Advertisement

Waqf Act; 1995ರ ವಕ್ಫ್ ಕಾಯ್ದೆ ರದ್ದುಪಡಿಸಲು ಮೋದಿಗೆ ಶಾಸಕ ಯತ್ನಾಳ್‌ ಪತ್ರ

12:00 AM Aug 05, 2024 | Team Udayavani |

ಬೆಂಗಳೂರು: 1995ರ ಅಸಂವಿಧಾನಿಕ ಮತ್ತು ಕರಾಳ ವಕ್ಫ್ ಕಾಯ್ದೆ ರದ್ದುಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಗ್ರಹಿಸಿದ್ದಾರೆ.

Advertisement

ಈ ಕುರಿತು 3 ಪುಟಗಳ ಪತ್ರ ಬರೆದಿರುವ ಅವರು, ವಕ್ಫ್ ಮಂಡಳಿಯು ದೇಶಾದ್ಯಂತ ಪ್ರಮುಖ ಜಾಗಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಸಾಂವಿಧಾನಿಕ ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದು, ಸಂವಿಧಾನದ 25 ಮತ್ತು 26ನೇ ವಿಧಿಯ ಅನ್ವಯ ಮೂಲಭೂತ ಹಕ್ಕಾದ ಧರ್ಮಾಚರಣೆಯನ್ನು ರಕ್ಷಿಸಬೇಕಾದ ವಕ್ಫ್ ಮಂಡಳಿಯು ಹಕ್ಕುದಾರರ ಸಾವಿರಾರು ಎಕರೆ ವಿಸ್ತೀರ್ಣದ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳುತ್ತಿದೆ.

ದತ್ತಿ (ಚಾರಿಟಿ) ಹೆಸರಿನಲ್ಲಿ ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಂಡಿರುವ ಹಾಗೂ ಹಾಗೆ ಸ್ವಾಧೀನಪಡಿಸಿಕೊಳ್ಳುವ ಅಸಾಧಾರಣ ಅಧಿಕಾರವನ್ನು ವಕ್ಫ್ ಮಂಡಳಿಯಿಂದ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next