Advertisement

Karnataka ರಾಜ್ಯಪಾಲರ ಕಚೇರಿ ದುರುಪಯೋಗ: ಮಂಜುನಾಥ ಭಂಡಾರಿ

11:41 PM Aug 19, 2024 | Team Udayavani |

ಉಡುಪಿ: ಗ್ಯಾರಂಟಿ ಯೋಜನೆಯ ಸಮರ್ಪಕ ಅನುಷ್ಠಾನದ ಮೂಲಕ ಜನ ಪರವಾದ ಸರಕಾರವನ್ನು ಅಸ್ಥಿರಗೊಳಿಸಲು ರಾಜ್ಯ ಪಾಲರ ಕಚೇರಿಯನ್ನು ಬಿಜೆಪಿ ದುರುಪಯೋಗ ಮಾಡಿಕೊಂಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಎಂಎಲ್‌ಸಿ ಮಂಜುನಾಥ ಭಂಡಾರಿ ಆರೋಪಿಸಿದರು.

Advertisement

ಕಾಂಗ್ರೆಸ್‌ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರಕಾರವು ಈಗಾಗಲೇ ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ದಿಲ್ಲಿ ಮೊದಲಾದ ರಾಜ್ಯಗಳಲ್ಲಿ ರಾಜ್ಯಪಾಲರ ಕಚೇರಿಯನ್ನು ದುರುಪಯೋಗಿಸಿಕೊಂಡು ಅಲ್ಲಿನ ಸರಕಾರ ಗಳನ್ನು ಅಸ್ಥಿರಗೊಳಿಸಿದೆ. ಅದೇ ಪ್ರಯತ್ನ ವನ್ನು ಕರ್ನಾಟಕದಲ್ಲೂ ನಡೆಸುತ್ತಿದೆ.

ಸಿದ್ದರಾಮಯ್ಯನವರ ಜನ ಪ್ರಿಯತೆಯನ್ನು ಸಹಿಸಲಾಗದೇ ಹೀಗೆ ಮಾಡಲಾಗುತ್ತಿದೆ ಎಂದು ಆಪಾದಿಸಿದರು.

ರಾಜ್ಯಪಾಲರು ರಾಜಕಾರಣಿ ಯಾಗಬಾರದು ಎಂದು ಹೇಳಿದ ಅವರು, ರಾಜ್ಯಪಾಲರ ನಡೆಯನ್ನು ಖಂಡಿಸುತ್ತೇವೆ ಎಂದು ಹೇಳಿದರು.

ಕಪ್ಪು ಚುಕ್ಕಿ ತರುವ ಪ್ರಯತ್ನ: ಹೆಗ್ಡೆ
ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಮಾತನಾಡಿ, ಸಿದ್ದರಾಮಯ್ಯ ಮೇಲೆ ರಾಜಕೀಯವಾಗಿ ಕಪ್ಪು ಚುಕ್ಕಿ ತರುವ ಪ್ರಯತ್ನವಿದು. ಅವರನ್ನು ಆಡಳಿತ ಹಾಗೂ ವಿಪಕ್ಷದಲ್ಲಿದ್ದಾಗಲೂ ಕಂಡಿದ್ದೇನೆ. ನಾವು ವಿಪಕ್ಷದಲ್ಲಿದ್ದಾಗೂ ಅವರನ್ನು ವಿರೋಧಿಸಲು ನಮಗೆ ಯಾವುದೇ ವಿಷಯ ಸಿಕ್ಕಿರಲಿಲ್ಲ. ಹೀಗಾಗಿ ಕಳಂಕ ರಹಿತವಾದ ವ್ಯಕ್ತಿಗೆ ಕಳಂಕ ತರುವ ಪ್ರಯತ್ನ ನಡೆಸಲಾಗುತ್ತಿದೆ. ಇದರ ವಿರುದ್ಧ ಕಾನೂನಾತ್ಮಕ ಹಾಗೂ ರಾಜಕೀಯವಾಗಿ ಹೋರಾಟ ಮಾಡುತ್ತೇವೆ ಎಂದರು.

Advertisement

ನೈತಿಕತೆ ಇಲ್ಲದವರು ಮುಖ್ಯಮಂತ್ರಿ ಯ ರಾಜೀ ನಾಮೆ ಕೇಳುತ್ತಿದ್ದಾರೆ. ಮಾಜಿ ಮಂತ್ರಿಯೊಬ್ಬರು ಪರಶುರಾಮನ ಹೆಸರಿನಲ್ಲಿ ರಾಜಕೀಯ ಮಾಡಿ, ಫೈಬರ್‌ ಪ್ರತಿಮೆಯನ್ನು ತಂದಿಟ್ಟು ಈಗ ಸಿಎಂ ರಾಜೀನಾಮೆಗಾಗಿ ಆಗ್ರಹಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next