Advertisement
ದೇಶದಲ್ಲೀಗ ಹೈಪವರ್‌ನ ಸ್ಟ್ರೀಟ್ ಬೈಕ್‌ಗಳಿಗೆ ಮಾರುಕಟ್ಟೆ ಕುದುರಿದ್ದು ಹೊಸ ಸುದ್ದಿಯೇನಲ್ಲ. ಯುವಜನರು ಇಂತಹ ಬೈಕ್‌ಗಳನ್ನೇ ಹೆಚ್ಚು ಇಷ್ಟ ಪಡುತ್ತಿದ್ದಾರೆ. ಈ ಕಾರಣಕ್ಕೆ ಸ್ಟ್ರೀಟ್ ಬೈಕ್ ಮಾದರಿಯ ಕೆಟಿಎಂ ಡ್ನೂಕ್‌ಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಇದರೊಂದಿಗೆ 150 ಸಿಸಿಯ ಹೊಸ ಬೈಕ್‌ಗಳೂ ಈ ವರ್ಷ ಬರಲಿವೆ. ಈ ಸಾಲಿನಲ್ಲಿ ಮೊದಲಿಗೆ ಯಮಹಾ ಎಂಟಿ 15 ಮಾದರಿಯ ಬೈಕ್ ಅನ್ನು ಮಾರುಕಟ್ಟೆಗೆ ಇತ್ತೀಚೆಗೆ ಬಿಡುಗಡೆ ಮಾಡಿದೆ.
ಎಮ್‌ಟಿ 15 ವಿನ್ಯಾಸ ಹೇಳಿಕೇಳಿ ಪೇಟೆಗೆ ದಿ ಬೆಸ್ಟ್ ಎಂಬಂತಿದೆ. ಪೇಟೆಯ ಎಂತಹ ಬಳುಕಿನ ರಸ್ತೆಯಲ್ಲೂ ಇದನ್ನು ಲೀಲಾಜಾಲವಾಗಿ ಸವಾರಿ ಮಾಡಬಹುದು. ಬಿಸಿ ರಕ್ತದ ಯುವಕರಾದರೆ ನುಗ್ಗಿಸಬಹುದು ಎಂಬಂತಿದೆ. ಹೆಡ್‌ಲೈಟ್ ಆಕರ್ಷಕವಾಗಿದ್ದು ಎರಡು ಎಲ್‌ಇಡಿ ಮತ್ತು ಒಂದು ಪ್ರೊಜೆಕ್ಟರ್ ಲೈಟ್ ಹೊಂದಿದ್ದು, ಅತಿ ಪ್ರಕಾಶಮಾನವಾಗಿದೆ. ಇದು ಕಣ್ಣಿನಂತೆಯೇ ಭಾಸವಾಗುತ್ತದೆ. ಟ್ಯಾಂಕ್ ವಿನ್ಯಾಸ ಆಕರ್ಷಕವಾಗಿದ್ದು ಕಾಲು 40 ಡಿಗ್ರಿಯಷ್ಟು ಬಾಗಿ ಇಡುವಂತಿದೆ. ನ್ಪೋರ್ಟಿ ಡಿಸೈನ್ ಇದ್ದು, ಫೇರಿಂಗ್ ಇಲ್ಲದೆ ಇರುವುದರಿಂದ ದಟ್ಟಣೆಯ ರಸ್ತೆಗಳಲ್ಲೂ ಆರಾಮದಾಯಕ ಸವಾರಿ ಸಾಧ್ಯವಿದೆ. ಹಿಂಭಾಗದ ಸೀಟ್ ತುಸು ಎತ್ತರವಿದ್ದು, ರೈಡರ್ ಪೊಸಿಷನ್ ಉತ್ತಮವಾಗಿದೆ. ಹಿಂಭಾಗ ಎಲ್‌ಇಡಿ ಬ್ರೇಕ್ ಲೈಟ್, ಎರಡೂ ಡಿಸ್ಕ್ ಬ್ರೇಕ್‌ಗಳನ್ನು ಇದು ಹೊಂದಿದೆ. ಡಿಜಿಟಲ್ ಸ್ಪೀಡೋ ಮೀಟರ್ ಇದರಲ್ಲಿದೆ.
