Advertisement
ಹೌದು, ಸುಂದರ ಪ್ರಕೃತಿ ರಮ್ಯತಾಣದ ಮಧ್ಯೆ ಇರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಪ್ರಸ್ತುತ ಸ್ಥಿತಿಗೆ ಈ ಅಂಶಗಳುಕನ್ನಡಿ ಹಿಡಿದಂತಿವೆ. ಉಪಚುನಾವಣೆ ರಂಗೇರಿರುವ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಆಧಾರದಲ್ಲಿ ಚುನಾವಣೆನಡೆಯುತ್ತಿಲ್ಲ. ಆದರೆ ಕ್ಷೇತ್ರದಲ್ಲಿನ ಅನೇಕ ಅಭಿವೃದ್ಧಿ ಕಾರ್ಯಗಳು ಅರ್ಧಕ್ಕೆ ನಿಂತಿದ್ದು ಒಂದೆಡೆಯಾದರೆ,ಶಾಶ್ವತ ಕಾಮಗಾರಿಗಳು ಮತ್ತು ಸಮಸ್ಯೆಗಳ ಪರಿಹಾರಕ್ಕೆ ರೂಪಿಸಿದ ಯೋಜನೆಗಳು ಪ್ರಸ್ತಾವನೆಯಲ್ಲಿಯೇ ಕುಳಿತಿವೆ.
Related Articles
Advertisement
ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ 63 ಹಾದು ಹೋಗಿದ್ದು, ಇದರ ಸುತ್ತಲಿನ ಹಳ್ಳಿಗಳಿಗೆ ಮಾತ್ರ ರಸ್ತೆ ಸಾರಿಗೆ ಕೊಂಚ ಸರಳ ಬಿಟ್ಟರೆ ಜಿಲ್ಲಾ ಮತ್ತು ತಾಲೂಕುರಸ್ತೆಗಳು ಹಾಗೂ ಅವುಗಳಿಂದ ಹಳ್ಳಿ ಮನೆಗಳನ್ನು ಸಂಪರ್ಕಿಸುವ ರಸ್ತೆಗಳ ಸ್ಥಿತಿ ಅಯೋಮಯವಾಗಿ ಹೋಗಿದೆ. ವಿ.ಎಸ್.ಪಾಟೀಲ್ ಶಾಸಕರಾಗಿದ್ದಾಗ ಹಳ್ಳಿ ಮನೆ ರಸ್ತೆಗಳು ಸಾಕಷ್ಟು ಅಭಿವೃದ್ಧಿ ಕಂಡಿದ್ದು, ನಂತರ ಮತ್ತೆ ಹಳ್ಳಿ ಮನೆ ರಸ್ತೆಗಳನ್ನು ಸರ್ಕಾರ ತಿರುಗಿ ನೋಡಿಲ್ಲಎನ್ನುತ್ತಾರೆ ದರ್ಬೆಮನೆ ನಿವಾಸಿ ಶಶಿಧರ್ ಹೆಗಡೆ.ನದಿ ಇದ್ದರೂ ಟ್ಯಾಂಕರ್ ನೀರು: ಯಲ್ಲಾಪುರ ಕ್ಷೇತ್ರದಲ್ಲಿ ಬೇಡ್ತಿ ನದಿಯಾಗಿ ಹರಿಯುತ್ತದೆ. ಕಾಳಿ ನದಿಯ ಉಪಹಳ್ಳಗಳು ಹರಿಯುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿವರ್ಷ ಧೋ ಎಂದು ಮಳೆ ಸುರಿಯುತ್ತದೆ.
ಈ ಕ್ಷೇತ್ರದಿಂದಲೇ ಟಿಎಂಸಿಗಟ್ಟಲೇ ನೀರು ಸುಖಾ ಸುಮ್ಮನೆ ಹರಿದು ಮುಂದೆ ಸಾಗುತ್ತದೆ. ಆದರೆ ಈ ನೀರನ್ನು ಪರಿಪೂರ್ಣವಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಕ್ಷೇತ್ರದ ಸವಣಗಿರಿ, ಮಂಚಿಕೇರಿ, ಗಂಗೆಮನೆ, ಇಟ್ಟದ ಮನೆ, ಉತ್ಕಂಡ, ಕಾಳಿಮನೆ, ಕೊಣ್ಣಗೇರಿ, ಮೊಟ್ಟೆಗದ್ದೆ ಸೇರಿದಂತೆ 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬೇಸಿಗೆಯಲ್ಲಿ ಬಾವಿಗಳು ಬತ್ತಿ ಹೋಗುತ್ತಿದ್ದು,ಅವರೆಲ್ಲ ಕುಡಿಯುವುದಕ್ಕೆ ಟ್ಯಾಂಕರ್ ನೀರನ್ನು ಕೊಂಡು ತರಬೇಕಿದೆ. ಕಾಡಿನ ಮಧ್ಯದ ಊರಿನಲ್ಲಿ ಜನರು ಟ್ಯಾಂಕರ್ ನೀರು ಕೊಳ್ಳುವ ಸ್ಥಿತಿ ಇರುವುದು ಕ್ಷೇತ್ರದ ಅಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದೆ.
ಪ್ರವಾಸಿ ತಾಣಗಳಾಗಿಲ್ಲ ಅಭಿವೃದ್ಧಿ: ಯಲ್ಲಾಪುರ ಅಂದಾಕ್ಷಣ ನೆನಪಿಗೆ ಬರುವುದು ಮಾಗೋಡು ಮತ್ತು ಸಾತೋಡಿ ಜಲಪಾತಗಳು. ಈ ಎರಡೂ ಜಲಪಾತಗಳಿಗೆ ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರುಭೇಟಿ ನೀಡುತ್ತಾರೆ. ಆದರೆ ಈ ಜಲಪಾತಕ್ಕೆ ಸಂಪರ್ಕಕಲ್ಪಿಸುವ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳದ್ದು ದೊಡ್ಡ ಪುರಾಣವೇ ಆಗುತ್ತದೆ. ರಸ್ತೆ ತಿರುವುಗಳಲ್ಲಿಸೂಚನಾ ಫಲಕಗಳಿಲ್ಲ, ರಸ್ತೆಬದಿ ಚಾಚಿಕೊಂಡಿರುವ ಗಿಡಗಂಟೆಗಳು ಪ್ರವಾಸಿಗರಿಗೆ ಕಿರಿಕಿರಿಯನ್ನುಂಟುಮಾಡುತ್ತವೆ. ಮಾಗೋಡು ಜಲಪಾತದ ರಸ್ತೆಯಂತೂ ಸಂಪೂರ್ಣ ಹದಗೆಟ್ಟಿದ್ದು, ವಾಹನಗಳಲ್ಲಿ ಸಾಗುವವರು ಆತಂಕದಲ್ಲಿ ಪ್ರಯಾಣಿಸುವಂತಾಗಿದೆ. ಜೇನುಕಲ್ಲಗುಡ್ಡದ ರಸ್ತೆಯೂ ಇದಕ್ಕೆ ಹೊರತಾಗಿಲ್ಲ, ಇಲ್ಲಿಯೂ ಅಭಿವೃದ್ಧಿ ಕಾರ್ಯಗಳು ಆಗಿಲ್ಲ.
-ಬಸವರಾಜ ಹೊಂಗಲ್