Advertisement
ಕೋಲಾರದ ಎಸ್.ಆರ್.ಯಾರಬ್ ಪಾಷಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ. ಸರಳವಾದ ಪದಗಳ ಮೂಲಕವೇ ಸ್ವಷ್ಟವಾಗಿ ಕನ್ನಡ ಮಾತನಾಡುವುದು ಇವರಿಗೆ ಅಚ್ಚುಮೆಚ್ಚು.
Related Articles
Advertisement
ಎಲ್ಲೇ ಹೋದ್ರೂ ಕನ್ನಡ ಬಿಡಲಿಲ್ಲ: ಬೆಳಗಾವಿಯ ಮರಾಠಿ ಪ್ರಭಾವ, ಬಾಗೇಪಲ್ಲಿಯ ತೆಲುಗು, ದೇವರಾಯಸಮುದ್ರದ ತಮಿಳು, ತೆಲುವು, ಇದ್ಯಾವುದು ಯಾರಬ್‌ಪಾಷಾರ ಕನ್ನಡತನಕ್ಕೆ ಅಡ್ಡಿಯಾಗಲಿಲ್ಲ. ತಾವು ಎಲ್ಲಿಯೇ ಕೆಲಸ ನಿರ್ವಹಿಸಲಿ ತನ್ನ ಇಡೀ ಕಚೇರಿಯ ವಾತಾವರಣವನ್ನು ಕನ್ನಡಮ ಯವಾಗಿಸುವುದು ಯಾರಬ್ ಪಾಷಾರ ನೆಚ್ಚಿನ ಹವ್ಯಾಸ. ತನ್ನ ಬಳಿ ಕೆಲಸ ಮಾಡಿಸಿಕೊಳ್ಳಲು ಬರುವವರಿಗೂ ಕನ್ನಡವನ್ನೇ ಮಾತನಾಡಿ ಎಂದು ಪ್ರೀತಿ ಯಿಂದ ತಾಕೀತು ಮಾಡುವುದು ಅವರ ಅಭ್ಯಾಸ.
ಕನ್ನಡ ಪ್ರೀತಿಗೆ ಬಾಲ್ಯವೇ ಸ್ಫೂರ್ತಿ: ಯಾರಬ್‌ಪಾಷಾ ತಾಯಿಯ ತವರೂರಾದ ಮಾಲೂರು ತಾಲೂಕಿನ ಹುರುಳಗೆರೆಯಲ್ಲಿ 1962ರಲ್ಲಿ ಜನಿಸಿದರು. ಇವರನ್ನು ಸಾಕಿದ ಲಿಂಗಮ್ಮ ಹಾಗೂ ಹುಳದೇನಹಳ್ಳಿಯಲ್ಲಿ ಇವರಿಗೆ ಮನೆ ಬಾಡಿಗೆ ನೀಡಿದ್ದ ಅಮ್ಮಣ್ಣಿಯವರಿಂದ ಬಾಲ್ಯದ ಪಾಠಗಳನ್ನು ಕಲಿತು ಅವರಂತೆಯೇ ಕನ್ನಡವನ್ನೇ ಮಾತನಾಡಬೇಕೆಂದು ಯಾರಬ್‌ಪಾಷಾ ನಿರ್ಧರಿಸಿ ಕನ್ನಡವನ್ನು ನಿತ್ಯದ ಉಸಿರಾಗಿಸಿಕೊಂಡು ಇಂದಿಗೂ ಬದುಕುತ್ತಿದ್ದಾರೆ.
ಮಕ್ಕಳಿಗೂ ಕನ್ನಡ ಪಾಠ: ಪತ್ನಿ ಫರೀದಾ ಹಾಗೂ ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ಕೌಸಿಯಾ ತರುನಮ್ ಹಾಗೂ ಹತ್ತನೇ ತರಗತಿಯಲ್ಲಿ ಓದುತ್ತಿರುವ ಮುಜಮಿಲ್ ಪಾಷಾರಿಗೂ ಕನ್ನಡ ಪಾಠಗಳನ್ನು ಖುದ್ದು ತಾವೇ ಕಲಿಸುತ್ತಿರುವ ಯಾರಬ್ ಪಾಷಾ ಅವರಲ್ಲೂ ಕನ್ನಡ ಪ್ರೇಮವನ್ನು ಬಿತ್ತುತ್ತಿದ್ದಾರೆ.
