Advertisement

ಯಲಬುರ್ಗಾ: ಶಾಲೆಯತ್ತ ಮತ್ತೆ ಹೆಜ್ಜೆ ಹಾಕಿದ ಮಕ್ಕಳು

05:50 PM May 30, 2018 | Team Udayavani |

ಯಲಬುರ್ಗಾ: ಸರ್ಕಾರ ನೀಡುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು. ಖಾಸಗಿ ಶಾಲೆಗಿಂತ ನಮ್ಮ ಸರ್ಕಾರಿ ಶಾಲೆಗಳೂ ಯಾವುದರಲ್ಲಿಯೂ ಕಡಿಮೆ ಇಲ್ಲ.ಪಾಲಕರು
ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವದನ್ನು ಬಿಟ್ಟು ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ ಆಯಾ ಗ್ರಾಮದಲ್ಲಿ ಶಾಲೆಯು ಉಳಿಯುತ್ತದೆ ಎಂದು ತಾಳಕೇರಿ ವಲಯದ ಸಿಆರ್‌ಪಿ ಸಂಗಯ್ಯ ಹಿರೇಮಠ ಹೇಳಿದರು.

Advertisement

ತಾಲೂಕಿನ ವನಜಭಾವಿ ಗ್ರಾಮದಲ್ಲಿ ಮಂಗಳವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೊತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಾಥಮಿಕ ಶಿಕ್ಷಣ ಎಂಬುವುದು ಮನೆಯ ತಳಪಾಯದಂತೆ. ಮನೆ ಗಟ್ಟಿಯಾಗಿ ನಿಲ್ಲಬೇಕಾದರೆ ಹೇಗೆ ತಳಪಾಯ ಗಟ್ಟಿಯಾಗಿ ಹಾಕುತ್ತೇವೆಯೋ ಹಾಗೆ ಪ್ರಾಥಮಿಕ ಹಂತದಲ್ಲಿರುವಾಗಲೇ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಂಡರೆ ಮುಂದಿನ ಶಿಕ್ಷಣ ಗಟ್ಟಿಯಾಗುತ್ತದೆ ಎಂದರು.

ಗ್ರಾಮದ ವಿವಿಧ ಓಣಿಗಳ ಮೂಲಕ ಪ್ರಸಕ್ತ ಸಾಲಿಗೆ ದಾಖಲಾತಿ ಪಡೆದ ಮಕ್ಕಳನ್ನು ಎತ್ತಿನ ಬಂಡಿಯಲ್ಲಿ ಶಾಲೆಗೆ ಕರೆತರಲಾಯಿತು. ನಂತರ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು. ಎಸ್ ಡಿ ಎಂಸಿ ಅಧ್ಯಕ್ಷ ಬಸವರಾಜ ದೇವಲ್‌, ಪದಾಧಿಕಾರಿಗಳಾದ ಸಾವಿತ್ರಮ್ಮ ತಾಳಕೇರಿ, ಮುಖ್ಯಶಿಕ್ಷಕ ಸೋಮಸಿಂಗ್‌ ರಾಠೊಡ, ಹಾಗೂ
ಶಾಲಾ ಸಿಬ್ಬಂದಿವರ್ಗ ಹಾಗೂ ಗ್ರಾಮದ ಗುರು-ಹಿರಿಯರು ಪಾಲ್ಗೊಂಡಿದ್ದರು. ಕುಡಗುಂಟಿ: ಸಮೀಪದ ಕುಡಗುಂಟಿ
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.

ಶಿಕ್ಷಣಪ್ರೇಮಿ ಬಸವರಾಜ ಕುಡಗುಂಟಿ ಮಕ್ಕಳಿಗೆ ಉಚಿತ ನೋಟ್‌ಬುಕ್‌ ವಿತರಣೆ ಮಾಡಿದರು. ಮುಖ್ಯಶಿಕ್ಷಕ ವಿರೂಪಾಕ್ಷಪ್ಪ ಬಳಗೇರಿ, ಶಿಕ್ಷಕರಾದ ಮಹಾಲಿಂಗಪ್ಪ ಉಳ್ಳಾಗಡ್ಡಿ, ಶರಣಪ್ಪ ಇಟಗಿ, ಗುಂಡಪ್ಪ ಅಸೂಟಿ, ಸಿದ್ದಲಿಂಗಪ್ಪ ಶ್ಯಾಗೋಟಿ, ಸಕ್ರಪ್ಪ ಕುಂಟ್ರ, ಮಂಜುನಾಥ ಸಂಗಟಿ, ಇತರರು ಇದ್ದರು.

Advertisement

ಚಿಕೇನಕೊಪ್ಪ: ಗ್ರಾಮದ ಶ್ರೀಚೆನ್ನವೀರ ಶರಣರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಾಲಾ ಪ್ರಾರಂಭೋತ್ಸವ ಅದ್ದೂರಿ ನಡೆಯಿತು. ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಯಿತು. ಸಿಆರ್‌ಪಿ ಮಹೇಶ ಆರೇರ, ಎಸ್ ಡಿ ಎಂಸಿ ಅಧ್ಯಕ್ಷ ವಿರೂಪಾಕ್ಷಪ್ಪ ಹಕಾರಿ, ಮುಖ್ಯಶಿಕ್ಷಕ ಮಹಾಂತೇಶ ಅಂಗಡಿ ಹಾಗೂ ಶಾಲಾ ಸಿಬ್ಬಂದಿ ಎಸ್ ಡಿ ಎಂಸಿ ಪದಾಧಿಕಾರಿಗಳು ಗ್ರಾಮದ ಗುರು-ಹಿರಿಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next