Advertisement

ಯರಗೋಳು ಯೋಜನೆಗೆ ಶೀಘ್ರ ಚಾಲನೆ

03:37 PM Dec 28, 2019 | Suhan S |

ಕೋಲಾರ: ಯರಗೋಳು ಯೋಜನೆಗೆ ಮುಂದಿನ 2 ತಿಂಗಳಲ್ಲಿ ಚಾಲನೆ ಸಿಗಲಿದ್ದು, ಕೋಲಾರ, ಬಂಗಾರಪೇಟೆ, ಮಾಲೂರು ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ನಾಗೇಶ್‌ ತಿಳಿಸಿದರು.

Advertisement

ಶುಕ್ರವಾರ ನಗರದ ರಂಗಮಂದಿರದ ಆವರಣದಲ್ಲಿನ ಡಿವಿಜಿ ಭವನದಲ್ಲಿ ಸರ್ಕಾರದ 100 ದಿನಗಳ ಸಾಧನೆ ಬಿಂಬಿಸುವ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾನತಾಡಿದರು. ನೂರು ದಿನಗಳ ಆಡಳಿತ ತೃಪ್ತಿಕರ: ಸರ್ಕಾರದ 100 ದಿನಗಳ ಆಡಳಿತ ತಮಗೆ ತೃಪ್ತಿ ತಂದಿದೆ. ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಉಂಟಾದ ನೆರೆ ಮತ್ತು ಉಪಚುನಾವಣೆ ನಡುವೆಯೂ ಸರ್ಕಾರ ಉತ್ತಮ ಸಾಧನೆ ಮಾಡಿದೆ. ನಗರದ ಕೋಲಾರಮ್ಮ ಕೆರೆ ಅಭಿವೃದ್ಧಿ ಕಾರ್ಯ ವೇಗದಿಂದ ಸಾಗಿದ್ದು, ಇಲಿ ಉದ್ಯಾನವನ ದೋಣಿವಿಹಾರಕ್ಕೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು. ಈ ಕೆರೆಗೆ ಕೆಸಿ ವ್ಯಾಲಿ ನೀರು ಬರುವುದರಿಂದ ಅಂತರ್ಜಲ ವೃದ್ಧಿಯಾಗಿ ನೀರಿನ ಸಮಸ್ಯೆಯೂ ಕೊನೆಗೊಳ್ಳಲಿದೆ ಎಂದರು.

1,13,000 ಮನೆಗಳಿಗೆ ತಲಾ ಒಂದು ಲಕ್ಷ: ನೆರೆ ಸಂತ್ರಸ್ತರಿಗಾಗಿ ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರವಾಗಿ 1200 ಕೋಟಿ ರೂ. ನೀಡಿದೆ. ಈಗಾಗಲೇ ಮನೆ ಕಳೆದುಕೊಂಡಿರುವ 1,13,000 ಮಂದಿಗೆ ಮನೆ ನಿರ್ಮಿಸಿಸಿಕೊಳ್ಳಲು ಮೊದಲ ಕಂತಾಗಿ ತಲಾ 1 ಲಕ್ಷ ರೂ. ನೀಡಲಾಗಿದೆ ಎಂದು ತಿಳಿಸಿದರು. ಮನೆ ಶಿಥಿಲಗೊಂಡು ದುರಸ್ತಿಗೆ 50 ಸಾವಿರ ರೂ. ನೀಡಲಾಗಿದೆ. ರಸ್ತೆ, ಡ್ಯಾಂ ಮತ್ತಿತರ ಹಾನಿಗೆ ಲೋಕೋಪಯೋಗಿ ಇಲಾಖೆಯಿಂದ 750 ಕೋಟಿ ರೂ.ಗಳ ಕಾಮಗಾರಿ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಶಾಲಾ ಕಟ್ಟಡಗಳಿಗೂ ಹಾನಿಯಾಗಿದ್ದು, ದುರಸ್ತಿ ಕಾರ್ಯ ಸಾಗಿದೆ. ಪುಸ್ತಕ ಕಳೆದುಕೊಂಡ ಮಕ್ಕಳಿಗೆ ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಗಂಜಿ ಕೇಂದ್ರಗಳನ್ನು ಸ್ಥಾಪಿಸಿ ಊಟ, ಬಟ್ಟೆ ಮತ್ತಿತರ ಪರಿಕರಗಳನ್ನು ಒದಗಿಸಿದ್ದು, ಜಾನುವಾರು ಕಳೆದುಕೊಂಡವರಿಗೂ ಪರಿಹಾರ ನೀಡಲಾಗಿದೆ. ಇದಕ್ಕೆ ರಾಜ್ಯದ ಅನೇಕ ಮಂದಿ ನೆರವು ಹರಿಸಿದ್ದಾರೆ ಎಂದರು.

