ಗುವಾಹಟಿ : ರಣಜಿ ಟ್ರೋಫಿಯಲ್ಲಿ ತಮಿಳುನಾಡು ಎದುರಿನ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದ ಭಾರತ ಅಂಡರ್-19 ವಿಶ್ವಕಪ್ ವಿಜೇತ ನಾಯಕ ಯಶ್ ಧುಲ್ ಎರಡನೇ ಇನ್ನಿಂಗ್ಸ್ ನಲ್ಲೂ ಭರ್ಜರಿ ಶತಕ ಸಿಡಿಸಿ ಹೊಸ ದಾಖಲೆ ಬರೆದು, ಕ್ರಿಕೆಟ್ ಭವಿಷ್ಯದ ಹೊಸ ಭರವಸೆಯಾಗಿದ್ದಾರೆ.
ಎಲೈಟ್ ಗ್ರೂಪ್ ಎಚ್ ಸ್ಪರ್ಧೆಯಲ್ಲಿ ದೆಹಲಿಯ ಬ್ಯಾಟರ್ ಯಶ್ ಧುಲ್ ಗುರುವಾರ ಪ್ರಥಮ ದರ್ಜೆಯಲ್ಲಿ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ತಮಿಳುನಾಡು ವಿರುದ್ಧ ಶತಕ ದಾಖಲಿಸಿದ್ದರು. ಭಾನುವಾರ ೨ ನೇ ಇನ್ನಿಂಗ್ಸ್ ನಲ್ಲೂ ಭರ್ಜರಿ ಬ್ಯಾಟಿಂಗ್ ಮಾಡಿದ ಅವರು ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ದೆಹಲಿಯ ಯಶ್ ಧುಲ್ ತನ್ನ ಮುಡಿಗೆ ಮತ್ತೊಂದು ಗರಿ ಸೇರಿಸಿದ್ದು, 1952/53ರಲ್ಲಿ ಗುಜರಾತ್‌ಗಾಗಿ ನಾರಿ ಕಂಟ್ರಾಕ್ಟರ್ (152 ಮತ್ತು 102*) ಮತ್ತು 2012/13 ರಲ್ಲಿ ಮಹಾರಾಷ್ಟ್ರದ ವಿರಾಗ್ ಅವತೆ (126 ಮತ್ತು 112) ನಂತರ ರಣಜಿ ಟ್ರೋಫಿಯಲ್ಲಿ ಚೊಚ್ಚಲ ಪಂದ್ಯದ ಪ್ರತಿ ಇನ್ನಿಂಗ್ಸ್‌ನಲ್ಲಿ (113 ಮತ್ತು 100*) ಶತಕ ಬಾರಿಸಿದ ಮೂರನೇ ಬ್ಯಾಟ್ಸ್‌ಮನ್ ಆಗಿದ್ದಾರೆ.
ಡೆಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಧುಲ್ ಅವರ 113 ರನ್ ಕೊಡುಗೆಯಿಂದ 45ರನ್ ಗಳಿಸಿತ್ತು. ತಮಿಳುನಾಡು 494 ರನ್ ಗೆ ಆಲೌಟಾಗಿತ್ತು.
2 ನೇ ಇನ್ನಿಂಗ್ಸ್ ನಲ್ಲಿ ಧುಲ್ 113 ರನ್ ಗಳಿಸಿದ್ದು, ಅವರಿಗೆ ಭರ್ಜರಿ ಜೊತೆಯಾಟ ನೀಡಿದ ಇನ್ನೊಬ್ಬ ಆರಂಭಿಕ ಆಟಗಾರ ಧ್ರುವ್ ಶೋರೆ ಕೂಡ ಶತಕ ಸಿಡಿಸಿದ್ದಾರೆ.