Advertisement

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

11:45 AM Dec 25, 2024 | Team Udayavani |

ನಟ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದ “ಯುಐ’ (UI Movie) ಚಿತ್ರ, ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ಯುಐ ಚಿತ್ರತಂಡದವರು ಸೆಲೆಬ್ರಿಟಿ ಶೋ ಆಯೋಜಿಸಿದ್ದರು. ಯಶ್‌, ರಾಧಿಕಾ ಪಂಡಿತ್‌, ಸುದೀಪ್‌ ಮುಂತಾದ ತಾರೆಯರು  ಉಪೇಂದ್ರ ಅವರೊಂದಿಗೆ ಯುಐ ಸಿನಿಮಾ ವೀಕ್ಷಿಸಿದರು.

Advertisement

ಬಳಿಕ ಚಿತ್ರದ ಬಗ್ಗೆ ನಟ ಯಶ್‌ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತ, “ಚಿಕ್ಕವನಿಂದಲೇ ಅವರ ಸಿನಿಮಾಗಳನ್ನು ನೋಡಿ, ಸಿನಿಮಾಗೆ ಬರಬೇಕು ಎಂದುಕೊಂಡವನು ನಾನು. ಇಂದು ಅವರ ಜೊತೆ ಯುಐ ಸಿನಿಮಾ ನೋಡುತ್ತಿರುವುದು ಅದೃಷ್ಟ ಎಂದು ಹೇಳಬಹುದು. ಅವರ ಮನಸ್ಸಿನಲ್ಲಿರುವ ವಿಚಾರಗಳನ್ನೆಲ್ಲ ರೂಪಕವಾಗಿ ಯುಐ ಚಿತ್ರದಲ್ಲಿ ಹೇಳಿದ್ದಾರೆ. ಉಪ್ಪಿ ಅವರ ಸಿನಿಮಾ ಅಂದ್ರೆ, ಅಲ್ಲಿ ವಿಷಯಗಳು ನೇರವಾಗಿ ಇರಲ್ಲ, ಪ್ರತಿಯೊಂದ ರಲ್ಲೂ ಬಹಳ ಆಳವಾದ ಅರ್ಥ ಇರುತ್ತೆ. ಅವರ ಈ ಕಥೆ ಬಹಳ ವಿಭಿನ್ನವಾಗಿದೆ. ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ. ಎಂದಿನಂತೆ ಅಭಿಮಾನಿಗಳಿಗೆ ಉಪ್ಪಿ ಅವರು ತಲೆಗೆ ತುಂಬುವಂಥ ಸಿನಿಮಾ ನೀಡಿದ್ದಾರೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎನ್ನುವುದು ಯಶ್‌ ಮಾತಾಗಿತ್ತು.

ಯಶ್‌-ಸುದೀಪ್‌ ಮುಖಾಮುಖಿ:  ಯುಐ ಸೆಲೆಬ್ರಿಟಿ ಶೋನಲ್ಲಿ ನಟ ಯಶ್‌ ಹಾಗೂ ಸುದೀಪ್‌ ಮುಖಾಮುಖಿಯಾದ ವಿಶೇಷ ಕ್ಷಣ ನಡೆಯಿತು. ಕನ್ನಡದ ಈ ಇಬ್ಬರೂ ಸ್ಟಾರ್‌ ನಟರು ಒಟ್ಟಾಗಿ ಕಾಣಿಸಿಕೊಂಡಿದ್ದು ಬಹಳ ಕಡಿಮೆ. ಪರಸ್ಪರ ಭೇಟಿಯಾದಾಗ, ಒಬ್ಬರನ್ನೊಬ್ಬರು ತಬ್ಬಿಕೊಂಡು, ಕುಶಲೋಪರಿ ಮಾತನಾಡಿದರು. ಸದ್ಯ ಯಶ್‌ ಹಾಗೂ ಸುದೀಪ್‌ ತಬ್ಬಿಕೊಂಡ ಫೋಟೋ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next