ನೆರೆ, ಉಪಚುನಾವಣೆಯಿಂದ ಸ್ವಲ್ಪ ನಿಧಾನಗತಿಯಲ್ಲಿದ್ದ ಆಡಳಿತಕ್ಕೆ ಚುರುಕು ನೀಡಲಾಗಿದೆ. ಸುಭೀಕ್ಷತೆಯತ್ತ ಸಾಗುತ್ತಿದ್ದು, ಕೈಗಾರಿಕೆಗಳಿಗೆ ಉತ್ತೇಜನ, ವಸತಿಯೋಜನೆಗಳಿಗೆ ಬಾಕಿಯಿದ್ದ ಹಣ ಬಿಡುಗಡೆಗೆ ಕ್ರಮ,ಕುಡಿಯುವ ನೀರಿಗೆ ಆದ್ಯತೆ, ಪರಿಶಿಷ್ಟರ ಕೊಳವೆ ಬಾವಿಗಳಿಗೆ ಸಹಾಯಧನ ಬಿಡುಗಡೆ, ಜಾನುವಾರು ಸಾಲಕ್ಕೆ ಒತ್ತು ನೀಡಲಾಗಿದೆ ಎಂದರು.

Advertisement

ಗೋಲಿಬಾರ್‌ ಘಟನೆ: ಪರಿಹಾರಕ್ಕೆ ತಡೆ: ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಸರ್ಕಾರ ಘೋಷಿಸಿದ್ದ ಪರಿಹಾರಕ್ಕೆ ತಡೆನೀಡಲಾಗಿದೆ, ಅನೇಕರಿಗೆ ಹೋರಾಟ ಏನಕ್ಕೆ ಮಾಡುತ್ತಿದ್ದೇವೆ ಎಂಬುದೇ ಗೊತ್ತಿರಲಿಲ್ಲ, ಕೆಲವರನ್ನು ಕೇಳಿದರೆ ಜಿಎಸ್‌ಟಿ ವಿರುದ್ಧ ಎಂದು ಹೇಳುತ್ತಿದ್ದುದನ್ನು ಉಲ್ಲೇಖೀಸಿದ ಅವರು ಇದರ ಹಿಂದೆ ಷಡ್ಯಂತರ ಇರಬಹುದು ಎಂದರು. ನಮ್ಮ ದೇಶದ ಮುಸ್ಲಿಂ ಬಾಂಧವರಿಗೆ ಸಿಎಎಯಿಂದ ಯಾವುದೇ ತೊಂದರೆ ಇಲ್ಲ ಆದರೂ ಹೋರಾಟ ಏತಕ್ಕೆ ಮಾಡಿದರೂ ಎಂದು ಗೊತ್ತಾಗುತ್ತಿಲ್ಲ ಎಂದರು. ಉಪಮುಖ್ಯಮಂತ್ರಿ ನೀಡಬೇಕೇ ಬೇಡವೇ ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು, ರಮೇಶ್‌ ಜಾರಕಿಹೋಳಿ, ಶ್ರೀರಾಮಲು ಇಬ್ಬರೂ ಪಕ್ಷದ ನಾಯಕರೇ ಎಂದರು. ಡಿ.ಕೆ.ಶಿವಕುಮಾರ್‌ ಏಸು ಪ್ರತಿಮೆ ಸ್ಥಾಪನೆ ವಿವಾದದ ಕುರಿತು ಕೇಳಿದಾಗ ಅದರ ಅರಿವಿಲ್ಲವೆಂದ ಅವರು, ಅವರವರ ಆಲೋಚನೆ, ಭಕ್ತಿ ನಮಗ್ಯಾಕೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next