ಯಲ್ಲಾಪುರ: ತಾಲೂಕಿನಲ್ಲಿ ಜುಲೈನಲ್ಲಿಅತಿವೃಷ್ಟಿಯಿಂದ ಉಂಟಾದ ಹಾನಿಯನ್ನು ಕೇಂದ್ರಮಂತ್ರಾಲಯದ ಅಧಿಕಾರಿಗಳ ತಂಡ ಸೋಮವಾರಪರಿಶೀಲನೆ ನಡೆಸಿತು.
ತಳಕೆಬೈಲ್ ಬಳಿ ಗುಡ್ಡಹಾಗೂ ರಸ್ತೆ ಕುಸಿತ, ಕಳಚೆಯಲ್ಲಿ ಭೂ ಕುಸಿತ,ತೋಟ-ಮನೆಗಳಿಗೆ ಉಂಟಾದ ಹಾನಿ, ಅರಬೈಲ್‌ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿತ ಹಾಗೂನದಿ ಪ್ರವಾಹಕ್ಕೆ ಗುಳ್ಳಾಪುರದಲ್ಲಿ ಸೇತುವ ಕೊಚ್ಚಿಹೋಗಿರುವುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಎಸ್.ವಿಜಯಕುಮಾರ, ಗ್ರಾಮೀಣಾಭಿವೃದ್ಧಿಸಚಿವಾಲಯದಕೈಲಾಸಕುಮಾರಶುಕ್ಲಾಹಾಗೂರಾಜ್ಯಸರ್ಕಾರದ ಕೆಎಸ್‌ಡಿಎಂಎ ಸಲಹೆಗಾರ ಅಧಿಕಾರಿಜಿ.ಎಸ್. ಶ್ರೀನಿವಾಸ ರೆಡ್ಡಿ ಅವರನ್ನೊಳಗೊಂಡಅಧಿಕಾರಿಗಳ ತಂಡಕ್ಕೆ ಎಪಿಎಂಸಿ ಅಡಕೆ ಭವನದಲ್ಲಿನಡೆದ ಸಭೆಯಲ್ಲಿ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಉಂಟಾದ ಹಾನಿಗಳ ಬಗ್ಗೆ ಮಾಹಿತಿ ನೀಡಲಾಯಿತು.ರಸ್ತೆ, ಸೇತುವೆ, ಮನೆ, ಜಮೀನು, ತೋಟ, ಗದ್ದೆ,ಸರಕಾರಿ ಕಟ್ಟಡ, ಗ್ರಾಮೀಣ ರಸ್ತೆಗಳು ಹಾಳಗಿರುವಪರಿಸ್ಥಿತಿ ಮತ್ತು ಆ ಸಂದರ್ಭದಲ್ಲಿ ಮನೆಗಳುಜಲವೃತಗೊಂಡಿರುವ ದೃಶ್ಯ, ಹೆದ್ದಾರಿ ಕುಸಿತತೆರವು ಕಾರ್ಯಾಚರಣೆ, ಅತಿವೃಷ್ಟಿ ಸಂದರ್ಭದಲ್ಲಿ ಜಿಲ್ಲಾಡಳಿತ ಕೈಗೊಂಡ ರಕ್ಷಣಾ ಕಾರ್ಯಾಚರಣೆಕುರಿತ ದೃಶ್ಯಗಳನ್ನು ವಿಡಿಯೋ ಚಿತ್ರದ ಮೂಲಕ ಜಿಲ್ಲಾಧಿಕಾರಿ ಮುಲ್ಲೆ ç ಮುಗಿಲನ್ ಮನವರಿಕೆ ಮಾಡಿದರು.
ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಒಟ್ಟುಸುಮಾರು 863ಕೋಟಿ ರೂ. ಹಾನಿಯಾಗಿದ್ದು, ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಅನ್ವಯಕೇವಲ 56.25 ಕೋಟಿ ರೂ. ಪರಿಹಾರ ವಿತರಿಸಲುಮಾತ್ರ ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಯಲ್ಲಾಪುರ,ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ,ಕುಮಟಾ, ಹಳಿಯಾಳ, ಮುಂಡಗೋಡ ಭಾಗದಲ್ಲಿಅಪಾರ ಹಾನಿಯಾಗಿದೆ ಎಂದರು.ಎಲ್ಲಾ ಮಾಹಿತಿಗಳನ್ನೊಳಗೊಂಡ ಚಿತ್ರಣವನ್ನುಜಿಲ್ಲಾಧಿಕಾರಿಗಳ ತಂಡ ವೀಕ್ಷಣೆಗೆ ಬಂದ ತಂಡಕ್ಕೆಸಲ್ಲಿಸಿತು.
ಇದೇ ಸಂದರ್ಭಕ್ಕೆ ಅಧಿಕಾರಿಗಳ ಸಭೆಗೆಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮಹೆಬ್ಟಾರ ಮಾತನಾಡಿ, ಜಿಲ್ಲೆಯಲ್ಲಿ ಮಳೆಯಿಂದಆದ ಹಾನಿಯನ್ನು ಸಂಪೂರ್ಣ ಪರಿಶೀಲಿಸಿಕೇಂದ್ರ ಸರ್ಕಾರಕ್ಕೆ ವರದಿ ನೀಡುವ ಮೂಲಕಜನರು ಬದುಕು ಕಟ್ಟಿಕೊಳ್ಳಲು ವಿಶೇಷ ಆಸ್ಥೆವಹಿಸಿಪರಿಹಾರ, ಅನುದಾನ ಬರುವಂತೆ ಮಾಡಬೇಕೆಂದುತಂಡದವರಲ್ಲಿ ವಿನಂತಿಸಿದರು.
ಕೇಂದ್ರದಅಧಿಕಾರಿಗಳನ್ನು ಸಚಿವರು ಗೌರವಿಸಿದರು.ಅಪರಜಿಲ್ಲಾಧಿಕಾರಿಎಚ್.ಕೆ.ಕೃಷ್ಣಮೂರ್ತಿ,ಜಿ.ಪಂಸಿಇಒ ಪ್ರಿಯಂಕಾ ಎಂ., ಶಿರಸಿ ಉಪವಿಭಾಗಾಧಿಕಾರಿಆಕೃತಿ ಬನ್ಸಾಲ್, ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್‌ತೋಟಗಾರಿಕೆ, ಕೃಷಿ, ಜಿಪಂ ಸೇರಿದಂತೆ ವಿವಿಧಸ §ರದಅಧಿಕಾರಿಗಳು ಹಾಜರಿದ್ದರು.