Advertisement
ಮುಂಗಾರಿಗೆ ಇನ್ನೇನು ದಿನಗಣನೆ ಆರಂಭ ವಾಗಿದ್ದು, ಐಎಂಡಿ ಪ್ರಕಾರ ಮೇ 31ರಂದು ಕೇರಳ ಕರಾವಳಿ ತೀರಕ್ಕೆ ಮುಂಗಾರು ಪ್ರವೇಶ ಪಡೆಯಲಿದೆ. ಬಳಿಕ ಒಂದೆರಡು ದಿನಗಳಲ್ಲಿ ರಾಜ್ಯ ಕರಾವಳಿಗೆ ಆಗಮಿಸಲಿದೆ. ಇದಕ್ಕೂ ಮುನ್ನ ಚಂಡಮಾರುತ ಅಪ್ಪಳಿಸಲಿದ್ದು, ಮುಂಗಾರಿನ ಮೇಲೆ ಪರಿಣಾಮ ಸಾಧ್ಯತೆ ಇದೆ.
ರಾಜ್ಯ ಕರಾವಳಿ ಭಾಗದಲ್ಲಿ ಈ ಬಾರಿಯ ಪೂರ್ವ ಮುಂಗಾರು ಉತ್ತಮವಾಗಿದೆ. ಪೂರ್ವ ಮುಂಗಾರು ಪೂರ್ಣಗೊಳ್ಳಲು ಇನ್ನೂ ಎರಡು ವಾರ ಇದ್ದು, ಕರಾವಳಿಯಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗಿದೆ. ಮಾರ್ಚ್ 1ರಿಂದ ಮೇ 19ರ ವರೆಗೆ ದ.ಕ. ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 188, ಉಡುಪಿ ಜಿಲ್ಲೆಯಲ್ಲಿ ಶೇ. 284, ಉತ್ತರ ಕನ್ನಡದಲ್ಲಿ ಶೇ. 435ರಷ್ಟು ಮತ್ತು ಕೊಡಗಿನಲ್ಲಿ ಶೇ. 66ರಷ್ಟು ಹೆಚ್ಚು ಮಳೆಯಾಗಿದೆ.
Related Articles
ಅರಬಿ ಸಮುದ್ರದಲ್ಲಿ ಕಳೆದ ವಾರ ಸೃಷ್ಟಿಯಾಗಿದ್ದ ತೌಖ್ತೇ ಚಂಡಮಾರುತ ಈ ಬಾರಿಯ ಮುಂಗಾರು ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಮತ್ತೂಂದು ಚಂಡಮಾರುತ ಸೃಷ್ಟಿಯಾಗಲಿದ್ದು, ಮುಂಗಾರು ಆಗಮನ ವಿಳಂಬವಾಗುವ ಸಾಧ್ಯತೆ ಕಡಿಮೆ.
Advertisement
ಅರಬಿ ಸಮುದ್ರದಲ್ಲಿ ಸೃಷ್ಟಿಯಾಗಿದ್ದ ತೌಖ್ತೇ ಚಂಡಮಾರುತ ದುರ್ಬಲ ಗೊಂಡಿದೆ. ಮೇ 23ರಂದು ಬಂಗಾಲ ಕೊಲ್ಲಿಯಲ್ಲಿ ಯಾಸ್ ಚಂಡಮಾರುತ ಸೃಷ್ಟಿಯಾಗಲಿದ್ದು, ಅದರ ಪರಿಣಾಮ ರಾಜ್ಯ ಕರಾವಳಿ ಭಾಗ ದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಈ ಬಾರಿಯ ಮುಂಗಾರು ವಾಡಿಕೆಗಿಂತ ಮೊದಲು ಆಗಮಿಸಬಹುದು.– ಸುನಿಲ್ ಗವಾಸ್ಕರ್, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