Advertisement

ಭತ್ತದ ರೈತರ ಕೈ ಹಿಡಿದ ಯಂತ್ರ ಶ್ರೀ ಯೋಜನೆ; ರಾಜ್ಯದ 30 ಜಿಲ್ಲೆಗಳಲ್ಲಿ ಅನುಷ್ಠಾನ

09:27 PM Aug 13, 2020 | mahesh |

ಕುಂದಾಪುರ: ಲಾಭ- ನಷ್ಟದ ತಖೆ¤ಯಿಲ್ಲದೇ ಭತ್ತ ಕೃಷಿ ಮಾಡ ಲಾಗುತ್ತಿತ್ತು. ಕೂಲಿ ಅಲಭ್ಯತೆ, ವೆಚ್ಚ ಅಧಿಕ ಎಂದು ಕೆಲವರು ಕೃಷಿಯಿಂದ ವಿಮುಖರಾಗುತ್ತಿದ್ದರು. ರೈತರನ್ನು ಭತ್ತ ಬೇಸಾಯದತ್ತ ಸೆಳೆಯಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೃಷಿ ಇಲಾಖೆ ಜತೆಗೂಡಿ ಬೆಂಬಲ ನೀಡುತ್ತಿದ್ದು “ಯಂತ್ರಶ್ರೀ ಯೋಜನೆ’ಯನ್ನು ರಾಜ್ಯದ 30 ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದೆ.

Advertisement

2,200 ಎಕರೆ ಗುರಿ
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ರಿಯಾಯಿತಿ ದರದಲ್ಲಿ ಬಾಡಿಗೆ ಆಧಾರಿತ ಕೃಷಿ ಯಂತ್ರಗಳನ್ನು ರೈತರಿಗೆ ದೊರಕಿಸುವ ವ್ಯವಸ್ಥೆ ಮಾಡಿದೆ. ಪ್ರಸಕ್ತ¤ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 2,200 ಎಕರೆ ಗುರಿ ಹೊಂದಿ 1,902 ಎಕರೆ ಪ್ರದೇಶದಲ್ಲಿ ರೈತರು ಯಾಂತ್ರಿಕ ಪದ್ಧತಿಯ ಶ್ರೀ ಭತ್ತ ಬೇಸಾಯ ಕ್ರಮವನ್ನು ಅನುಷ್ಠಾನಗೊಳಿಸಿದ್ದಾರೆ.

ಪ್ರೋತ್ಸಾಹಧನ
ಕುಂದಾಪುರ ತಾಲೂಕಿನಲ್ಲಿ 279 ರೈತರು 480 ಎಕರೆಯಲ್ಲಿ ಮುಂಗಾರಿನಲ್ಲಿ ಯಂತ್ರಶ್ರೀ ಅನುಷ್ಠಾನಿಸಿದ್ದು, 50 ಲಕ್ಷ ರೂ. ಪ್ರಗತಿನಿಧಿ ವಿತರಿಸಲಾಗಿದೆ. ಜತೆಗೆ 5 ಲಕ್ಷ ರೂ. ಪ್ರೋತ್ಸಾಹಧನ ಮೀಸಲಿಡಲಾಗಿದೆ. ರೈತರಿಗೆ ನರ್ಸರಿ ತಯಾರಿಗೆ ಅನುಕೂಲವಾಗುವಂತೆ 7,700 ಟ್ರೇ
ಒದಗಿಸಲಾಗಿದೆ ಎಂದು ಯೋಜನೆಯ ತಾ| ಹಿರಿಯ ನಿರ್ದೇಶಕ ಮುರಳೀಧರ ಕೆ. ಶೆಟ್ಟಿ ತಿಳಿಸಿದ್ದಾರೆ.

