Advertisement

ಆರೋಗ್ಯ ಸಮಸ್ಯೆ ಹೇಳಿಕೊಂಡ “ಉಲ್ಲಾಸ ಉತ್ಸಾಹ” ನಟಿ ಯಾಮಿ

02:09 PM Oct 05, 2021 | Team Udayavani |

ಮುಂಬೈ : ಗೋಲ್ಡನ್ ಸ್ಟಾರ್ ಗಣೇಶ್ ಅವರ “ಉಲ್ಲಾಸ ಉತ್ಸಾಹ” ಚಿತ್ರದ ನಟಿ ಯಾಮಿ ಗೌತಮ್ ಅವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ವಿಚಾರವನ್ನು ಅವರು ಸೋಮವಾರ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Advertisement

ಹೊಸ ಫೋಟೊ ಶೂಟ್ ದಲ್ಲಿ ಕಕಾಣಸಿಕೊಂಡಿರುವ ಯಾಮಿ ಅವುಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಅವುಗಳ ಜೊತೆಗೆ ತಮಗಿರುವ ಚರ್ಮ ಸಂಬಂಧಿ ಕಾಯಿಲೆ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ರಟೋಸಿಸ್ ಪಿಲಾರಸ್​ ಎಂಬ ಚರ್ಮದ ಸಮಸ್ಯೆ ಯಾಮಿ ಗೌತಮ್​ ಅವರನ್ನು ಕಾಡುತ್ತಿದೆ. ಇದೇನೂ ಗಂಭೀರ ಸಮಸ್ಯೆ ಅಲ್ಲ. ಆದರೆ, ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಇದಕ್ಕೆ ಪರಿಹಾರ ಸಿಕ್ಕಿಲ್ಲ. ಚರ್ಮದ ಮೇಲ್ಭಾಗದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಆಗುತ್ತವೆ. ಈ ಗುಳ್ಳೆಗಳಿಂದ ಉರಿ, ತುರಿಕೆ, ನೋವು ಏನೂ ಇರುವುದಿಲ್ಲ. ಇದು ಕೆರಟೋಸಿಸ್ ಪಿಲಾರಸ್​ ಲಕ್ಷಣ. ಹದಿಹರೆಯಲ್ಲಿ ಇದ್ದಾಗಲೇ ಯಾಮಿ ಗೌತಮ್​ ಅವರಿಗೆ ಈ ಸಮಸ್ಯೆ ಕಾಣಿಸಿಕೊಂಡಿತು. ಅಂದಿನಿಂದ ಇದನ್ನು ಮುಚ್ಚಿಟ್ಟುಕೊಂಡೇ ಬಂದಿದ್ದ ಅವರು ಈಗ ಎಲ್ಲವನ್ನೂ ಬಹಿರಂಗಪಡಿಸಿದ್ದಾರೆ.

‘ಇತ್ತೀಚೆಗೆ ಒಂದು ಫೋಟೋಶೂಟ್​ ಮಾಡಲಾಯಿತು. ಸಾಮಾನ್ಯವಾಗಿ ನಮ್ಮ ಚರ್ಮದ ಸಮಸ್ಯೆಯನ್ನು ಮರೆಮಾಚುವ ಸಲುವಾಗಿ ಆ ಫೋಟೋಗಳನ್ನು ಪೋಸ್ಟ್​ ಪ್ರೊಡಕ್ಷನ್​ಗೆ ಕಳಿಸುತ್ತೇವೆ. ಆದರೆ ಈ ಬಾರಿ ಬೇರೆ ಆಲೋಚನೆ ಬಂತು. ನಾನೇಕೆ ಈ ಸಮಸ್ಯೆಯನ್ನು ಒಪ್ಪಿಕೊಳ್ಳಬಾರದು ಎನಿಸಿತು’ ಎಂದು ಯಾಮಿ ಗೌತಮ್​ ಹೇಳಿಕೊಂಡಿದ್ದಾರೆ.

Advertisement

‘ಸತ್ಯವನ್ನು ನಿಮ್ಮೆದುರು ಒಪ್ಪಿಕೊಳ್ಳಲು ಧೈರ್ಯ ಮಾಡಿದ್ದೇನೆ. ನಾನು ಹದಿಹರೆಯದಲ್ಲಿ ಇರುವಾಗಲೇ ಈ ಸಮಸ್ಯೆ ಇರುವುದು ಗೊತ್ತಾಯಿತು. ಇನ್ನೂ ಇದು ವಾಸಿ ಆಗಿಲ್ಲ. ತುಂಬ ವರ್ಷಗಳಿಂದ ಇದನ್ನು ನಿಭಾಯಿಸುತ್ತಿದ್ದೇನೆ. ಆದರೆ ಇಂದು ನನ್ನ ನ್ಯೂನತೆಯನ್ನು ಒಪ್ಪಿಕೊಂಡು, ಭಯ ಮತ್ತು ಅಭದ್ರತೆಯನ್ನು ತೊಲಗಿಸುವ ಧೈರ್ಯ ಮಾಡಿದ್ದೇನೆ’ ಎಂದು ಯಾಮಿ ಗೌತಮ್​ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next