Advertisement

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಯಶ್‌ ಭಾಗಿ

05:17 PM Feb 25, 2020 | Team Udayavani |

ಈ ಬಾರಿ ನಡೆಯಲಿರುವ ಹನ್ನೆರಡನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ನಟ ಯಶ್‌ ಅವರು ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಪ್ರತಿ ವರ್ಷವೂ ಒಬ್ಬೊಬ್ಬ ಸ್ಟಾರ್‌ ನಟರ ಮೂಲಕ ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿಸಲಾಗುತ್ತಿದ್ದು, ಫೆ.26 ರಂದು ನಡೆಯಲಿರುವ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಯಶ್‌ ಅವರು ಪಾಲ್ಗೊಳ್ಳುತ್ತಿದ್ದಾರೆ.

Advertisement

ಅಷ್ಟೇ ಅಲ್ಲ ಈ ಬಾರಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಂಘಟನಾ ಸಮಿತಿ ಬಾಲಿವುಡ್‌ನ‌ ಜನಪ್ರಿಯ ನಟಿ ಜಯಪ್ರದಾ ಅವರನ್ನು ಆಹ್ವಾನಿಸಿದ್ದು, ಇವರೊಂದಿಗೆ ನಿರ್ಮಾಪಕ ಬೋನಿಕಪೂರ್‌ ಹಾಗು ಗಾಯಕ ಸೋನು ನಿಗಮ್‌ ಅವರನ್ನೂ ಆಹ್ವಾನಿಸಲಾಗಿದೆ.

ನಟಿ ಜಯಪ್ರದಾ ಅವರು ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಿಗೆ ಕನ್ನಡ ಚಿತ್ರರಂಗ ಹೊಸದಲ್ಲ. ಹಾಗೆಯೇ, ಗಾಯಕ ಸೋನು ನಿಗಮ್‌ ಅವರೂ ಕೂಡ ಕನ್ನಡದ ನೂರಾರು ಗೀತೆಗಳನ್ನು ಹಾಡುವ ಮೂಲಕ ಕನ್ನಡಿಗರ ಮೆಚ್ಚಿನ ಗಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next