Advertisement

ಯಶ್-ರಾಧಿಕ ಮಗುವಿನ ನಾಮಕರಣ: ಹೆಸರೇನು ಗೊತ್ತಾ ? ಸಮಾರಂಭದ ವಿಡಿಯೋ ಇಲ್ಲಿದೆ !

12:48 PM Sep 01, 2020 | Mithun PG |

ಬೆಂಗಳೂರು: ಯಶ್ ಮತ್ತು ರಾಧಿಕ ಪಂಡಿತ್ ಮಗನ ಹೆಸರು ಕೊನೆಗೂ ಬಹಿರಂಗಗೊಂಡಿದ್ದು ಯಥರ್ವ್ ಯಶ್ ಎಂದು ನಾಮಕರಣ ಮಾಡಲಾಗಿದೆ.

Advertisement

ಇತ್ತೀಚಿಗೆ ಯಶ್ ಅವರ ಫಾರ್ಮ್ ಹೌಸ್ ನಲ್ಲಿ ಸರಳವಾಗಿ ನಾಮಕರಣ ಸಮಾರಂಭ ಆಯೋಜಿಸಲಾಗಿತ್ತು. ಈ ಕುರಿತ ವಿಡಿಯೋವೊಂದು ಯಶ್ ಮತ್ತು ರಾಧಿಕ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಬಹುದಿನಗಳ ಕುತೂಹಲಕ್ಕೆ ತೆರೆಬಿದ್ದಿದೆ.

ಯಥರ್ವ್​​ ಎಂದರೆ ಸಂಪೂರ್ಣ ಎಂದರ್ಥ. ‘ನಮ್ಮನ್ನು ಪೂರ್ಣಗೊಳಿಸಿದವನು ಈ ಕಂದಮ್ಮ’  ‘ರಾರಾಜಿಸುತ ಬದುಕು ಮಗನೇ. ಎಂದು ದಂಪತಿ ಬರೆದಕೊಂಡಿದ್ದಾರೆ. ಮಾತ್ರವಲ್ಲದೆ ನಮ್ಮ ಮಗನಿಗೆ  ಹರಸಿ ಹಾರೈಸಿ ಎಂದು ಅಭಿಮಾನಿಗಳಲ್ಲಿ ಭಿನ್ನವಿಸಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ರಾಧಿಕ ಪಂಡಿತ್ ನಾಮಕರಣದ ಕುರಿತಾಗಿ ಮಾತನಾಡಿದ್ದರು. ಮತ್ತು ಸದ್ಯದಲ್ಲೇ ಹೆಸರನ್ನು ಅಧಿಕೃತವಾಗಿ ಹೇಳುವುದಾಗಿ ತಿಳಿಸಿದ್ದರು. ಅದರಂತೆ ಇಂದು ವಿಡಿಯೋವನ್ನು ಬಿಡುಗಡೆ ಮಾಡಿ ಬಹುದಿನಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

View this post on Instagram

A post shared by Radhika Pandit (@iamradhikapandit) on

Advertisement

Advertisement

Udayavani is now on Telegram. Click here to join our channel and stay updated with the latest news.

Next