Advertisement
ಈಗಾ ಭಾರತದಲ್ಲಿ ಇಂಥದೊಂದು ಸಂಭ್ರ ಮದಲ್ಲಿ ತೇಲಾಡುತ್ತಿರುವವರು ರಾಜೇಶ್ ನಾಗರ್. ಇವರು ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಯಶ್ ಧುಲ್ ಅವರ ಕೋಚ್.
Related Articles
“ಯಶ್‌ಗೆ ವಿರಾಟ್ ಕೊಹ್ಲಿಯೇ ರೋಲ್ ಮಾಡೆಲ್. ಕೊಹ್ಲಿಯ ಆಕ್ರ ಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಈತನಲ್ಲೂ ಕಾಣಬಹುದು. ಅಷ್ಟೇ ಉತ್ತಮ ಫೀಲ್ಡರ್ ಕೂಡ. ಆದರೆ ನಾಯಕತ್ವದಲ್ಲಿ ಧೋನಿಯ ಛಾಯೆ ಇದೆ. ಕಾಮ್ ಆ್ಯಂಡ್ ಕೂಲ್. ಆಟಗಾರರನ್ನು ಬೆಂಬಲಿಸುವಲ್ಲಿ, ಕೆಲವು ದಿಟ್ಟ ನಿರ್ಧಾರ ತೆಗೆದು ಕೊಳ್ಳುವುದರಲ್ಲಿ ಯಶ್ ಯಾವತ್ತೂ ಮುಂದು. ಇಂತಿಂಥ ಆಟಗಾರರು ತಂಡದಲ್ಲಿರಬೇಕು ಎಂದರೆ ಅವರು ಬೇಕೇ ಬೇಕು. ಇಲ್ಲವಾದರೆ ಜಗಳಕ್ಕೇ ನಿಲ್ಲುತ್ತಿದ್ದ. ಬಹುಶಃ ಈ ವಿಷಯದಲ್ಲಿ ಸೌರವ್ ಗಂಗೂಲಿಯೇ ಮಾದರಿ…’ ಎಂದರು.
Advertisement
“ಯಶ್ ಅತ್ಯುತ್ತಮ ಲೀಡರ್. ಓರ್ವ ಅತ್ಯುತ್ತಮ ಲೀಡರ್ ಯಾವತ್ತೂ ಉತ್ತಮ ನಾಯಕ ನಾಗಬಲ್ಲ. ಆದರೆ ಅತ್ಯುತ್ತಮ ನಾಯಕ ಯಾವತ್ತೂ ಉತ್ತಮ ಲೀಡರ್ ಆಗಲಾರ…’ ಎಂದು ಶಿಷ್ಯನ ಕುರಿತು ರಾಜೇಶ್ ನಾಗರ್‌ಅಭಿಪ್ರಾಯಪಡುತ್ತಾರೆ.
ಅಜ್ಜನೊಂದಿಗೆ ಆಗಮನ“ಯಶ್ ಧುಲ್ 9 ವರ್ಷದ ಬಾಲಕನಾಗಿದ್ದಾಗ ಅಜ್ಜ ಆತನನ್ನು ಹೊಸದಿಲ್ಲಿಯ ದ್ವಾರಕಾದಲ್ಲಿರುವ ಬಾಲಭವನ್ ಸ್ಕೂಲ್ ಕ್ರಿಕೆಟ್ ಅಕಾಡೆಮಿಗೆ ಕರೆತಂದಿದ್ದರು. ಎಲ್ಲ ಬಾಲಕರಂತೆ ಇದ್ದ. ಆದರೆ ಆತನ ಬ್ಯಾಟಿಂಗ್ ಟೆಕ್ನಿಕ್ ಗಮನ ಸೆಳೆಯಿತು. ಎಷ್ಟೇ ಕಠಿನ ಎಸೆತಗಳನ್ನೂ ದಿಟ್ಟ ರೀತಿಯಲ್ಲಿ ಬಡಿದಟ್ಟುತ್ತಿದ್ದ. ಕೂಡಲೇ ಟೂರ್ನಿಯೊಂದರಲ್ಲಿ ಆಡುವ ಅವಕಾಶ ನೀಡಿದೆ. ಜತೆಗೆ, ಇಲ್ಲಿ ಉತ್ತಮ ಸ್ಕೋರ್ ದಾಖಲಿಸಿದರೆ ನಿನ್ನನ್ನು ಅಕಾಡೆಮಿಗೆ ಸೇರಿಸಿಕೊಳ್ಳುವೆ ಎಂದೆ. ಆತ ಶತಕವನ್ನೇ ಬಾರಿಸಿದ. ಮುಂದಿನದು ಇತಿಹಾಸ…’ ಎಂದು ಶಿಷ್ಯನ ಸಾಹಸವನ್ನು ನೆನಪಿಸಿಕೊಂಡರು ರಾಜೇಶ್‌ನಾಗರ್.