Advertisement

Yatnal; ವಿಜಯಪುರದಲ್ಲೂ ಹಿಂದೂ ದೇವಾಲಯ ನಾಶ ಮಾಡಿ ಮಸೀದಿ ನಿರ್ಮಾಣ

07:05 PM Jan 14, 2024 | Shreeram Nayak |

ವಿಜಯಪುರ:ವಿಜಯಪುರ ಜಿಲ್ಲೆಯಲ್ಲಿಯೂ ಹಿಂದೂ ದೇವಾಲಯಗಳನ್ನು ನಾಶ ಮಾಡಿ ಮಸೀದಿಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಕುರಿತು ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿದೆ. ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುತುಬ್‌ ಮಿನಾರ್‌ ಮಾದರಿಯಲ್ಲಿ ಸರ್ವೇ ಕಾರ್ಯ ಹಾಗೂ ಉತ್ಕನನ ನಡೆಯಬೇಕು. ಇವೆಲ್ಲ ಹಿಂದೂ ದೇವಸ್ಥಾನಗಳಾಗಿದ್ದವು ಎನ್ನುವ ಹಲವಾರು ಗುರುತುಗಳಿವೆ. ಪುರಾತತ್ವ ಇಲಾಖೆ ಗಮನ ಹರಿಸದೇ ಇದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ.

ಮುಂದಿನ ಕೆಲವೇ ದಿನಗಳಲ್ಲಿ ಪ್ರಧಾನಿ ಮೋದಿ ಅಬುದಾಬಿಯಲ್ಲಿ ಲಕ್ಷ್ಮೀನಾರಾಯಣ ದೇವಸ್ಥಾನ ಉದ್ಘಾಟನೆ ಮಾಡಲಿದ್ದಾರೆ. ಹೀಗಾಗಿ ಹಿಂದೂತ್ವ ಇಡೀ ಜಗತ್ತನ್ನೇ ಆಳುವ ಕಾಲ ದೂರವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.