Advertisement

Yallapur;ಚುನಾವಣ ಸಿಬಂದಿಗಳ ತರಬೇತಿಯಲ್ಲಿ ಗದ್ದಲದ ವಾತಾವರಣ

11:03 PM May 02, 2024 | Team Udayavani |

ಯಲ್ಲಾಪುರ: ಲೋಕಸಭಾ ಚುನಾವಣೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಸಿಬಂದಿಗಳಿಗೆ ಯಲ್ಲಾಪುರ ತಾಲೂಕಿನ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಊಟೋಪಚಾರದಲ್ಲಿ ಅವ್ಯವಸ್ಥೆಯ ಆಗರವಾಗಿ ಗೊಂದಲವೇರ್ಪಟ್ಟು ಗದ್ದಲದ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ.

Advertisement

ಸುಮಾರು ಒಂದುವರೆ ಸಾವಿರದಷ್ಟು ಸಿಬಂದಿಗಳಿಗೆ ಇಲ್ಲಿ ತರಬೇತಿ ವ್ಯವಸ್ಥೆಗೊಳಿಸಲಾಗಿತ್ತು. ಬೆಳಗ್ಗೆ ನೀಡಿದ ರವಾ ಉಪ್ಪಿಟ್ಟು ಕೂಡಾ ಸರಿಯಾಗಿರಲಿಲ್ಲವಾದರೂ ಸುಮ್ಮನಿದ್ದರು.ಆದರೆ ಮಧ್ಯಾಹ್ನದ ಊಟವೂ ಕಳಪೆಯಾಗಿತ್ತು.ಅಲ್ಲದೇ ಊಟ ಅರ್ಧಕ್ಕೆ ಕಡಿಮೆ ಬಿದ್ದು ಕೋಲಾಹಲವೇರ್ಪಟ್ಟಿತು.ಸುಡುಬಿಸಿಲು ಸೆಕೆಯ ಬೇಗೆ ಒಂದು ಕಡೆ,ಹಸಿವು ಇನ್ನೊಂದು ಕಡೆ.ಜತೆಗೆ ತಾಟು ಹಿಡಿದು ಬಂದವನಿಗೆ ಅನ್ನಖಾಲಿಯಾಗಿ ಗೋಗೆರೆಯುವಂತಾಯ್ತು.

ಅನ್ನ ತಯಾರಿ ಆಗಿ ಬರುವಷ್ಟು ಹೊತ್ತು ನಿಂತುಕೊಳ್ಳುವಷ್ಡು ತಾಳ್ಮೆ ಕೂಡಾ ಹೊರಟುಹೋಗಿತ್ತು.ಗದ್ದಲ ತಾರಕಕ್ಕೇರಿದಾಗ ಸಿಬಂದಿಗಳನ್ನು ಬಸ್ಸಿನ ಮೂಲಕ ವಿವಿಧ ಹೊಟೇಲುಗಳಿಗೆ ಕಳಿಸಿಕೊಡುವ ವ್ಯವಸ್ಥೆ ಮಾಡಿದರು.ಆಗಲೆ ಎರಡೂವರೆ ಮೂರು ಗಂಟೆಯಾಗಿ ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ತಮಗಾದ ತೊಂದರೆಯನ್ನು ಅಲ್ಲೇ ಪರಸ್ಪರ ತಮ್ಮವರಲ್ಲಿ ಹೇಳಿಕೊಂಡರು.ತರಬೇತಿಗೆ ಬರುವವರ ಸಂಖ್ಯೆ ನಿಶ್ಚಿತವಾಗಿ ಸಿಗುವಾಗ ಈ ತರಹನಾಗಿ ಊಟ ಕಡಿಮೆ ಬೀಳುವಂತಾದದ್ದು ಸಖೇಧಾಶ್ಚರ್ಯ ಸಂಗತಿ.ಅಂತೂ ತರಬೇತಿಗೆ ಬಂದ ಕೆಲ ಸಿಬಂದಿಗಳ ಮುಖ ಬಾಡಿ ಸಪ್ಪೆಯಾಗಿತ್ತು.ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ ಸ್ಥಳದಲ್ಲಿ ಇದ್ದು ಈ ಪರಿಸ್ಥಿತಿ ನಿಯಂತ್ರಣವಾಗಿದೆ. ಸಿಬ್ಬಂದಿಗಳ ಹಿಡಿಶಾಪ ಮಾತ್ರ ಮುಂದುವರೆದಿತ್ತು.

ಸ್ಥಳಕ್ಕೆ ಬಂದ ಸಿಬಂದಿಗೆ ಊಟೋಪಚಾರ ಅಲ್ಪೋಪಹಾರದ ವ್ಯವಸ್ಥೆಯನ್ನು ಚುನಾವಣ ಅಯೋಗದ ಅಧಿಕಾರಿಗಳು ನಿರ್ವಹಿಸಿದ್ದರು.ಜಿಲ್ಲಾಧಿಕಾರಿ ಹಂತದಲ್ಲಿ ಇದನ್ನು ಟೆಂಡರ್ ಕರೆಯಲಾಗಿತ್ತು. ಕುಂದಾಪುರದವರೊಬ್ಬರಿಗೆ ಗುತ್ತಿಗೆ ನೀಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next