Related Articles
ಯಮಹಾ ಬೈಕ್ ಅಂದರೆ ಮೊದಲಿನಿಂದಲೂ ರೋಡ್ ಗ್ರಿಪ್‌ಗೆ ಹೆಸರುವಾಸಿ. ಇದರ ಹ್ಯಾಂಡಲ್‌ಗಳು ಹೆಚ್ಚು ಅಗಲ ಇಲ್ಲದೆ ಅಚ್ಚುಕಟ್ಟಾಗಿ ನಿಯಂತ್ರಣ ಮಾಡುವಂತಿದೆ. ಬೈಕನ್ನು ಬೇಕಾದಂತೆ ತಿರುಗಿಸಬಹುದು. ಬೈಕ್ ಹೆಚ್ಚು ಭಾರವೂ ಇಲ್ಲ. 140 ಎಂಎಂನ ಅಗಲವಾದ ಟಯರ್‌ಗಳು ತಿರುವಿನಲ್ಲೂ ಸವಾರರಿಗೆ ಹೆಚ್ಚಿನ ಧೈರ್ಯ ತಂದುಕೊಡುತ್ತದೆ. ಬ್ಯಾಲೆನ್ಸಿಂಗ್ ಅತ್ಯುತ್ತಮವಾಗಿದ್ದು ಸವಾರರು ಖುಷಿಯಿಂದ ಓಡಿಸಬಹುದು. ಹಿಂಭಾಗದ ಮೋನೋ ಶಾಕ್ಸ್ ಮತ್ತು ಮುಂಭಾಗದ ಟೆಲಿಸ್ಕೋಪಿಕ್ ಶಾಕ್ಸ್‌ಗಳು ಪರಿಣಾಮಕಾರಿಯಾಗಿವೆ.
Advertisement
ತಾಂತ್ರಿಕ ವಿಶೇಷತೆಗಳು150 ಸಿಸಿ
ಲಿಕ್ವಿಡ್ ಕೂಲ್ಡ್ 4 ಸ್ಟ್ರೋಕ್
19.3 ಬಿಎಚ್‌ಪಿ
14.7 ಎನ್‌ಎಂ ಟಾರ್ಕ್
ಫುÂಯಲ್ ಇಂಜೆಕ್ಷನ್
ಸಿಂಗಲ್ ಚಾನೆಲ್ ಎಬಿಎಸ್
282, 220 ಎಂಎಂ. ಡಿಸ್ಕ್
ಟ್ಯೂಬ್‌ಲೆಸ್ ಟಯರ್‌ಗಳು
1335 ಎಂಎಂ ವೀಲ್‌ಬೇಸ್
155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಎಂಜಿನ್ ವಿಶೇಷತೆ
ವೈಝಡ್‌ಎಫ್-ಆರ್ 15 ಎಂಜಿನ್ ಅನ್ನೇ ಇದೂ ಹೊಂದಿದೆ. ಆದರೆ ತುಸು ಟ್ಯೂನಿಂಗ್ ಕಂಡಿದೆ. ಪವರ್ ಡೆಲಿವರಿ ಉತ್ತಮವಾಗಿದೆ. 150 ಸಿಸಿಯ ಈ ಎಂಜಿನ್ 4 ಸ್ಟ್ರೋಕ್ 4 ವಾಲ್Ì ಹೊಂದಿದೆ. 19.3 ಎಚ್‌ಪಿ ಶಕ್ತಿಯನ್ನು ಹೊಂದಿದೆ. 8500 ಆರ್‌ಪಿಎಂನಲ್ಲಿ 14.7 ಎನ್‌ಎಂ ಟಾರ್ಕ್ ಹೊಂದಿದೆ. ಆಯಿಲ್ ಕೂಲ್ಡ್ ಎಂಜಿನ್ ಇದಾಗಿದ್ದು, ಫುÂಯೆಲ್ ಇಂಜಕ್ಷನ್ ಸಿಸ್ಟಂ ಹೊಂದಿದೆ. 6 ಸ್ಪೀಡ್ ಗಿಯರ್ ಬಾಕ್ಸ್ ಇದೆ. ಸ್ಲಿàಪರ್ ಕ್ಲಚ್ ಹೊಂದಿದ್ದು ಅತ್ಯುತ್ತಮ ನಿಯಂತ್ರಣಕ್ಕೆ ನೆರವು ನೀಡುತ್ತದೆ. 10 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ. ಒಟ್ಟು ಭಾರ 138 ಕೆ.ಜಿ. ಇದೆ. ಸಿಂಗಲ್ ಚಾನೆಲ್ ಎಬಿಎಸ್ ಹೊಂದಿದೆ. ಬೆಲೆ ಎಷ್ಟು?
ದೆಹಲಿಯಲ್ಲಿ ಇದರ ಬೆಲೆ 1.36 ಲಕ್ಷ ರೂ. (ಎಕ್ಸ್‌ಷೋರೂಂ). ಆಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ 150 ಸಿಸಿ ಬೈಕ್‌ಗಳಲ್ಲೇ ಅತಿ ಪವರ್‌ಫುಲ್ ಬೈಕ್ ಇದಾಗಿರುವುದರಿಂದ ಬೆಲೆ ಇಷ್ಟಿದೆ. ಯಮಹಾ ಗುಣಮಟ್ಟದ ಎಂಜಿನ್‌ಗೆ ಹೆಸರುವಾಸಿ. ಒಂದು ವರ್ಗದ ಅಭಿಮಾನಿಗಳು ಇದಕ್ಕೆ ಹೆಚ್ಚಿದ್ದಾರೆ. ಆದ್ದರಿಂದ ಕಂಪೆನಿ ಕೂಡ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಗಬಹುದೆಂಬ ನಿರೀಕ್ಷೆಯಲ್ಲಿದೆ. – ಈಶ