Advertisement

ಒಂದೇ ಪಂದ್ಯದಲ್ಲಿ ಶತಕ,ದ್ವಿಶತಕ:ಅಪರೂಪದ ದಾಖಲೆ ಬರೆದ ಕುಡಿ ಮೀಸೆಯ ಹುಡುಗ ಯಶಸ್ವಿ ಜೈಸ್ವಾಲ್‌

07:07 PM Mar 04, 2023 | Team Udayavani |

ಗ್ವಾಲಿಯರ್‌: 2020-21ರ ಸಾಲಿನ ರಣಜಿ ಚಾಂಪಿಯನ್‌ ಮಧ್ಯ ಪ್ರದೇಶದ ವಿರುದ್ಧ ಗ್ವಾಲಿಯರ್‌ನಲ್ಲಿ ನಡೆಯುತ್ತಿರುವ ಇರಾನಿ ಟ್ರೋಫಿಯ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್‌ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ. ಮಧ್ಯ ಪ್ರದೇಶ ವಿರುದ್ಧದ ಒಂದೇ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಮತ್ತು ಶತಕ ಬಾರಿಸುವ ಮೂಲಕ ಈ ಚಿಗುರು ಮೀಸೆಯ ಹುಡುಗ ಭಾರತ ತಂಡದ ಭರವಸೆಯ ಆಟಗಾರನಾಗಿ ಹೊರಹೊಮ್ಮುವ ವಿಶ್ವಾಸ ಹೊರಹಾಕಿದ್ದಾನೆ. ಈ ಪಂದ್ಯದಲ್ಲಿ ಜೈಸ್ವಾಲ್‌ ಒಂದೇ ಇನ್ನಿಂಗ್ಸ್‌ನಲ್ಲಿ 213 ಮತ್ತು 144 ರನ್ನುಗಳನ್ನು ಸಿಡಿಸಿದ್ದಾರೆ.

Advertisement

ದೇಶೀ ಕ್ರಿಕೆಟ್‌ನಲ್ಲಿ ರನ್‌ ಹೊಳೆಯನ್ನೇ ಹರಿಸುತ್ತಿರುವ ಜೈಸ್ವಾಲ್‌ ಇದೇ ವೇಳೆ 2012-13 ರಲ್ಲಿ ಭಾರತ ತಂಡದ ಅನುಭವಿ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಬಾರಿಸಿದ್ದ 332 ರನ್ನುಗಳ ದಾಖಲೆಯನ್ನು ಪುಡಿಗೈದಿದ್ದಾರೆ. ಶಿಖರ್‌ ಬ್ಯಾಟ್‌ನಿಂದ ಬಂದಿದ್ದ 332 ರನ್ನುಇದುವರೆಗೆ ಪಂದ್ಯವೊಂದರ ಗರಿಷ್ಟ ಸ್ಕೋರ್‌ ಎನ್ನಿಸಿತ್ತು. ಆದರೆ ಜೈಸ್ವಾಲ್‌ 357 ರನ್ನು ಬಾರಿಸುವ ಮೂಲಕ ಶಿಖರ್‌ ದಾಖಲೆ ಪತನವಾಗಿದೆ.

ಅದೂ ಅಲ್ಲದೇ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಂದ್ಯವೊಂದರಲ್ಲೇ ದ್ವಿಶತಕ ಮತ್ತು ಶತಕ ಗಳಿಸಿದ12 ನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಸಸೆಕ್ಸ್‌ ಮತ್ತು ಕೆಂಟ್‌ ಮಧ್ಯೆ ನಡೆದಿದ್ದ ಪಂದ್ಯದಲ್ಲಿ ಭಾರತದ ದುಲೀಪ್‌ ಸಿಂಗ್‌ ದ್ವಿಶತಕ ಮತ್ತು ಶತತಕನ ಬಾರಿಸುವ ಮೂಲಕ ಮೀ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ.

1970-71 ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದಿದ್ದ ಟೆಸ್ಟ್‌ ಪಂದ್ಯದ ಮೊದಲ ಇನ್ನಿಗ್ಸ್‌ನಲ್ಲಿ 124 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 220 ರನ್ನು ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಈ ಸಾಧನೆ ಮಾಡಿದ ಏಕೈಕ ಭಾರತೀಯ ಬ್ಯಾಟರ್‌ ಎಂಬ ದಾಖಲೆ ಸುನೀಲ್‌ ಗವಾಸ್ಕರ್‌ ಹೆಸರಿನಲ್ಲಿದೆ.

ಮಧ್ಯಪ್ರದೇಶ ವಿರುದ್ಧದ ಇರಾನಿ ಟ್ರೋಫಿ ಪಂದ್ಯದಲ್ಲಿ ಶೇಷ ಭಾರತ ಪರ  ಯಶಸ್ವಿ ಜೈಸ್ವಾಲ್‌ 259 ಎಸೆತಗಳಿಂದ 213 ರನ್‌ ಬಾರಿಸಿದ್ದು, ಈ  ಮೂಲಕ ಇರಾನಿ ಟ್ರೋಫಿ ಇತಿಹಾಸದಲ್ಲೇ ದ್ವಿಶತಕ ಬಾರಿಸಿದ 10 ನೇ ಬ್ಯಾಟ್ಸ್‌ಮ್ಯಾನ್‌ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ.

Advertisement

ಇದನ್ನೂ ಓದಿ: ಒಂದು ಕಾಲು ಹರ್ಯಾಣದಲ್ಲಿದೆ, ಮತ್ತೊಂದು..: ಆಸೀಸ್ ಆಟಗಾರನ ಕೆಣಕಿದ ಶ್ರೇಯಸ್ ಅಯ್ಯರ್

Advertisement

Udayavani is now on Telegram. Click here to join our channel and stay updated with the latest news.

Next