Advertisement

“ಎಲ್ಲಿಗೆ ಪಯಣ ಯಾವುದೋ ದಾರಿ”ಮೊದಲ ಹಂತದ ಚಿತ್ರೀಕರಣ ಪೂರ್ಣ

08:56 PM Mar 18, 2020 | Lakshmi GovindaRaj |

“ಎಲ್ಲಿಗೆ ಪಯಣ ಯಾವುದೋ ದಾರಿ…” ಎನ್ನುವ ಹಾಡನ್ನು ನೀವೆಲ್ಲ ಕೇಳಿರುತ್ತೀರಿ. ಈ ಜನಪ್ರಿಯ ಚಿತ್ರಗೀತೆಯ ಸಾಲು ಈಗ ಚಿತ್ರವೊಂದರ ಶೀರ್ಷಿಕೆಯಾಗಿ ತೆರೆಮೇಲೆ ಬರುತ್ತಿದೆ. ಕಿರಣ್‌ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಹಿರಿಯ ನಟ ಕಂ ನಿರ್ದೇಶಕ ಕಾಶಿನಾಥ್‌ ಪುತ್ರ ಅಭಿಮನ್ಯು ಕಾಶಿನಾಥ್‌ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

Advertisement

ಸ್ಪೂರ್ತಿ ಉಡಿಮನೆ ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಬಾಲ ರಾಜವಾಡಿ, ವಿಜಯಶ್ರೀ, ಗಣೇಶ್‌ ನಾರಾಯಣ್‌, ರವಿಕುಮಾರ್‌, ಶೋಭನ್‌, ಕಿಶೋರ್‌, ಅಶ್ವಿ‌ನಿ ಮುಂತಾದವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಎರಡು ಹಾಡುಗಳಿಗೆ ಗಣೇಶ್‌ ನಾರಾಯಣ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

ಚಿತ್ರಕ್ಕೆ ಗೌತಮ್‌ ಮನು ಛಾಯಾಗ್ರಹಣ ಹಾಗೂ ರವಿಚಂದ್ರನ್‌, ಗಣೇಶ್‌ ಸಂಕಲನ ಕಾರ್ಯವಿದೆ. ಈಗಾಗಲೇ ಚಿತ್ರಕ್ಕೆ ಮಡಿಕೇರಿ ಹಾಗೂ ವಿರಾಜಪೇಟೆ ಸುತ್ತಮುತ್ತ ಸುಮಾರು ನಲವತ್ತು ದಿನಗಳ ಕಾಲ ಈ ಚಿತ್ರ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಸದ್ಯಕ್ಕೆ ಚಿತ್ರೀಕರಣಕ್ಕೆ ಬ್ರೇಕ್‌ ನೀಡಿದೆ.

“ಸುದರ್ಶನ್‌ ಆರ್ಟ್ಸ್” ಲಾಂಛನದಲ್ಲಿ ನಂದೀಶ್‌ ಎಂ.ಸಿ ಗೌಡ ಹಾಗೂ ಜತಿನ್‌ ಜಿ. ಪಟೇಲ್‌ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ ಹಿಂದಿನ ಸುಮಧುರ ಹಾಡುಗಳ ಮೊದಲ ಸಾಲು ಸಾಕಷ್ಟು ಚಿತ್ರದ ಶೀರ್ಷಿಕೆಗಳಾಗಿ ಹೊರಬರುತ್ತಿದ್ದು, ಈಗ ಅ ಸಾಲಿಗೆ ಮತ್ತೂಂದು ಚಿತ್ರದ ಹೆಸರು ಸೇರ್ಪಡೆಯಾದಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next