Advertisement

ಮುಂದಿನ ವಾರದಿಂದ ಯಾನ ಆರಂಭ

11:07 PM Jul 04, 2019 | mahesh |

ವಿಜಯಲಕ್ಷ್ಮೀ ಸಿಂಗ್‌ ನಿರ್ದೇಶಿಸಿರುವ ‘ಯಾನ’ ಚಿತ್ರ ಮುಂದಿನ ವಾರ (ಜುಲೈ 12) ತೆರೆಕಾಣುತ್ತಿದೆ. ಅದರ ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಯಶ್‌ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಈ ಚಿತ್ರದ ಮೂಲಕ ಜೈಜಗದೀಶ್‌-ವಿಜಯಲಕ್ಷ್ಮೀ ದಂಪತಿಯ ಮಕ್ಕಳಾದ ವೈನಿಧಿ, ವೈಸಿರಿ, ವೈಭವಿ ಚಿತ್ರರಂಗಕ್ಕೆ ನಾಯಕಿಯರಾಗಿ ಎಂಟ್ರಿಕೊಡುತ್ತಿದ್ದಾರೆ. ಇವರಿಗೆ ಸುಮುಖ, ಚಕ್ರವರ್ತಿ ಹಾಗೂ ಅಭಿಷೇಕ್‌ ನಾಯಕರಾಗಿ ನಟಿಸಿದ್ದಾರೆ. ಆಕ್ಮೆ ಮೂವೀಸ್‌ ಇಂಟರ್‌ ನ್ಯಾಷನಲ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಹರೀಶ್‌ ಶೇರಿಗಾರ್‌, ಶರ್ಮಿಳಾ ಶೇರಿಗಾರ್‌ ನಿರ್ಮಿಸಿದ್ದಾರೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಜರ್ನಿ ಕುರಿತಾದ ಕಥೆ ಎಂಬುದು ನಿರ್ದೇಶಕರ ಮಾತು. ‘ಯಾನ’ ಬಗ್ಗೆ ಹೇಳುವುದಾದರೆ, ಇದೊಂದು ಜನಿರ ಕಥೆ. ಬೆಂಗಳೂರಿನಿಂದ ಗೋವಾದವರೆಗೆ ಕಥೆ ನಡೆಯುತ್ತೆ. ದಾರಿ ಮಧ್ಯೆ ಸಿಗುವ ಚಿತ್ರದುರ್ಗ, ದಾವಣಗೆರೆ ಹೀಗೆ ಕೆಲ ಸ್ಥಳಗಳಲ್ಲೂ ಚಿತ್ರ ಸಾಗುತ್ತದೆ. ಚಿತ್ರದಲ್ಲಿ ಮನರಂಜನೆ ಇರುತ್ತೆ. ಅದಕ್ಕಿಂತ ಹೆಚ್ಚಾಗಿ ಈ ವಯಸ್ಸಿನ ಹುಡುಗಿಯರು ಏನಿಷ್ಟ ಪಡ್ತಾರೆ, ಎಂಥಾ ಕಷ್ಟಪಡ್ತಾರೆ, ಏನೆಲ್ಲಾ ತೊಂದರೆ ಅನುಭವಿಸ್ತಾರೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆಯಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next