ನವದೆಹಲಿ : ರಾಕಿಂಗ್ ಸ್ಟಾರ್ ಯಶ್ ಅವರ ‘ಕೆಜಿಎಫ್ 2’ ಪ್ರಪಂಚದಾದ್ಯಂತ ಭಾರಿ ಯಶಸ್ಸನ್ನು ಗಳಿಸುತ್ತಾ ಮುನ್ನುಗ್ಗುತ್ತಿದ್ದು, ಹಿಂದಿ ಆವೃತ್ತಿಯೊಂದಿಗೆ ದಕ್ಷಿಣ ಕೊರಿಯಾದಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರವಾಗಿದೆ.
ಚಿತ್ರದ ಕುರಿತು ಅಭಿಮಾನಿಗಳ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಚಲನಚಿತ್ರ ಸಿಯೋಲ್ನಲ್ಲಿ ಕೋವಿಡ್ ನಂತರ ನಂತರ ಪ್ರದರ್ಶಿಸಲ್ಪಟ್ಟ ಮೊದಲ ಭಾರತೀಯ ಚಲನಚಿತ್ರವಾಗಿದೆ.
ಭಾರತ, ನೇಪಾಳ ಮತ್ತು ಬಾಂಗ್ಲಾದೇಶದ ರಾಕಿಂಗ್ ಸ್ಟಾರ್ ಅಭಿಮಾನಿಗಳು ಮತ್ತು ಚಲನಚಿತ್ರ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನಕ್ಕೆ ಹಾಜರಾಗಿದ್ದರು ಮತ್ತು ತಮ್ಮ ನೆಚ್ಚಿನ ರಾಕಿ ಭಾಯ್ ಅಭಿನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
Related Articles
ಆಕ್ಷನ್-ಡ್ರಾಮಾ ಪ್ರಪಂಚದಾದ್ಯಂತ ಅದ್ಭುತ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಛಿದ್ರಗೊಳಿಸುವುದನ್ನು ಮುಂದುವರೆಸಿದೆ. ಭಾರತವಲ್ಲದೆ, ಯುಎಸ್, ಮಲೇಷ್ಯಾ, ಸಿಂಗಾಪುರ, ನೇಪಾಳ, ಮತ್ತು ಇತರ ಹಲವು ದೇಶಗಳಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ.