Advertisement

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

03:12 PM Apr 27, 2024 | Team Udayavani |

ಡಾಲಿ ಧನಂಜಯ್‌ ನಟನೆಯ, ಪರಮ್‌ ನಿರ್ದೇಶನದ “ಕೋಟಿ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಈ ಚಿತ್ರ ಜೂನ್‌ 14ರಂದು ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಮೋಕ್ಷಾ ಕುಶಾಲ್‌ ನಾಯಕಿ.

Advertisement

ಈಗಾಗಲೇ “ಅಯನ’, “ಆದಿಪುರಾಣ’ ಚಿತ್ರಗಳಲ್ಲಿ ನಟಿಸಿರುವ ಮೋಕ್ಷಾ ಕುಶಾಲ್‌ ಈಗ “ಕೋಟಿ’ ಸಿನಿಮಾ ಮೇಲೆ ಭರ್ಜರಿ ನಿರೀಕ್ಷೆ ಇಟ್ಟಿದ್ದಾರೆ.

ಅಂದಹಾಗೆ, ಮೋಕ್ಷಾ ಮೂಲತಃ ಕೊಡಗಿನ ಬೆಡಗಿ. ಆದರೆ, ಬೆಳೆದಿದ್ದು ಬೆಂಗಳೂರಿನಲ್ಲಿ. ಬಾಲ್ಯದಿಂದಲೇ ಅಭಿನಯದ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡ ಮೋಕ್ಷಾ ಕುಶಾಲ್‌ ಬಳಿಕ ಅದನ್ನೇ ಕೆರಿಯರ್‌ ಆಗಿ ಆಯ್ಕೆ ಮಾಡಿಕೊಂಡ ಹುಡುಗಿ.

ಈ ಬಗ್ಗೆ ಮಾತನಾಡುವ ಮೋಕ್ಷಾ, “ಇಂಜಿನಿಯರಿಂಗ್‌ ಮುಗಿಯುತ್ತಿದ್ದಂತೆ ಆ್ಯಕ್ಟಿಂಗ್‌ ಮತ್ತು ಮಾಡೆಲಿಂಗ್‌ನ ನನ್ನ ಕೆರಿಯರ್‌ ಆಗಿ ಆಯ್ಕೆ ಮಾಡಿಕೊಂಡೆ. ಮೊದಲು ಪ್ರಸಾದ್‌ ಬಿದ್ದಪ್ಪ ಅವರ ಜೊತೆ ಎರಡು ವರ್ಷ ಮಾಡೆಲ್‌ ಆಗಿ ಕೆಲಸ ಮಾಡಿದೆ, ಮುಂಬೈನಲ್ಲಿ ಮೊದಲಾದ ಕಡೆಗಳಲ್ಲಿ ಶೋಗಳಲ್ಲಿ ಭಾಗವಹಿಸಿದ್ದೇನೆ. ಅದಾದ ನಂತರ “ಇನ್‌ ಸೈಡ್‌ ಎ ಗರ್ಲ್’ ಅನ್ನೋ ಶಾರ್ಟ್‌ ಫಿಲಂನಲ್ಲಿ ನಟಿಸಿದೆ. ಆಮೇಲೆ “ಅಯನ’ ಅನ್ನೋ ಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಅವಕಾಶ ಸಿಕ್ಕಿತು. ಹೀಗೆ ಸಿನಿಮಾ ಇಂಡಸ್ಟ್ರಿಗೆ ಬಂದೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next