Advertisement

ಉತ್ತಮ ಶಿಕ್ಷಣ ವ್ಯವಸ್ಥೆ ಹಾಳು ಮಾಡಲು ದೇಶದ್ರೋಹಿ ಸಂಘಟನೆಗಳ ಹುನ್ನಾರ: ಯಶ್ ಪಾಲ್ ಸುವರ್ಣ

07:29 PM Feb 10, 2022 | Team Udayavani |

ಬಣಕಲ್: ದೇಶದ ಆರ್ಥಿಕ ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಲು ದೇಶದ್ರೋಹಿ ಸಂಘಟನೆಗಳು ಹುನ್ನಾರ ನಡೆಸುತ್ತಿವೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಮಂಡಳಿಯ ಅಧ್ಯಕ್ಷ ಯಶ್ ಪಾಲ್ ಸುವರ್ಣ ಆರೋಪಿಸಿದರು.

Advertisement

ಅವರು ಬೆಂಗಳೂರಿನಿಂದ ಉಡುಪಿಗೆ ಹೋಗುವ ಮಾರ್ಗ ಮಧ್ಯೆ ಕೊಟ್ಟಿಗೆಹಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಸಮಾನತೆಯನ್ನು ಕಾಪಾಡಬೇಕು ಬೇಧ ಬಾವ ಮಾಡಬಾರದು ಎಂದು ಸುತ್ತೋಲೆ ಹೊರಡಿಸಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಹಾಗೆಯೇ ಶಿಸ್ತು ಕೂಡ ಮುಖ್ಯ. ಶಿಸ್ತಿಲ್ಲದೇ ಮಾಡಿದ ಕೆಲಸ ಫಲ ಕೊಡುವುದಿಲ್ಲ. ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಯಾವುದೇ ಬೇದ ಬಾವ ಮಾಡದೇ ಸಮವಸ್ತç ಜಾರಿಗೆ ತಂದಿದೆ. ಈ ವ್ಯವಸ್ಥೆಯ ಮೂಲಕ ಶಿಸ್ತು ಕಾಪಾಡಬೇಕಿದೆ. ಕರಾವಳಿ ಭಾಗದ ಶಾಲಾ ಕಾಲೇಜುಗಳಲ್ಲಿ ಉತ್ತಮ ಶಿಕ್ಷಣವನ್ನು ಸಂಸ್ಥೆಗಳು ನೀಡುತ್ತಿವೆ.ಈ ಉತ್ತಮ ವ್ಯವಸ್ಥೆ ಹಾಳು ಗೆಡವಲು ಹಾಗೂ ವಿದೇಶದಿಂದ ಶಿಕ್ಷಣ ಪಡೆಯಲು ಬರುವವರನ್ನು ತಡೆಯಲು ಪಿಎಫ್ಐನಂತಹ ದೇಶದ್ರೋಹಿ ಸಂಘಟನೆಗಳು ದೊಡ್ಡ ಹುನ್ನಾರ ನಡೆಸಿವೆ. ಇದರಿಂದ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡುವ ಕೆಲಸವಾಗುತ್ತಿದೆ ಎಂದರು.

ಈಗಾಗಲೇ 6 ಜನ  18 ವರ್ಷದ ಒಳಗಿರುವ ವಿದ್ಯಾರ್ಥಿಗಳು ಉಚ್ಚ ನ್ಯಾಯಾಲಯದ ಮೆಟ್ಟಲೇರಿದ್ದಾರೆ. ಇದರ ಹಿಂದೆ ಯಾರದೋ ಕುಮ್ಮಕ್ಕು ಅಡಗಿದೆ. ಪಿಎಪ್‌ಐನಂತಹ ಸಂಘಟನೆಗಳು ಒಂದು ರೀತಿಯಲ್ಲಿ ಹಗರಣದಲ್ಲಿ ಸಿಲುಕಿಕೊಂಡಿವೆ. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವ ಮೂಲಕ ಅವರಿಗೆ ಬಹಳಷ್ಟು ರೀತಿಯ ಸಹಕಾರ ನೀಡಿದೆ. ಈಗ ಕಾಂಗ್ರೆಸ್ ಹೊರ ರಾಜ್ಯದ ಮುಸಲ್ಮಾನರಿಗೆ ಯಾವ ರೀತಿಯ ಸಹಕಾರ ಮಾಡಬೇಕೆನ್ನುವುದು ಕಂಡು ಬರುತ್ತಿದೆ. ಅದ್ದರಿಂದ ಮುಸ್ಲಿಂ ರಾಷ್ಟ್ರಗಳ ಜೊತೆ ನಾವು ಕೈಜೋಡಿಸಬೇಕು ಎಂದು ಪಿಎಫ್ಐ ಸಂಘಟನೆಗಳು ಹಣ ಸಂಗ್ರಹ ಮಾಡುವ ಮಾಡುವ ಕಾರ್ಯಕ್ಕೆ ಕೈ ಹಾಕಿವೆ ಎಂದರು.

ಪಿಎಪ್‌ಐ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ ಅವರು ‘ಸಮಾನತೆಯ ಮೂಲಕ ಮಾತನಾಡುತ್ತಿದ್ದೀರಿ, ಅದ್ದರಿಂದಾಗಿ ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ ಮಾಡಿಕೊಡುವ ಮೂಲಕ ತಮ್ಮ ಸಹಬಾಳ್ವೆಯನ್ನು ದೇಶಕ್ಕೆ ಸಾರುವ ಕೆಲಸ ಮಾಡಬೇಕು. ಅದನ್ನು ಬಿಟ್ಟು 6 ಜನ ವಿದ್ಯಾರ್ಥಿಗಳಲ್ಲಿ ನಾಟಕ ಪ್ರದರ್ಶನ ಮಾಡುವ ಮೂಲಕ ಶೋಆಪ್ ಕೆಲಸ ಮಾಡಬೇಡಿ. ಮಾಡಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ  ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ದೇಶದ್ರೋಹಿ ಸಂಘಟನೆಗಳಿಗೆ ತಮ್ಮ ಮಾತಿನ ಮೂಲಕ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next