Advertisement

ಯಮಹಾ ಆರ್‌15 ವಿ 3.0 ಮಾದರಿ ಬೈಕ್‌ಗಳ ಬೆಲೆಯಲ್ಲಿ ಏರಿಕೆ

09:57 AM Oct 15, 2019 | sudhir |

ಎಫ್ ಝೆಡ್ ಮಾದರಿಯ ಬೈಕ್‌ಗಳನ್ನು ಮಾರುಕಟ್ಟೆಗೆ ತಂದು ಯುವಕರ ಮನಗೆದ್ದಿದ್ದ ಯಮಹಾ ಕಂಪೆನಿ ಬೈಕ್‌ ಪ್ರಿಯಕರಿಗೆ ಶಾಕ್‌ ನೀಡಿದ್ದು, ತನ್ನ ಒಡೆತನದ ಎರಡು ಮಾದರಿಯ ಬೈಕ್‌ಗಳ ಬೆಲೆಯನ್ನು ಹೆಚ್ಚಿಸಿದೆ.

Advertisement

ಯಮಹಾ ಆರ್‌15 ವಿ 3.0 ತನ್ನ ಸ್ಟಾಂಡರ್ಡ್‌ ಮತ್ತು ಡಾರ್ಕ್ ನೈಟ್‌ ಆವೃತ್ತಿಯ ಬೈಕುಗಳ ಬೆಲೆಯನ್ನು ರೂ.600 ರಷ್ಟು ಹೆಚ್ಚಿಸಿದ್ದು, ಪ್ರಸ್ತುತ ಭಾರತದ ಮಾರುಕಟ್ಟೆಯ ಎಕ್ಸ್‌ ಶೋರೂಂ ಪ್ರಕಾರ ಈ ಬೈಕಿನ ಆರಂಭಿಕ ಬೆಲೆ ರೂ.1,40,880 ಲಕ್ಷದಿಂದ ಶುರುವಾಗಲಿದೆ.

ದೇಶಿಯ ಮಾರುಕಟ್ಟೆಯ ಇತರ ಕಂಪೆನಿಗಳು ಭಾರೀ ರಿಯಾಯಿತಿ ಮತ್ತು ಆಫ‌ರ್‌ಗಳನ್ನು ನೀಡುತ್ತಿರುವ ಈ ವೇಳೆಯಲ್ಲಿ ಯಮಹಾ ಮಾತ್ರ ತನ್ನ ಎರಡು ಆವೃತ್ತಿಗಳ ಬೆಲೆಯನ್ನು ಏರಿಸಿದ್ದು, ಗ್ರಾಹಕರು ಆಶ್ಚರ್ಯ ಪಡುವಂತಾಗಿದೆ.

ಜತೆಗೆ ಕಂಪೆನಿ ಬೆಲೆ ಏರಿಕೆಗೆ ನಿಖರವಾದ ಕಾರಣವನ್ನು ಬಹಿರಂಗ ಪಡಿಸದೇ ದರ ಹೆಚ್ಚಳದಿಂದ ಗ್ರಾಹಕರಿಗೆ ದೊಡ್ಡ ವ್ಯತ್ಯಾಸ ಏನು ಆಗದು ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next