Advertisement

ದೂರದಿಂದಲೇ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿ : ಅಭಿಮಾನಿಗಳಿಗೆ ಯಶ್ ಮನವಿ

12:02 PM Jan 06, 2021 | Team Udayavani |

ನಟ ಯಶ್‌ ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದಾರೆ. ಅದುದೂರದಿಂದಲೇ ತಮ್ಮ ಹುಟ್ಟುಹಬ್ಬ ಆಚರಿಸುವಂತೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಯಶ್‌, “ನನಗೆ ನಿಮ್ಮಆರೋಗ್ಯ, ನಿಮ್ಮಕುಟುಂಬದವರ ಆರೋಗ್ಯಹೆಚ್ಚು ಮುಖ್ಯ, ಹಾಗಾಗಿಈ ಬಾರಿ ಗುಂಪು ಗೂಡಿಹುಟ್ಟುಹಬ್ಬ ಆಚರಿಸುವ ಬದಲಿಗೆ, ತಾವುಗಳು ಎಲ್ಲಿ ಇರುತ್ತೀರೋ ಅಲ್ಲಿಂದಲೇ ಹುಟ್ಟುಹಬ್ಬಕ್ಕೆ ಶುಭ ಹಾರೈಸಿ, ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳಿಸಿ’ ಎಂದಿದ್ದಾರೆ.

Advertisement

ಕೃತ್ತಿಕಾ ಒಲವೇ ಮ್ಯೂಸಿಕ್‌ ಆಲ್ಬಂ ರಿಲೀಸ್‌ :

ನಟಿ ಕೃತ್ತಿಕಾ ರವೀಂದ್ರ ಮತ್ತು ವರುಣ್‌ ಹೆಗಡೆಅಭಿನಯಿಸಿರುವ “ಒಲವೇ’ ರೊಮ್ಯಾಂಟಿಕ್‌ – ಲವ್‌ಮ್ಯೂಸಿಕ್‌ ಆಲ್ಬಂ ಹೊಸವರ್ಷದ ಆರಂಭದಲ್ಲಿ ಬಿಡುಗಡೆಯಾಗಿದೆ.

“ಸುಕೃಶಿ ಕ್ರಿಯೇಷನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಒಲವೇ’ ಮ್ಯೂಸಿಕ್‌ ಆಲ್ಬಂಗೆ ಎಂ.ಎಸ್‌ ಶಿವಾನಿ ಅವರ ಪರಿಕಲ್ಪನೆ ಮತ್ತುನಿರ್ದೇಶನವಿದೆ. ಡಾ. ಸುಚೇತನ್‌ ರಂಗಸ್ವಾಮಿ “ಒಲವೇ’ಮ್ಯೂಸಿಕ್‌ ಆಲ್ಬಂಗೆ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಇದರ ಚಿತ್ರೀಕರಣ ನಡೆಸಲಾಗಿದ್ದು ಕಾರ್ತಿಕ್‌ ಹಾಗೂ ನವೀನ್‌ಛಾಯಾಗ್ರಹಣವಿದೆ. “ಕೆ.ಜಿ.ಎಫ್’ ಖ್ಯಾತಿಯ ಶ್ರೀಕಾಂತ್‌ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. “ಆನಂದ್‌ಆಡಿಯೋ’ ಯೂ-ಟ್ಯೂಬ್‌ ಚಾನೆಲ್‌ನಲ್ಲಿ “ಒಲವೇ’ಮ್ಯೂಸಿಕ್‌ ಆಲ್ಬಂ ಬಿಡುಗಡೆಯಾಗಿದ್ದು, ಸದ್ಯ ಸೋಶಿಯಲ್‌ ಮೀಡಿಯಾಗಳಿಗೆ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next