Advertisement

ಯಮನಿಂದ ನಿಯಮದ ಅರಿವು

11:18 AM Jul 17, 2018 | Team Udayavani |

ಬೆಂಗಳೂರು: ಸಂಚಾರ ನಿಯಮ ಪಾಲನೆಯ ಅರಿವು ಮೂಡಿಸಲು ಇತ್ತೀಚೆಗೆ ಹಲಸೂರು ಗೇಟ್‌ ಠಾಣೆ ವ್ಯಾಪ್ತಿಯಲ್ಲಿ ಯಮ ಧರ್ಮರಾಯನ ವೇಷ ಧರಿಸಿ ಅರಿವು ಮೂಡಿಸಿದ್ದ ರಂಗಭೂಮಿ ಕಲಾವಿದ ವೀರೇಶ್‌ ಸೋಮವಾರ ಹೈಗ್ರೌಂಡ್ಸ್‌ ಠಾಣೆ ವ್ಯಾಪ್ತಿಯಲ್ಲಿ ಮತ್ತೂಮ್ಮೆ ಯಮ ಧರ್ಮರಾಯನ ವೇಷಧರಿಸಿ ಜಾಗೃತಿ ಮೂಡಿಸಿದರು.

Advertisement

ಚಾಲುಕ್ಯ ವೃತ್ತ ಸುತ್ತ-ಮುತ್ತ ಸಂಚಾರ ನಿಯಮ ಉಲ್ಲಂ ಸುವ ಸವಾರರನ್ನು ತಡೆದು, ಶಿರಾಸ್ತ್ರಾಣ ಧರಿಸದೆ ವಾಹನ ಚಲಾಯಿಸಿದರೆ ನಿಮ್ಮ ಬೆನ್ನು ಬೀಳುತ್ತೇನೆ ಎಂದು ಎಚ್ಚರಿಸುವ ಮೂಲಕ ಅರಿವು ಮೂಡಿಸಿದರು.

ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಯಮ ಧರ್ಮರಾಯ ವೇಷಧಾರಿ ವೀರೇಶ್‌, ಕಳೆದ ವರ್ಷ ಜೂನ್‌ 23ರಂದು ಗಂಗಾವತಿಯಿಂದ ಕೊಪ್ಪಳಕ್ಕೆ ಬೈಕ್‌ನಲ್ಲಿ ಹೋಗುವಾಗ ನನ್ನ ಸಹೋದರ ರಸ್ತೆ ಅಪಘಾತವಾಗಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಮೂರು ದಿನಗಳ ಕೋಮಸ್ಥಿತಿಯಲ್ಲಿದ್ದು, ಬಳಿಕ ಮೃತಪಟ್ಟಿದ್ದ. ಘಟನೆ ವೇಳೆ ಆತ ಹೆಲ್ಮೆಟ್‌ ಧರಿಸಿರಲಿಲ್ಲ. ಹೀಗಾಗಿ ಹಲಸೂರು ಗೇಟ್‌ ಠಾಣೆ ಇನ್‌ಸ್ಪೆಕ್ಟರ್‌ ಮೊಹಮ್ಮದ್‌ ಅಲಿ ಕಾರ್ಯಕ್ರಮವೊಂದರಲ್ಲಿ ಅರಿವು ಮೂಡಿಸುವ ಆಂದೋಲನಕ್ಕೆ ಮನವಿ ಮಾಡಿದ ಕೂಡಲೇ ಒಪ್ಪಿಕೊಂಡೆ ಎಂದು ಹೇಳಿದರು. ವೀರೇಶ್‌, ಶ್ರೀ ವಿವೇಕಾನಂದ ಕಲಾಕೇಂದ್ರದ ಸಂಯೋಜಕರಾಗಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next