ಧರ್ಮಸ್ಥಳ ಯೋಜನೆ, ರಾಜ್ಯ ಸರಕಾರದ ಕೃಷಿ ಇಲಾಖೆಯ ‘ಕೃಷಿ ಯಂತ್ರಧಾರಾ’ ಮೂಲಕ ಉಳುಮೆಯಿಂದ ಹಿಡಿದು ಕಟಾವಿನ ತನಕ ಯಂತ್ರಗಳನ್ನು ಬಾಡಿಗೆ ನೀಡಲಾಗುತ್ತಿದೆ ಎನ್ನುತ್ತಾರೆ ಕೃಷಿ ಯಂತ್ರಧಾರೆ ಕೇಂದ್ರದ ಪ್ರಬಂಧಕ ರಾಜೇಶ್‌. ಅಧಿಕ ಖರ್ಚು ಹಾಗೂ ಕೂಲಿ ಸಮಸ್ಯೆಯಿಂದ ನನ್ನ ಜಾಗವನ್ನು ಹಡಿಲು ಬಿಟ್ಟದ್ದನ್ನು ಈಗ ಕೃಷಿ ಮಾಡಿದ್ದೇನೆ ಎನ್ನುತ್ತಾರೆ ಪ್ರಗತಿಪರ ಕೃಷಿಕ ಸುಜೀತ್‌ ಕುಮಾರ್‌ ಶೆಟ್ಟಿ ಅಸೋಡು.

ಜಿಲ್ಲೆಯಲ್ಲಿ 3 ಕೋ.ರೂ. ಪ್ರಗತಿನಿಧಿ , 25 ಲಕ್ಷ ರೂ. ಪ್ರೋತ್ಸಾಹಧನವನ್ನು ಕ್ರಿಯಾ ಯೋಜನೆಯಲ್ಲಿ ನಿಗದಿಗೊಳಿಸಲಾಗಿದೆ. ಯಾಂತ್ರಿಕ ಪದ್ಧತಿ ಅಳವಡಿಸಿಕೊಂಡ ರೈತರಿಗೆ 20,000 ರೂ. ಬೆಳೆ ಸಾಲ, ಎಕರೆಗೆ 500ರಿಂದ 2,500 ರೂ.ವರೆಗೆ ಪ್ರೋತ್ಸಾಹಧನ ನೀಡುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 750 ಎಕರೆಯಲ್ಲಿ ಹಡಿಲು ಭೂಮಿಗೆ ಹಸುರುಸ್ಪರ್ಶ ನೀಡಲಾಗಿದೆ. ಕುಂದಾಪುರ-480 ಎಕರೆ, ಬೈಂದೂರು -650 ಎಕರೆ, ಬ್ರಹ್ಮಾವರ- 250 ಎಕರೆ, ಉಡುಪಿ – 250 ಎಕರೆ, ಕಾರ್ಕಳ-172 ಎಕರೆ, ಮೂಡಬಿದಿರೆ-100 ಎಕರೆಯಲ್ಲಿ ಅನುಷ್ಠಾನಿಸಲಾಗಿದೆ.

Advertisement

ಹಡಿಲು ಭೂಮಿಯಲ್ಲೂ ಕೃಷಿ
ಉಡುಪಿ ಜಿಲ್ಲೆಯಲ್ಲಿ ಈ ವರ್ಷ ಸುಮಾರು 2,200 ಎಕರೆಯಲ್ಲಿ ಯಾಂತ್ರೀಕೃತ ಭತ್ತ ಬೇಸಾಯದ ಗುರಿ ಇಟ್ಟುಕೊಳ್ಳಲಾಗಿದೆ. ಹಲವು ಕಾರಣಗಳಿಂದ ಬೇಸಾಯ ಮಾಡಲಾಗದೇ ಹಡಿಲು ಬಿಟ್ಟ ಸುಮಾರು 750 ಎಕ್ರೆಯಲ್ಲಿ ಭತ್ತ ಬೇಸಾಯ ಮಾಡಿಸಲಾಗಿದೆ.
-ಗಣೇಶ್‌ ಬಿ., ಹಿರಿಯ ನಿರ್ದೇಶಕರು, ಧ.ಗ್ರಾ. ಯೋಜನೆ

Advertisement

Udayavani is now on Telegram. Click here to join our channel and stay updated with the latest news.

Next