Advertisement

INDvsWI: ರೋಹಿತ್ ಶರ್ಮಾರ 13 ವರ್ಷದ ಹಿಂದಿನ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್

04:31 PM Aug 13, 2023 | Team Udayavani |

ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಬ್ಬರಿಸಿದರು. ವಿಂಡೀಸ್ ಬೌಲರ್ ಗಳನ್ನು ದಂಡಿಸಿದ ಎಡಗೈ ಆಟಗಾರ ಕೇವಲ 51 ಎಸೆತಗಳಲ್ಲಿ ಅಜೇಯ 84 ರನ್ ಸಿಡಿಸಿದರು. ಮೊದಲ ವಿಕೆಟ್ ಗೆ ಶುಭ್ಮನ್ ಗಿಲ್ ಜೊತೆಗೆ ಶತಕದ ಜೊತೆಯಾಟವಾಡಿದ ಯಶಸ್ವಿ ಜೈಸ್ವಾಲ್ ನಾಲ್ಕನೇ ಪಂದ್ಯದಲ್ಲಿ ತಂಡಕ್ಕೆ ಗೆಲುವು ಸಾಧಿಸಲು ನೆರವು ನೀಡಿದರು.

Advertisement

ಇದೇ ಪಂದ್ಯದ ಬಳಿ ಯಶಸ್ವಿ ಜೈಸ್ವಾಲ್ ಅವರು ಸುಮಾರು 13 ವರ್ಷಗಳ ಹಿಂದಿನ ರೋಹಿತ್ ಶರ್ಮಾ ದಾಖಲೆಯೊಂದನ್ನು ಮುರಿದರು.

ಜೈಸ್ವಾಲ್ ಟಿ20 ಪಂದ್ಯದಲ್ಲಿ 75 ಪ್ಲಸ್ ರನ್‌ಗಳನ್ನು ದಾಖಲಿಸಿದ ಅತ್ಯಂತ ಕಿರಿಯ ಭಾರತೀಯ ಬ್ಯಾಟರ್ ಆದರು. ಜೈಸ್ವಾಲ್ ಅವರು 21 ವರ್ಷ ಮತ್ತು 227 ದಿನಗಳಲ್ಲಿ ಈ ಸಾಧನೆ ಮಾಡಿದರು, 23 ವರ್ಷ ಏಳು ದಿನಗಳಲ್ಲಿ ಅರ್ಧಶತಕ ಸಿಡಿಸಿದ್ದ ದಾಖಲೆಯನ್ನು ಹೊಂದಿದ್ದ ರೋಹಿತ್ ಅವರನ್ನು ಹಿಂದಿಕ್ಕಿದರು.

ಫ್ಲೋರಿಡಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 178 ರನ್ ಗಳಿಸಿದರೆ ಭಾರತ ತಂಡವು 17 ಓವರ್ ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಜೈಸ್ವಾಲ್ ಅಜೇಯ 84 ರನ್, ಶುಭ್ಮನ್ ಗಿಲ್ 77 ರನ್ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next