಾಸಕರು ಪಾಲ್ಗೊಂ ಡಿಲ್ಲ. ಜಿ.ಟಿ. ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು ಎಂದೂ ಲೇವಡಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next