ಕಚೇರಿ ಕನ್ನಡಮಯ: ತಮ್ಮೊಂದಿಗೆ ವ್ಯವಹರಿಸುತ್ತಿವವರು ಹಿರಿಯ ಅಧಿಕಾರಿಯಾಗಿರಲಿ, ಸಾಮಾನ್ಯಶಿಕ್ಷಕರೇ ಆಗಿರಲಿ ಯಾರಬ್ ಪಾಷಾ ಅಚ್ಛ ಕನ್ನಡದಲ್ಲೇ ಮಾತನಾಡುತ್ತಾರೆ. ಕಚೇರಿಯ ಕಡತಗಳನ್ನು ಕನ್ನಡದಲ್ಲಿಯೇ ಸ್ಪುಟವಾಗಿ ಬರೆದು ನಿರ್ವಹಿಸುತ್ತಾರೆ. ಕಚೇರಿಯ ಸಹೋದ್ಯೋಗಿಗಳಿಗೂ ಕನ್ನಡವನ್ನೇ ಮಾತನಾಡುವಂತೆ ಕೋರುತ್ತಾರೆ. ಕೆಲವು ಆಂಗ್ಲ ಪದಗಳ ಬದಲಿಗೆ ಇಂತ ಕನ್ನಡ ಪದಗಳನ್ನು ಬಳಸಬಹುದೆಂದು ಸಲಹೆ ನೀಡುತ್ತಾರೆ. ಕೆಇಎಸ್ ಪಾಸಾಗಿ ಮುಖ್ಯ ಶಿಕ್ಷಕರಾಗಿ ಕೆಲಸಕ್ಕೆ ಸೇರಿದವರು ಕಚೇರಿ ಕೆಲಸಕ್ಕೆ ತಮ್ಮ ಬಳಿಬಂದಾಗ ತೋರ್ಪಡಿಕೆಗಾಗಿ ಇಂಗ್ಲಿಷ್ ಮಾತನಾಡಿದರೆ, ಯಾರಬ್ ಪಾಷಾ ಕನ್ನಡ ಭಾಷೆಯ ಅಭಿಮಾನದ ಮಾತುಗಳನ್ನು ಆಡುತ್ತಾ ಅವರಲ್ಲಿ ಕನ್ನಡ ಬೆಳೆಸುವ ಬೀಜವನ್ನು ಬಿತ್ತುತ್ತಾರೆ.
ಯಾರಬ್ ಪಾಷಾ ಎಷ್ಟರ ಮಟ್ಟಿಗೆ ಕನ್ನಡ ಪ್ರೀತಿಯೆಂದರೆ ತಮ್ಮ ಬಳಿ ಕೆಲಸ ಮಾಡಿಸಿಕೊಂಡು ಯಾರಾದರೂ ಥ್ಯಾಂಕ್ಸ್ ಎಂದರೂ ಪ್ರತಿಯಾಗಿ ಅತ್ಛ ಕನ್ನಡದಲ್ಲಿ ಧನ್ಯವಾದಗಳು ಎಂದೇ ಪ್ರತಿಕ್ರಿಯಿಸುತ್ತಾರೆ. ಇವರ ಕನ್ನಡ ಅಭಿಮಾನದ ಪ್ರೀತಿಗೆ ಮನಸೋತ ಸಹೋದ್ಯೋಗಿಗಳು, ಇವರೊಂದಿಗೆ ವ್ಯವಹರಿಸುವ ಶಿಕ್ಷಕರು ಆದಷ್ಟು ಕನ್ನಡದಲ್ಲಿಯೇ ವ್ಯವಹರಿಸುವಂತೆ ಮಾಡುವುದರ ಮೂಲಕ ಕಚೇರಿಯ ವಾತಾವರಣವನ್ನೇ ಕನ್ನಡಮಯವಾಗಿಸುವುದು ಯಾರಬ್ ಪಾಷಾರ ಭಾಷಾ ಕನ್ನಡಾಭಿಮಾನದ ನಿತ್ಯ ಕಾಯಕವಾಗಿದೆ.
ಎಂದಿಗಾದರೂ ಕನ್ನಡವನ್ನು ಮಾತ್ರವೇ ಮಾತನಾಡಿದ್ದಕ್ಕೆ ಯಾರಿಂದಲಾದರೂ ಟೀಕೆಗೆ ಗುರಿಯಾಗಬೇಕಾಗಿತ್ತೇ, ವ್ಯಂಗ್ಯದ ಮಾತುಗಳ ಎದುರಿಸಬೇಕಾಗಿತ್ತೇ ಎಂಬ ಪ್ರಶ್ನೆಗೆ, ಈ ರೀತಿ ಎಂದೂ ಆಗಿಲ್ಲ ಕನ್ನಡ ತಮಗೆ ವಿಶೇಷ ಗೌರವವನ್ನು ತಂದುಕೊಟ್ಟಿದೆ ಎನ್ನುತ್ತಾರೆ.
ಕನ್ನಡಿಗರಾಗಿ ಹುಟ್ಟಿದ ಪ್ರತಿಯೊಬ್ಬರೂ ಕನ್ನಡಕ್ಕೆ ಕೀರ್ತಿತರುವಂತೆ ಬದುಕುವುದನ್ನೇಗುರಿಯಾಗಿಸಿ ಕೊಳ್ಳಬೇಕು. ಕನ್ನಡಕ್ಕಾಗಿ ಕೈ ಎತ್ತು ನಿನ್ನಕೈಕಲ್ಪವೃಕ್ಷವಾಗುತ್ತದೆ ಯೆಂಬ ಕವಿವಾಣಿಯಂತೆ ಕನ್ನಡ ಮಾತ್ರವೇ ಬಳಸುವುದರಿಂದ ತಮಗೆ ಸಹೋದ್ಯೋಗಿಗಳ ವಲಯದಲ್ಲಿ ವಿಶೇಷ ಗೌರವ ದೊರೆಯುವಂತಾಗಿದೆ. –ಯಾರಬ್‌ಪಾಷಾ, ಪ್ರಥಮ ದರ್ಜೆ ಗುಮಾಸ್ತ.
-ಕೆ.ಎಸ್.ಗಣೇಶ್