Advertisement
ಹಾಲಿ ವಿಶ್ವ ಚಾಂಪಿಯನ್ ಆಗಿರುವ ಅಕಾನೆ ಯಮಾಗುಚಿ ವಿಶ್ವದ 4ನೇ ರ್‍ಯಾಂಕಿಂಗ್ ಆಟಗಾರ್ತಿ, ದಕ್ಷಿಣ ಕೊರಿಯಾದ ಆ್ಯನ್ ಸೆ ಯಂಗ್ ವಿರುದ್ಧ 12-21, 21-19, 21-11 ಅಂತರದ ಗೆಲುವು ಸಾಧಿಸಿದರು.
ಪುರುಷರ ಸಿಂಗಲ್ಸ್ ಫೈನಲ್ ಎನ್ನುವುದು ಕಳೆದ ತಿಂಗಳ “ವರ್ಲ್ಡ್ ಟೂರ್ ಫೈನಲ್ಸ್’ನ ಪುನರಾವರ್ತನೆ ಆಗಿತ್ತು. ಹಾಲಿ ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಕೂಡ ಆಗಿರುವ ವಿಕ್ಟರ್ ಅಕ್ಸೆಲ್ಸೆನ್, ಜಪಾನ್‌ನ ಯುವ ಆಟಗಾರ ಕೊಡೈ ನರವೋಕ ಅವರನ್ನು 40 ನಿಮಿಷಗಳ ಕಾದಾಟದ ಬಳಿಕ 21-6, 21-15 ಅಂತರದಿಂದ ಪರಾಭವ ಗೊಳಿಸಿದರು. ಇದು ಅಕ್ಸೆಲ್ಸೆನ್ ಪಾಲಾದ 9ನೇ ಸೂಪರ್ ಸೀರಿಸ್ ಪ್ರಶಸ್ತಿ.