Advertisement

ಹಾರ್ದಿಕ್‌ ಹೋರಾಟ ದೇಶದ ಉದ್ದಗಲಕ್ಕೆ: ಯಶವಂತ್‌, ಶತ್ರುಘ್ನ ಸಿನ್ಹಾ

10:55 AM Sep 05, 2018 | Team Udayavani |

ಹೊಸದಿಲ್ಲಿ : ಪಾಟಿದಾರ್‌ ಸಮುದಾಯಕ್ಕೆ ಮೀಸಲಾತಿಯನ್ನು ಆಗ್ರಹಿಸಿ ಕಳೆದ 11 ದಿನಗಳಿಂದ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪಾಟಿದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರ ಆಂದೋಲನವನ್ನು ತಾವು ರಾಷ್ಟ್ರ ಮಟ್ಟಕ್ಕೆ ಒಯ್ಯುವುದಾಗಿ ಹಿರಿಯ ಬಿಜೆಪಿ ನಾಯಕರಾದ ಯಶವಂತ್‌ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ  ಪಣತೊಟ್ಟಿದ್ದಾರೆ. 

Advertisement

ಗುಜರಾತ್‌ ನ ಅಹ್ಮದಾಬಾದ್‌ ನಲ್ಲಿ ನಿರಶನ ನಿರತರಾಗಿರುವ ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿಯ (ಪಾಸ್‌) ನಾಯಕರಾಗಿರುವ ಹಾರ್ದಿಕ್‌ ಪಟೇಲ್‌ ಅವರನ್ನು ಉಭಯ ನಾಯಕರು ಭೇಟಿಯಾಗಿ ಅವರ ಯೋಗಕ್ಷೇಮವನ್ನು ವಿಚಾರಿಸಿದರು. 

ಕಳೆದ 11 ದಿನಗಳ ಉಪವಾಸದ ಪರಿಣಾಮವಾಗಿ ಹಾರ್ದಿಕ್‌ ಪಟೇಲ್‌ ಅವರು 20 ಕೆಜಿ ದೇಹ ತೂಕ ಕಳೆದುಕೊಂಡಿದ್ದು ತೀರ ನಿಶ್ಶಕ್ತರಾಗಿದ್ದಾರೆ. ಇವರನ್ನು ಯಾವುದೇ ವಿಷಮ ಸ್ಥಿತಿಯಲ್ಲಿ ಆಸ್ಪತ್ರೆಗೆ ಒಯ್ಯಲು ಅಥವಾ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲು ಸರಕಾರದ ಆದೇಶದ ಪ್ರಕಾರ ಸಂಪೂರ್ಣ ಸನ್ನದ್ಧ  “ಅಂಬುಲೆನ್ಸ್‌ ಆನ್‌ ವೀಲ್‌’ ವ್ಯವಸ್ಥೆಗೊಳಿಸಲಾಗಿದೆ. 

ಪಟೇಲ್‌ ಆಂದೋಲನ ನಾಯಕರಾಗಿರುವ ಹಾರ್ದಿಕ್‌ ಅವರು ಎತ್ತಿರುವ ಮೀಸಲಾತಿ ವಿಷಯವನ್ನು ಸೌಹಾರ್ದದಿಂದ ಬಗೆಹರಿಸಲು ಯಾವುದೇ ಕ್ರಮಕೈಗೊಳ್ಳದ ರಾಜ್ಯ ಮತ್ತು ಕೇಂದ್ರದಲ್ಲಿನ ಬಿಜೆಪಿ ಸರಕಾರದ ಲಜ್ಜೆಗೇಡಿ ನಿರ್ಲಕ್ಷ್ಯ ಖಂಡನೀಯ ಎಂದುಯಶವಂತ್‌ ಸಿನ್ಹಾ ಮತು ಶತ್ರುಘ್ನ ಸಿನ್ಹಾ  ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next