Advertisement

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ಯಾಂಕರ್ : ಪೆಟ್ರೋಲ್ ಸೋರಿಕೆ, ತಪ್ಪಿದ ಅನಾಹುತ

02:23 PM Sep 29, 2022 | Team Udayavani |

ಯಲ್ಲಾಪುರ : ತಾಲೂಕಿನ ರಾ.ಹೆದ್ದಾರಿ ೬೩ ರ ಅರಬೈಲ್ ಘಟ್ಟದಲ್ಲಿ ಪೆಟ್ರೋಲ್ ಟ್ಯಾಂಕರ್ ಉರುಳಿ ಬಿದ್ದು ಪೆಟ್ರೋಲ್ ಸೋರಿಕೆಯಾದ ಘಟನೆ ನಡೆದಿದೆ.

Advertisement

ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು ಚಾಲಕ ಮತ್ತು ಕ್ಲಿನರ್ ಇಬ್ಬರೂ ಪ್ರಾಣಾಪಾಯದಿಂದ ಪರಾಗಿದ್ದಾರೆ.

ಮಂಗಳೂರಿನಿಂದ ಬೀದರ್ ಗೆ ಪೆಟ್ರೋಲ್ ಸಾಗಿಸುತ್ತಿತ್ತು ಎನ್ನಲಾಗಿದೆ. ಟ್ಯಾಂಕರ್ ಉರುಳಿ ಬಿದ್ದ ಪರಿಣಾಮ ಪೆಟ್ರೋಲ್ ಸೋರಿಕೆಯಾಗಿದೆ. ಶೀಘ್ರದಲ್ಲಿ ಟ್ಯಾಂಕರ್ ನ್ನು ಮೇಲೆತ್ತಿದ ಕಾರಣ ಮುಂದಾಗುವ ಅನಾಹುತ ತಪ್ಪಿದಂತಾಗಿದೆ.

ಯಲ್ಲಾಪುರದ ಪೋಲಿಸರು ಮತ್ತು ಅಗ್ನಿಶಾಮಕದವರು ಸ್ಥಳದಲ್ಲಿ ಹಾಜರಿದ್ದು ಸುರಕ್ಷತೆಗೆ ಕ್ರಮವಹಿಸಿದ್ದಾರೆ.

ಇದನ್ನೂ ಓದಿ : ಹುಮನಾಬಾದ: ಪಿ.ಎಫ್.ಐ., ಎಸ್.ಡಿ‌‌‌.ಪಿ.ಐ.ಗೆ ಸಂಬಂಧಿಸಿದ ಮನೆ ಹಾಗೂ ಕಚೇರಿ ಮೇಲೆ ದಾಳಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next