Advertisement

Udupi; ನಾಗರ ಪಂಚಮಿಗೆ ಸರಕಾರಿ ರಜೆ ಸಿಎಂಗೆ ಯಶ್‌ಪಾಲ್‌ ಸುವರ್ಣ ಮನವಿ

12:43 AM Aug 10, 2024 | Team Udayavani |

ಉಡುಪಿ: ಕರಾವಳಿಯ ಜನರಿಗೆ ಅತ್ಯಂತ ಭಾವನಾತ್ಮಕವಾದ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುವ ನಾಗರ ಪಂಚಮಿ ಹಬ್ಬಕ್ಕೆ ರಾಜ್ಯ ಸರಕಾರ ಮುಂದಿನ ವರ್ಷದಿಂದ ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಶಾಸಕ ಯಶ್‌ಪಾಲ್‌ ಸುವರ್ಣ ಮನವಿ ಮಾಡಿದ್ದಾರೆ.

Advertisement

ನಾಗರ ಪಂಚಮಿ ಹಬ್ಬಕ್ಕೆ ಕರಾವಳಿ ಜಿಲ್ಲೆ ಯಲ್ಲಿ ವಿಶೇಷ ಮಾನ್ಯತೆಯಿದ್ದು, ಪ್ರತಿ ಮನೆಗಳಿಂದಲೂ ಭಕ್ತರು ನಾಗ ಬನಗಳಲ್ಲಿ ಅತ್ಯಂತ ಭಕ್ತಿಯಿಂದ ತನು ಎರೆದು, ಧಾರ್ಮಿಕ ಕಾರ್ಯಗಳಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಳ್ಳುತ್ತಿದ್ದಾರೆ. ಮಕ್ಕಳನ್ನು ಈ ಹಬ್ಬದಲ್ಲಿ ಭಾಗಿಯಾಗಲು ಪೋಷಕರು ಇಚ್ಛಿಸಿದರೂ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲದ ಕಾರಣ ಭಾಗವಹಿಸಲು ಸಾಧ್ಯವಾಗದೆ ನಿರಾಶರಾಗುತ್ತಿದ್ದಾರೆ.

ನಾಗರ ಪಂಚಮಿಗೆ ರಜೆ ನೀಡುವ ಬಗ್ಗೆ ಕರಾವಳಿ ಜಿಲ್ಲೆ ಯ ನಾಗರಿಕರ ಬಹು ವರ್ಷಗಳ ಬೇಡಿಕೆಯಾಗಿದ್ದು, ರಾಜ್ಯ ಸರಕಾರ ಕರಾವಳಿ ಜಿಲ್ಲೆ ಯ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿ ಮುಂದಿನ ವರ್ಷದಿಂದ ಈ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.