ರಾಜಕೋಟ್: ವಿಶಾಖಪಟ್ಟಣದಲ್ಲಿ ದ್ವಿಶತಕ ಬಾರಿಸಿದ್ದ ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ರಾಜಕೋಟ್ ನಲ್ಲಿ ಮತ್ತೊಂದು ದ್ವಿಶತಕ ಬಾರಿಸಿ ಮಿಂಚಿದ್ದಾರೆ. 22 ವರ್ಷದ ಯಶಸ್ವಿ ಶನಿವಾರ ಸಂಜೆ ಬೆನ್ನುನೋವಿನಿಂದ ಬಳಲುತ್ತಿದ್ದರು. ಭಾನುವಾರ ಬೆಳಿಗ್ಗೆ ಮತ್ತೆ ಬ್ಯಾಟಿಂಗ್ ಗೆ ಬಂದ ಯಶಸ್ವಿ ಇಂಗ್ಲೆಂಡ್ ನ ಬೌಲಿಂಗ್ ಲೈನಪ್ ನ ಮೂಳೆ ಮುರಿದರು.
ಯಶಸ್ವಿ ಜೈಸ್ವಾಲ್ ಕೇವಲ 231 ಎಸೆತಗಳಲ್ಲಿ ತಮ್ಮ ದ್ವಿಶತಕವನ್ನು ಪೂರ್ಣಗೊಳಿಸಿದರು. ಮತ್ತೊಂದೆಡೆ ಸರ್ಫರಾಜ್ ಖಾನ್ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಎರಡನೇ ಐವತ್ತು ಪ್ಲಸ್ ಸ್ಕೋರ್ ಗಳಿಸಿದರು.
ಅವರು ಹಿಂದಿನ ಟೆಸ್ಟ್ ನಲ್ಲಿ ದ್ವಿಶತಕ ಬಾರಿಸಿದ ಮೂರನೇ ಕಿರಿಯ ಭಾರತೀಯ ಬ್ಯಾಟರ್ ಆಗಿದ್ದರು. ಯಶಸ್ವಿ 9 ದಿನಗಳ ವಿರಾಮದ ನಂತರ ಪ್ರಾರಂಭವಾದ ನಿರ್ಣಾಯಕ ರಾಜಕೋಟ್ ಟೆಸ್ಟ್ ನಲ್ಲಿ ಸರಣಿಯಲ್ಲಿ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದರು.
ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಎರಡು ದ್ವಿಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಯಶಸ್ವಿ ಜೈಸ್ವಾಲ್ ಭಾನುವಾರ ಹೊಸ ಭಾರತೀಯ ದಾಖಲೆಯನ್ನು ನಿರ್ಮಿಸಿದರು.
ಯಶಸ್ವಿ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ಭಾರತೀಯ ದಾಖಲೆಯನ್ನು ಮುರಿದರು. ಅವರು ಈ ಇನ್ನಿಂಗ್ಸ್ ನಲ್ಲಿ ತಮ್ಮ ಸಿಕ್ಸರ್ ಗಳ ಸಂಖ್ಯೆಯನ್ನು 10 ಕ್ಕೇರಿಸಿದರು. ಅವರು ಮಾಜಿ ಬ್ಯಾಟರ್ ನವಜೋತ್ ಸಿಂಗ್ ಸಿಧು ಅವರ 30 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಸಿಧು ಅವರು ಎಂಟು ಸಿಕ್ಸರ್ ಬಾರಿಸಿದ್ದರು.