Advertisement
ಕೋರೆಗಾಂವ್ ಪಾರ್ಕ್ ಪ್ರದೇಶದಲ್ಲಿರುವ ಜರ್ಮನ್ ಬೇಕರಿಯಲ್ಲಿ 2010ರ ಫೆಬ್ರವರಿಯಲ್ಲಿ ನಡೆದ ಸ್ಫೋಟದಲ್ಲಿ 17 ಜನರು ಸಾವನ್ನಪ್ಪಿದ್ದರು. ಈ ಹಿಂದೆ ಈತನನ್ನು ಹೈದರಾಬಾದ್ ಅವಳಿ ಸ್ಫೋಟದಲ್ಲಿ ಅಪರಾಧಿ ಎಂದು ಘೋಷಿಸಲಾಗಿದ್ದು, 2018ರಲ್ಲಿ ಗಲ್ಲು ಶಿಕ್ಷೆ ಘೋಷಿಸಲಾಗಿದೆ. ಸದ್ಯ ಈತನನ್ನು ದಿಲ್ಲಿಯ ತಿಹಾರ್ ಜೈಲಿನಲ್ಲಿ ಇಡಲಾಗಿದೆ. ವಿಚಾರಣೆಗಾಗಿ ದಿಲ್ಲಿಯಿಂದ ಸೋಮವಾರ ಪುಣೆಗೆ ಕರೆತರಲಾಗಿತ್ತು. ಭದ್ರತೆ ಕಾರಣಗಳಿಂದಾಗಿ ಈತನ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬೇಕು ಎಂದು ಕೋರ್ಟ್ ಗೆ ದಿಲ್ಲಿ ಪೊಲೀಸರು ಮನವಿ ಮಾಡಿದ್ದಾರೆ. ಈತನ ವಿರುದ್ಧ ಒಟ್ಟು ಸುಮಾರು 40 ಪ್ರಕರಣಗಳು ದಾಖಲಾಗಿವೆ. Advertisement
ಉಗ್ರ ಯಾಸೀನ್ ಭಟ್ಕಳ್ ವಿರುದ್ಧ ದೋಷಾರೋಪ
01:27 AM Apr 30, 2019 | Sriram |
Advertisement
Udayavani is now on Telegram. Click here to join our channel and stay updated with the latest news.